ಭಾರತಕ್ಕೆ ಮರಳಿ ಬರಲಿದೆ ರಿಯಲ್‌ಮಿ GT ಸರಣಿ! ಯಾವ ಫೋನ್ ಲಾಂಚ್ ಆಗಲಿದೆ?
ರಿಯಲ್‌ಮಿ ಫೋನ್‌ಗಳೆಂದರೆ (Realme phone) ಭಾರತೀಯರಿಗೆ ವಿಶೇಷವಾದ ಆಕರ್ಷಣೆ. ಈ ಕಾರಣಕ್ಕೆ ಯಾವುದೇ ರಿಯಲ್‌ಮಿ ಫೋನ್ ಲಾಂಚ್ ಆದರೂ ಸಹ ಅದನ್ನು ಮುಗಿಬಿದ್ದು ಖರೀದಿ ಮಾಡುವ ಗ್ರಾಹಕರು ಭಾರತದಲ್ಲಿ ಇದ್ದಾರೆ. ಈ ನಡುವೆ ರಿಯಲ್‌ಮಿ ಮತ್ತೊಂದು ಗುಡ್ ನ್ಯೂಸ್ ಅನ್ನು ಘೋಷಣೆ ಮಾಡಿದೆ.
ಹೌದು, ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಹೊಸ GT ಸರಣಿಯ (GT series) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತದೆ ಎಂದು ತಿಳಿದುಬಂದಿದೆ. ಈ ಬಗ್ಗೆ ರಿಯಲ್‌ಮಿ ಸ್ವತಃ ಎಕ್ಸ್ ನಲ್ಲಿ ಪೋಸ್ಟ್ ಮೂಲಕ ಖಚಿತಪಡಿಸಿದೆ. ಪೋಸ್ಟ್‌ನಲ್ಲಿ, ಕಂಪನಿಯು ಕಳೆದ 5 ವರ್ಷಗಳಲ್ಲಿ ದೇಶದಲ್ಲಿ 100 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ ಎಂದು ಉಲ್ಲೇಖಿಸಿದೆ. ಹಾಗಿದ್ರೆ, ಮುಂದಿನ ದಿನಗಳಲ್ಲಿ ಈ ಸರಣಿಯಲ್ಲಿ ಯಾವ ಫೋನ್ ಲಾಂಚ್ ಆಗಲಿದೆ?, ಫೀಚರ್ಸ್ ಏನಿರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

GT ಸರಣಿ: ರಿಯಲ್‌ಮಿ ಭಾರತದಲ್ಲಿ ತನ್ನ ಪ್ರಮುಖ ರಿಯಲ್‌ಮಿ GT ಸರಣಿಯನ್ನು (Realme GT Series) ಪುನಃ ಪ್ರಾರಂಭಿಸಲು ಸಿದ್ಧವಾಗಿದೆ. ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಅವರು ದೇಶದಲ್ಲಿ ಹೊಸ GT ಸರಣಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದ್ದಾರೆ. ಮುಂಬರುವ ಸ್ಮಾರ್ಟ್‌ಫೋನ್ ಕುರಿತು ರಿಯಲ್‌ಮಿ ಇನ್ನೂ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಕಂಪನಿಯು ಮೇ 9 ರಂದು ಚೀನಾದಲ್ಲಿ ರಿಯಲ್‌ಮಿ GT ನಿಯೋ 6 (Realme GT Neo 6) ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾದ ರಿಯಲ್‌ಮಿ GT ನಿಯೋ 6 SE (Realme GT Neo 6 SE) ಯ ಒಡಹುಟ್ಟಿದ ಡಿವೈಸ್ ಆಗಿರಲಿದೆ.
ಭಾರತದಲ್ಲಿ ಯಾವ ಫೋನ್ ಲಾಂಚ್ ಆಗಲಿದೆ ಅನ್ನೋದರ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯ ಇಲ್ಲವಾದರೂ ಸಹ ರಿಯಲ್‌ಮಿ GT 6 ಶೀಘ್ರದಲ್ಲೇ ಪಾದಾರ್ಪಣೆ ಮಾಡಲಿದೆ ಎಂದು ಊಹಿಸಲಾಗಿದೆ. ಪ್ರಸ್ತುತ, GT ನಿಯೋ 3 ಮತ್ತು GT 2 ಪ್ರೊ (Realme GT Neo 3 and GT 2 Pro) ಭಾರತದಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಲೈನ್‌ಅಪ್‌ನ ನಿಖರವಾದ ಮಾನಿಕರ್ ಮತ್ತು ಫೀಚರ್ಸ್ ಇನ್ನು ತಿಳಿಯಬೇಕಿದೆ.
ಹಾಗೆಯೇ ರಿಯಲ್‌ಮಿ GT ನಿಯೋ 6 ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 8T LTPO ಡಿಸ್‌ಪ್ಲೇ, IP65-ರೇಟೆಡ್ ಬಿಲ್ಡ್ ಮತ್ತು 1TB ವರೆಗೆ ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಅಲ್ಲದೆ ಇದರ ಜೊತೆಗೆ 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಇದರಲ್ಲಿ ಕಾಣಬಹುದು ಎನ್ನಲಾಗಿದೆ.

ಜೊತೆಗೆ ರಿಯಲ್‌ಮಿ GT ನಿಯೋ 6 SE ಅನ್ನು ಏಪ್ರಿಲ್‌ನಲ್ಲಿ ಚೀನಾದಲ್ಲಿ 8GB RAM + 256GB ಸ್ಟೋರೇಜ್ ವೇರಿಯಂಟ್‌ನೊಂದಿಗೆ CNY 1,699 ಬೆಲೆಯ (ಅಂದಾಜು 18,000 ರೂ.ಗಳು) ಬಿಡುಗಡೆ ಮಾಡಲಾಯಿತು. ಇದು ಸ್ನಾಪ್‌ಡ್ರಾಗನ್ 7+ ಜನ್ 3 ಪ್ರೊಸೆಸರ್‌ನಲ್ಲಿ ಕಾಣಿಸಿಕೊಂಡಿದ್ದು, 8T LTPO OLED ಡಿಸ್‌ಪ್ಲೇ ಪಡೆದಿದ್ದು, ಇದು 1.5K ರೆಸಲ್ಯೂಶನ್ ಮತ್ತು 6,000 ನಿಟ್ಸ್ ನ ಗರಿಷ್ಠ ಬ್ರೈಟ್‌ಬೆಸ್ ಬೆಂಬಲ ಪಡೆದಿದೆ. ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಮತ್ತು 100W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.


Click it and Unblock the Notifications








