Realme: ಶೀಘ್ರದಲ್ಲೇ ರಿಯಲ್‌ಮಿ GT ನಿಯೋ 6 ಸ್ಮಾರ್ಟ್‌ಫೋನ್! ಫಾಸ್ಟ್ ಚಾರ್ಜಿಂಗ್ ಬೆಂಬಲ...
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphones) ವಿಶೇಷ ಫೀಚರ್ಸ್ ಆಯ್ಕೆಯ ಮೂಲಕ ಅಗ್ಗದ ದರದಲ್ಲಿ ಉತ್ತಮ ಫೀಚರ್ಸ್ ಆಯ್ಕೆ ನೀಡುತ್ತವೆ. ಅದರಂತೆ ಶೀಘ್ರದಲ್ಲೇ ರಿಯಲ್‌ಮಿ GT ನಿಯೋ 6 ಸ್ಮಾರ್ಟ್‌ಫೋನ್ (Realme GT Neo 6 Smartphone) ಅನಾವರಣ ಆಗಲಿದೆ ಎಂದು ತಿಳಿದುಬಂದಿದೆ.
ಹೌದು, ಮಾರ್ಚ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನ್ 3 ಚಿಪ್‌ಸೆಟ್ ಅನ್ನು ಲಾಂಚ್ ಮಾಡಲಾಗಿದ್ದು, ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ನ ಟೋನ್-ಡೌನ್ ಆವೃತ್ತಿಯಾಗಿದೆ. ಇದು ಅಕ್ಟೋಬರ್ 2023 ರಲ್ಲಿ ಪ್ರಾರಂಭ ಆಗಿದ್ದು, ಶೀಯೋಮಿ ಸಿವಿ 4 ಪ್ರೊ (Xiaomi civi 4 Pro) ನಂತಹ ಫೋನ್‌ಗಳು 8s ಜನ್ 3 ಚಿಪ್ ಅನ್ನು ಹೊಂದಿವೆ. ಈ ಫೋನ್‌ಗಳು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಅದರಂತೆ ರಿಯಲ್‌ಮಿ GT ನಿಯೋ 6 ಚೀನಾದ ಮಾರುಕಟ್ಟೆಯಲ್ಲಿ 8s ಜನ್ 3 ಚಿಪ್‌ನೊಂದಿಗೆ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ ಎನ್ನಲಾಗಿದೆ.

ರಿಯಲ್‌ಮಿ GT ನಿಯೋ 6 ಫೋನ್: ವಿಶ್ವಾಸಾರ್ಹ ಲೀಕರ್ ಡಿಜಿಟಲ್ ಚಾಟ್ ಸ್ಟೇಷನ್ ಪ್ರಕಾರ, ಮುಂಬರುವ ರಿಯಲ್‌ಮಿ GT ನಿಯೋ 6 8s ಜನ್ 3 ಚಿಪ್ ಅನ್ನು ಒಳಗೊಂಡಿರುವ ಫೋನ್‌ಗಳಲ್ಲಿ 100 ವ್ಯಾಟ್‌ಗಳ ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಈ ಮಾದರಿಯಲ್ಲಿ ಇಷ್ಟು ವಿಶೇಷ ಫೀಚರ್ಸ್ ಆಯ್ಕೆ ಪಡೆದಿರುವ ಫೋನ್ ಇದಾಗಿರಲಿದೆ.
ಇನ್ನು ಸಿವಿ 4 ಪ್ರೊ ಸ್ಮಾರ್ಟ್‌ಫೋನ್ 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ರೆಡ್ಮಿ ಟರ್ಬೋ 3 ಫೋನ್ 90W ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದರ ಜೊತೆಗೆ Z9 ಟರ್ಬೊ ಬೃಹತ್ 6,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 80W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಚೀನಾದಲ್ಲಿ 3C ಪ್ರಾಧಿಕಾರವು ಇತ್ತೀಚೆಗೆ RMX3852 ಮಾದರಿ ಸಂಖ್ಯೆಯೊಂದಿಗೆ ರಿಯಲ್‌ಮಿ ಫೋನ್ ಅನ್ನು ಅನುಮೋದಿಸಿದೆ. ಈ ಫೋನ್ 121W ವೇಗದ ಚಾರ್ಜರ್‌ನೊಂದಿಗೆ ಗುರುತಿಸಲ್ಪಟ್ಟಿದೆ.
ರಿಯಲ್‌ಮಿ GT ನಿಯೋ 6 ಇತ್ತೀಚೆಗೆ ಚೀನಾದಲ್ಲಿ ಪ್ರಾರಂಭವಾದ ಸ್ನಾಪ್‌ಡ್ರಾಗನ್ 7+ ಜನ್ 3 ಚಾಲಿತ GT ನಿಯೋ 6 SE ಗೆ ಹೋಲುತ್ತದೆ ಎಂದು ಲೀಕ್ ಮಾಹಿತಿಯಲ್ಲಿ ಉಲ್ಲೇಖ ಮಡಲಾಗಿದೆ. ಆದ್ದರಿಂದ, ಜಿಟಿ ನಿಯೋ 6 ಫೋನ್ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುವ ಸಾಧ್ಯತೆಯಿದೆ ಮತ್ತು 121W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇದರೊಂದಿಗೆ ಜಿಟಿ ನಿಯೋ 6 ಇತರ ವಿಭಾಗಗಳಲ್ಲಿನ ಎಸ್‌ಇ ವೇರಿಯಂಟ್‌ನಲ್ಲಿಯೇ ಇರುವ ಸಾಧ್ಯತೆಯಿದೆ.

ರಿಯಲ್‌ಮಿ GT ನಿಯೋ 6 SE ಸ್ಮಾರ್ಟ್‌ಫೋನ್ 6.78 ಇಂಚಿನ LTPO OLED ಡಿಸ್‌ಪ್ಲೇಯನ್ನು ಹೊಂದಿದ್ದು, 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಇದರ ಜೊತೆಗೆ ಸ್ನಾಪ್‌ಡ್ರಾಗನ್ 7+ ಜನ್ 3 ಪ್ರೊಸೆಸರ್ ಬಲ ಪಡೆದಿದ್ದು, 16 GB ವರೆಗೆ RAM ಮತ್ತು 512 GB ವರೆಗಿನ UFS 4.0 ಇಂಟರ್ ಸ್ಟೋರೇಜ್ ಬೆಂಬಲ ಪಡೆದಿದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಆಯ್ಕೆಯೊಂದಿಗೆ 8 ಮೆಗಾಪಿಕ್ಸೆಲ್ (ಅಲ್ಟ್ರಾ-ವೈಡ್) ಡ್ಯುಯಲ್ ಕ್ಯಾಮೆರಾ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ P1 ಪ್ರೊ ಸೇಲ್: ರಿಯಲ್‌ಮಿ P1 ಪ್ರೊ ಸ್ಮಾರ್ಟ್‌ಫೋನ್ ಅನ್ನು ಈ ತಿಂಗಳ ಆರಂಭದಲ್ಲಿ ಲಾಂಚ್ ಮಾಡಲಾಗಿದ್ದು, ಈ ಫೋನ್ 20,000 ರೂ.ಗಳ ಬೆಲೆ ವಿಭಾಗದಲ್ಲಿ ಲಭ್ಯ ಇದೆ. ರಿಯಲ್‌ಮಿ P1 ಮತ್ತು ರಿಯಲ್‌ಮಿ P1 ಪ್ರೊ ಅನ್ನು ಭಾರತದಲ್ಲಿ ಲಾಂಚ್ ಮಾಡಲಾಗಿದ್ದು, ರಿಯಲ್‌ಮಿ P1 ಪ್ರೊ ರೆಡ್ ಲಿಮಿಟೆಡ್ ಆವೃತ್ತಿಯನ್ನು ರಿಯಲ್‌ಮಿ P1 5G ಜೊತೆಗೆ ಸೀಮಿತ ಅವಧಿಗೆ ಮಾರಾಟಕ್ಕೆ ಲಭ್ಯಗೊಳಿಸಿದೆ.


Click it and Unblock the Notifications








