Home
ಸುದ್ದಿಜಾಲ

ಅಗ್ಗದ ದರದಲ್ಲಿ ಅತ್ಯುತ್ತಮ ಫೋನ್‌ ಬೇಕೇ? ಈ ರಿಯಲ್‌ಮಿ ಫೋನ್‌ಗಿದೆ ದೊಡ್ಡ ಆಫರ್ ....

ರಿಯಲ್‌ ಕಂಪೆನಿಯ ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದ್ದು, ಈ ನಡುವೆ ಈ ಕಂಪೆನಿಯ ಹಲವಾರು ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಂತೆ ಈಗ ರಿಯಲ್‌ಮಿಯ (Realme) ಈ ಬಹುಬೇಡಿಕೆಯ ಫೋನ್‌ಗೆ ಭರ್ಜರಿ ರಿಯಾಯಿತಿ ನೀಡಲಾಗಿದೆ.

ಹೌದು, ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ರಿಯಲ್‌ಮಿ GT ನಿಯೋ ಸ್ಮಾರ್ಟ್‌ಫೋನ್‌ಗೆ (Realme GT Neo) ದೊಡ್ಡ ರಿಯಾಯಿತಿ ನೀಡಲಾಗಿದೆ. ಈ ಫೋನ್ 6.6 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 870 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಆಫರ್‌ ಬೆಲೆ ವಿವರ ತಿಳಿಯೋಣ ಬನ್ನಿ.

ಅಗ್ಗದ ದರದಲ್ಲಿ ಅತ್ಯುತ್ತಮ ಫೋನ್‌ ಬೇಕೇ? ಈ ರಿಯಲ್‌ಮಿ ಫೋನ್‌ಗಿದೆ ದೊಡ್ಡ ಆಫರ್

ರಿಯಲ್‌ಮಿ GT ನಿಯೋ ಡಿಸ್‌ಪ್ಲೇ ವಿವರ: ರಿಯಲ್‌ಮಿಯ ಈ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಕಡೆ ಕಣ್ಣಾಯಿಸುವುದಾದರೆ. ಈ ಫೋನ್ 6.6 ಇಂಚಿನ ಅಮೋಲೆಡ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 1080x2400 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 93% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬೆಜೆಲ್-ಲೆಸ್ ಡಿಸ್‌ಪ್ಲೇ ಆಯ್ಕೆ ಇದ್ದು, 397ppi ಪಿಕ್ಸೆಲ್ ಸಾಂದ್ರತೆ, 300Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 500 ನಿಟ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ವಿಶೇಷ ಎನಿಸಿದೆ.

ರಿಯಲ್‌ಮಿ GT ನಿಯೋ ಪ್ರೊಸೆಸರ್‌ ಮಾಹಿತಿ: ಈ ಫೋನ್ ಸ್ನಾಪ್‌ಡ್ರಾಗನ್ 870 ಆಕ್ಟಾ ಕೋರ್ ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಗೇಮಿಂಗ್‌ ಹಾಗೂ ಇನ್ನಿತರೆ ಕಾರ್ಯಚಟುವಟಿಕೆಯ ಉತ್ತಮ ಅನುಭವಕ್ಕಾಗಿ ಅಡ್ರಿನೋ 650 GPU ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಆಫರ್‌ ಬೆಲೆಗೆ ಲಭ್ಯ ಆಗುತ್ತಿರುವ ಫೋನ್ 12GB RAM ಆಯ್ಕೆ ಪಡೆದುಕೊಂಡಿದೆ.

ರಿಯಲ್‌ಮಿ GT ನಿಯೋ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ಎಐ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ನ ಅಲ್ಟ್ರಾ-ವೈಡ್ ಕ್ಯಾಮೆರಾ ಹಾಗೂ 2ಮೆಗಾಪಿಕ್ಸೆಲ್‌ನ ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗೆ 16 ಮೆಗಾಪಿಕ್ಸೆಲ್‌ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾವನ್ನು ನಾಚ್‌ನಲ್ಲಿ ಇರಿಸಲಾಗಿದೆ.

ರಿಯಲ್‌ಮಿ GT ನಿಯೋ ಬ್ಯಾಟರಿ ಹಾಗೂ ಇತರೆ: ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ, ಉಳಿದಂತೆ ಉತ್ತಮ ಧ್ವನಿ ಗುಣಮಟ್ಟವನ್ನು ನೀಡಲು ಫೋನ್ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದ್ದು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್‌ ಐಡೆಂಟಿಫಿಕೇಷನ್ ಆಯ್ಕೆ ಇರುವ ಬಯೋಮೆಟ್ರಿಕ್ ಸೌಲಭ್ಯ ಪಡೆದಿದೆ.

ಅಗ್ಗದ ದರದಲ್ಲಿ ಅತ್ಯುತ್ತಮ ಫೋನ್‌ ಬೇಕೇ? ಈ ರಿಯಲ್‌ಮಿ ಫೋನ್‌ಗಿದೆ ದೊಡ್ಡ ಆಫರ್

ರಿಯಲ್‌ಮಿ GT ನಿಯೋ ಬೆಲೆ ಹಾಗೂ ಆಫರ್ ವಿವರ: ಉಳಿದಂತೆ ಈ ಫೋನ್‌ನ ಪ್ರಮುಖ ವಿಚಾರಕ್ಕೆ ಬರುವುದಾದರೆ ಈ ಫೋನ್ 38,999ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವು ಇದನ್ನು ಈಗ 26,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ 30% ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ. ಇದರೊಂದಿಗೆ ನೀವು ಬ್ಯಾಂಕ್‌ ಕಾರ್ಡ್‌ಗಳು ಹಾಗೂ ವಿನಿಮಯ ಆಫರ್‌ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
The leading e-commerce site has offered a huge discount on the Realme GT Neo smartphone. The phone have a 6.6-inch AMOLED display and is powered by a Snapdragon 870 octa-core processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+