Realme: ರಿಯಲ್‌ಮಿ GT ನಿಯೋ 6 SE ಸ್ಮಾರ್ಟ್‌ಫೋನ್ ಲಾಂಚ್! 5500mAh ಬ್ಯಾಟರಿ... ಬೆಲೆ ಎಷ್ಟು?
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphones) ವಿಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ಹೊಸ ಹೊಸ ಅನುಭವ ನೀಡುತ್ತಿದ್ದು, ಈ ನಡುವೆ ರಿಯಲ್‌ಮಿ GT ನಿಯೋ 6 SE ಸ್ಮಾರ್ಟ್‌ಫೋನ್ (Realme GT Neo 6 SE Smartphone) ಅನ್ನು ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.
ಹೌದು, ರಿಯಲ್‌ಮಿ ಲಾಂಚ್ ಮಾಡುವ ಯಾವುದೇ ಹೊಸ ಫೋನ್ ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಕಾಣಿಸಿಕೊಳ್ಳುತ್ತದೆ. ಅದರಂತೆ ಈಗ ರಿಯಲ್‌ಮಿ GT ನಿಯೋ 6 SE ಸ್ಮಾರ್ಟ್‌ಫೋನ್ ಅನ್ನು ಘೋಷಣೆ ಮಾಡಲಾಗಿದ್ದು, ಈ ಫೋನ್ ಸ್ನಾಪ್‌ಡ್ರಾಗನ್ 7+ ಜನ್ 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿವರ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ GT ನಿಯೋ 6 SE ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.78 ಇಂಚಿನ 2772×1240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 8T LTPO ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಹಾಗೂ 6000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಅಲ್ಲದೆ 100% DCI-P3 ಬಣ್ಣದ ಹರವು, 3+1 ಪ್ಲಸ್ ಕಡಿಮೆ-ಆವರ್ತನದ ಫ್ಲಿಕರ್ ಡಿಸಿ ಮಬ್ಬಾಗಿಸುವಿಕೆ, 2160Hz ಹೈ-ಡಬ್ಲ್ಯೂಎಫ್‌ರೆನ್ಮಿಮಿಮಿ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದುಕೊಂಡಿದೆ.
ರಿಯಲ್‌ಮಿ GT ನಿಯೋ 6 SE ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 7+ ಜನ್ 3 4nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 732 ಜಿಪಿಯು ಬಲ ಪಡೆದುಕೊಂಡಿದೆ. ಇದರ ಜೊತೆಗೆ 8GB/12GB / 16GB LPDDR5X RAM ಹಾಗೂ 256GB / 512GB (UFS 4.0) ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದೆ. ಹಾಗೆಯೇ ಈ ಫೋನ್ ಅಡ್ರಿನೋ 14 ಓಎಸ್ ಅನ್ನು ರನ್ ಮಾಡಲಿದೆ.

ರಿಯಲ್‌ಮಿ GT ನಿಯೋ 6 SE ಕ್ಯಾಮೆರಾ ರಚನೆ: ಈ ಫೋನ್ ಸೋನಿ IMX882 ಸೆನ್ಸರ್‌ನೊಂದಿಗೆ 50 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 8 ಮೆಗಾಪಿಕ್ಸೆಲ್ IMX355 112° ಅಲ್ಟ್ರಾ-ವೈಡ್ ಕ್ಯಾಮರಾ ಜೊತೆಗೆ f/2.2 ಅಪರ್ಚರ್ ಸೆನ್ಸರ್ ಅನ್ನು ಕಾಣಬಹುದಾಗಿದೆ. ಇದರ ಜೊತೆಗೆ ಸೋನಿ IMX615 ಸೆನ್ಸರ್‌ನೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಇದೆ.
ರಿಯಲ್‌ಮಿ GT ನಿಯೋ 6 SE ಬ್ಯಾಟರಿ ಹಾಗೂ ಇತರೆ: ಈ ಫೋನ್ 5500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 100W ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರ ಜೊತೆಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಧೂಳು ಮತ್ತು ನೀರು ನಿರೋಧಕ (IP65) ರೇಟಿಂಗ್, ಯುಎಸ್‌ಬಿ ಟೈಪ್-ಸಿ ಆಡಿಯೋ, ಸ್ಟೀರಿಯೋ ಸ್ಪೀಕರ್, ಹೈ-ರೆಸ್ ಆಡಿಯೋ, 5G SA/ NSA, ಡ್ಯುಯಲ್ 4G VoLTE, ವೈ-ಫೈ 7 802.11 be (2.4GHz + 5GHz), ಬ್ಲೂಟೂತ್ ಆವೃತ್ತಿ 5.4, GPS, GLONASS, NFC, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದಿದೆ.

ರಿಯಲ್‌ಮಿ GT ನಿಯೋ 6 SE ಬೆಲೆ ಹಾಗೂ ಲಭ್ಯತೆ: ಈ ಫೋನ್ 8GB+256GB - 1799 ಯುವಾನ್ (20,730 ರೂ.ಗಳು), 12GB+256GB - 1999 ಯುವಾನ್ (23,035 ರೂ.ಗಳು), 16GB+256GB- 2199 ಯುವಾನ್ (25,830ರೂ.ಗಳು) 16GB+512GB- 2499 ಯುವಾನ್ (29,355 ರೂ.ಗಳು) ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್
ಏಪ್ರಿಲ್ 17 ರಿಂದ ಚೀನಾದಲ್ಲಿ ಸೇಲ್‌ಗೆ ಲಭ್ಯ ಇದೆ.


Click it and Unblock the Notifications








