Home
ಸುದ್ದಿಜಾಲ

ಇಂದು ರಿಯಲ್‌ಮಿ GT ನಿಯೋ 3 ಫೋನ್‌ ಫಸ್ಟ್‌ ಸೇಲ್‌!..ಹೈ ಎಂಡ್‌ ಫೀಚರ್ಸ್‌!

ರಿಯಲ್‌ಮಿ ಮೊಬೈಲ್ ಸಂಸ್ಥೆಯ ತನ್ನ ಬಹುನಿರೀಕ್ಷಿತ ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಆಗಿ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಮೇ 4) ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಹಾಗೂ ಅಧಿಕೃತ ರಿಯಲ್‌ ಮಿ ತಾಣದ ಮೂಲಕ ಮೊದಲ ಮಾರಾಟ ಆರಂಭಿಸಲಿದೆ. ಇನ್ನು ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್‌ ಆರಂಭಿಕ ಬೆಲೆಯು 36,999ರೂ. ಆಗಿದೆ.

ಇಂದು ರಿಯಲ್‌ಮಿ GT ನಿಯೋ 3 ಫೋನ್‌ ಫಸ್ಟ್‌ ಸೇಲ್‌!..ಹೈ ಎಂಡ್‌ ಫೀಚರ್ಸ್‌!

ಹೌದು, ರಿಯಲ್‌ ಮಿ ಕಂಪನಿಯ ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನಿನ ಮೊದಲ ಮಾರಾಟ ಇಂದು ನಡೆಯಲಿದೆ. ಈ ಸ್ಮಾರ್ಟ್‌ಫೋನ್ ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯ ಇದ್ದು, ಕ್ರಮವಾಗಿ 4,500mAh ಮತ್ತು 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ ಮೂರು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 8 GB RAM + 128 GB, 12 GB + 256 GB ಮತ್ತು 12GB + 256GB ಸ್ಟೋರೇಜ್‌ ಆಯ್ಕೆಗಳಾಗಿವೆ. ಇನ್ನುಳಿದಂತೆ ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನಿನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ರಚನೆ
ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್‌ 1,080x2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು 1,000Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ HDR10+ ಮತ್ತು DC ಡಿಮ್ಮಿಂಗ್‌ ಅನ್ನು ಬೆಂಬಲಿಸಲಿದೆ.

ಪ್ರೊಸೆಸರ್‌ ಯಾವುದು?
ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 5G SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 12 ನಲ್ಲಿ ರಿಯಲ್‌ಮಿ UI 3.0 ಜೊತೆಗೆ ರನ್ ಆಗುತ್ತದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಸ್ಟೇನ್‌ಲೆಸ್ ಸ್ಟೀಲ್ ಆವಿ ಕೂಲಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಇಂದು ರಿಯಲ್‌ಮಿ GT ನಿಯೋ 3 ಫೋನ್‌ ಫಸ್ಟ್‌ ಸೇಲ್‌!..ಹೈ ಎಂಡ್‌ ಫೀಚರ್ಸ್‌!

ಕ್ಯಾಮೆರಾ ವಿಶೇಷ
ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಸನ್ಸಾರ್‌ ಬೆಂಬಲಿಸಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಜೊತೆಗೆ 119-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ S5K3P9 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್‌ ಎರಡು ಬ್ಯಾಟರಿ ಮತ್ತು ಚಾರ್ಜಿಂಗ್ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ 4,500mAh ಸಾಮರ್ಥ್ಯದ ಬ್ಯಾಟರಿ 150W ಅಲ್ಟ್ರಾಡಾರ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿಯ 80W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS, NFC ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್‌ 8GB RAM + 128GB ಸ್ಟೋರೇಜ್ ಮಾದರಿಗೆ 36,999ರೂ.ಬೆಲೆ ಹೊಂದಿದೆ. ಆದರೆ 8GB + 256GB ರೂಪಾಂತರದ ಬೆಲೆ 38,999ರೂ.ಆಗಿದೆ. ಹಾಗೆಯೇ ರಿಯಲ್‌ಮಿ GT ನಿಯೋ 3 ಫೋನ್‌ 150W ರೂಪಾಂತರದ 12GB + 256GB ಮಾದರಿಗೆ 42,999ರೂ.ಬೆಲೆ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಆಸ್ಫಾಲ್ಟ್ ಬ್ಲ್ಯಾಕ್, ನೈಟ್ರೋ ಬ್ಲೂ ಮತ್ತು ಸ್ಪ್ರಿಂಟ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

Best Mobiles in India

English summary
Realme GT Neo 3 First Sale Today via Flipkart: Price and Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+