Realme: ರಿಯಲ್‌ಮಿಯ ಈ ಫೋನ್‌ಗಿದೆ ಬೊಂಬಾಟ್ ಆಫರ್! 12GB RAM... 50MP ಕ್ಯಾಮೆರಾ
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphone) ಸಾಮಾನ್ಯವಾಗಿ ಬೆಲೆಗಿಂತಲೂ ಹೆಚ್ಚಿ ಫೀಚರ್ಸ್ ಆಯ್ಕೆ ಪಡೆದುಕೊಂಡಿರುತ್ತವೆ. ಈ ಕಾರಣಕ್ಕೆ ಈ ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ರಿಯಲ್‌ಮಿಯ ಬಹುಬೇಡಿಕೆಯ ಫೋನ್‌ವೊಂದನ್ನು ಆನ್‌ಲೈನ್‌ನಲ್ಲಿ ಆಫರ್ ನೀಡಲಾಗಿದೆ.
ಹೌದು, ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್‌ಗೆ (Realme GT Neo 3 Smartphone) ಇದೀಗ ಉತ್ತಮ ಆಫರ್ ನೀಡಲಾಗಿದೆ. ಈ ಮೂಲಕ ನೀವೂ ಈ ದುಬಾರಿ ಬೆಲೆಯ ಫೋನ್ ಅನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 12GB RAM ಆಯ್ಕೆ ಹಾಗೂ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆಯುವ ಮೂಲಕ ಉತ್ತಮ ಫೋನ್ ಎನಿಸಿದೆ. ಹಾಗಿದ್ರೆ, ಈ ಫೋನ್‌ನ ಆಫರ್ ಬೆಲೆ ವಿವರ ಹಾಗೂ ಪ್ರಮುಖ ಫೀಚರ್ಸ್ ಏನು ಅನ್ನೋದನ್ನ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್ ಆಫರ್ ವಿವರ: ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 45,999 ರೂ.ಗಳಾಗಿದೆ. ಆದರೆ, ನೀವು 25,600 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಯಾಕೆಂದರೆ ಅಮೆಜಾನ್‌ನಲ್ಲಿ ಈ ಫೋನ್‌ಗೆ 44% ರಿಯಾಯಿತಿ ನೀಡಲಾಗಿದೆ. ಇದರೊಂದಿಗೆ ವಿನಿಮಯ ಆಫರ್ ಸಹ ಇದ್ದು, ಈ ಮೂಲಕ ನೀವು 23,000 ರೂ.ವರೆಗೂ ಹಣ ಉಳಿತಾಯ ಮಾಡಬಹುದಾಗಿದೆ.
ಇನ್ನು ಈ ಫೋನ್ ಖರೀದಿ ವೇಳೆ ನೀವು ಒನ್‌ಕಾರ್ಡ್ ಡೆಬಿಟ್ ಕಾರ್ಡ್ ಇಎಮ್‌ಐ ಮೂಲಕ ಖರೀದಿ ಮಾಡಿದ್ರೆ 1200 ರೂ.ಗಳ ತ್ವರಿತ ರಿಯಾಯಿತಿ, ಒನ್‌ಕಾರ್ಡ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 250 ರೂ.ಗಳ ಡಿಸ್ಕೌಂಟ್ ಸಿಗಲಿದೆ. ಈ ಮೂಲಕ ನೀವು ಕೈಗೆಟಕುವ ದರದಲ್ಲಿ ಜೊತೆಗೆ ಭಾರೀ ಹಣ ಉಳಿತಾಯ ಮಾಡುವ ಮೂಲಕ ಈ ಪ್ರೀಮಿಯಂ ಫೀಚರ್ಸ್ ಆಯ್ಕೆ ಇರುವ ಫೋನ್ ಖರೀದಿ ಮಾಡಬಹುದಾಗಿದೆ.

ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಫೋನ್ 6.7 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1080 x 2412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 394 ppi ಪಿಕ್ಸೆಲ್ ಸಾಂದ್ರತೆ ಮತ್ತು 20:1:9 ಆಕಾರ ಅನುಪಾತವನ್ನು ಹೊಂದಿದೆ. ಇದರೊಂದಿಗೆ ಬೆಜೆಲ್-ಫ್ರೀ ಡಿಸ್‌ಪ್ಲೆ ಇದಾಗಿದ್ದು, ಸೆಲ್ಫಿ ಕ್ಯಾಮೆರಾಕ್ಕಾಗಿ ಪಂಚ್-ಹೋಲ್ ಶೈಲಿ ಪಡೆದಿದೆ.
ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಇನ್ನು ಈ ವಿಶೇಷ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಪ್ಲಸ್ ಜನ್ 1 ಪ್ರೊಸೆಸರ್ ಬಲ ಪಡೆದಿದ್ದು, ಇದು 3.2GHz ಗರಿಷ್ಠ ಗಡಿಯಾರದ ವೇಗದೊಂದಿಗೆ ಕಾರ್ಟೆಕ್ಸ್ X2, A710 ಮತ್ತು A510 ಆರ್ಕಿಟೆಕ್ಚರ್ ಹೊಂದಿರುವ ಆಕ್ಟಾ-ಕೋರ್ ಸಿಪಿಯು ಆಗಿದೆ. ಜೊತೆಗೆ ಅಡ್ರಿನೋ 730 ಜಿಪಿಯು ಬಲ ಪಡೆದಿದ್ದು, ಅತ್ಯುತ್ತಮ ಬಳಕೆಯ ಅನುಭವವನ್ನು ನೀಡಲಿದೆ. ಇದರೊಂದಿಗೆ ಈ ಫೋನ್ 12GB RAM ಆಯ್ಕೆಯ ಮೂಲಕ ಕಾಣಿಸಿಕೊಂಡಿದೆ.

ರಿಯಲ್‌ಮಿ GT ನಿಯೋ 3 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್‌ವೈಡ್ ಆಂಗಲ್ ಮೇನ್ ಲೆನ್ಸ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಪಡೆದಿದೆ. ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ 4600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಪಡೆದಿದೆ.


Click it and Unblock the Notifications








