Home
ಸುದ್ದಿಜಾಲ

Realme: ಸುಂಟರಗಾಳಿ ಎಬ್ಬಿಸಲಿದೆ ಹೊಸ ರಿಯಲ್‌ಮಿ ಫೋನ್! 100W ಚಾರ್ಜಿಂಗ್.. 16GB RAM

ರಿಯಲ್‌ಮಿ (Realme) ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಅನ್ನು ನೀಡುವ ಫೋನ್‌ಗಳಾಗಿವೆ. ಈ ಮೂಲಕ ಭಾರತದಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಹಾಗೂ ಬೇಡಿಕೆ ಇರುವ ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿದೆ. ಈ ನಡುವೆ ಬಹು ನಿರೀಕ್ಷಿತ ರಿಯಲ್‌ಮಿಯ ಈ ಫೋನ್‌ನ ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಹೌದು, ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ (Realme GT5 Pro Smartphone) ಅನ್ನು ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆ ನಡೆದಿದೆ. ಅಂದರೆ ಈ ಫೋನ್ ಈ ವರ್ಷದ ಕೊನೆಯಲ್ಲಿ ಲಾಂಚ್‌ ಆಗುವ ನಿರೀಕ್ಷೆಯಿದೆ. ಹಾಗೆಯೇ RMX3888 ಮಾದರಿ ಸಂಖ್ಯೆ ಹೊಂದಿರುವ ಫೋನ್ ಅನ್ನು ಚೀನಾದಲ್ಲಿ MIIT / TENNA ಪ್ರಮಾಣೀಕರಿಸಿದೆ. ಈ ಮೂಲಕ ಫೋನ್‌ನ ವಿನ್ಯಾಸ ಮತ್ತು ಸಂಪೂರ್ಣ ಫೀಚರ್ಸ್‌ ಬಹಿರಂಗವಾಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಅನ್ನು ತಿಳಿಯೋಣ ಬನ್ನಿ.

ಸುಂಟರಗಾಳಿ ಎಬ್ಬಿಸಲಿದೆ ಹೊಸ ರಿಯಲ್‌ಮಿ ಫೋನ್! 100W ಚಾರ್ಜಿಂಗ್.. 16GB RAM

ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ: ಈ ಫೋನ್ 1.5K OLED ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಈ ಮೂಲಕ ಬಳಕೆದಾರರು ಉತ್ತಮ ಸ್ಕ್ರೀನ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ 144 Hz ರಿಫ್ರೆಶ್ ರೇಟ್, 1200 ನಿಟ್ಸ್‌ ಬ್ರೈಟ್‌ನೆಸ್ ಆಯ್ಕೆ ಹಾಗೂ 240 Hz ಟಚ್ ಸ್ಯಾಂಪ್ಲಿಂಗ್ ರೇಟ್ ಆಯ್ಕೆ ಪಡೆಯಲಿದ್ದು, ಸ್ಮಾರ್ಟ್‌ಫೋನ್‌ ವಿಭಾಗದಲ್ಲೇ ವಿಶೇಷ ಎನಿಸಲಿದೆ.

ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ ಪ್ರೊಸೆಸೆರ್‌: ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ (Qualcomm Snapdragon 8 Gen 3 processor) ಬಲ ಪಡೆದುಕೊಂಡಿದ್ದು, ಈ ಮೂಲಕ ಗೇಮಿಂಗ್, ವಿಡಿಯೋ ಎಡಿಟಿಂಗ್ ಆಪ್ ಗಳನ್ನು ಈ ಫೋನ್ ನಲ್ಲಿ ಮನಬಂದಂತೆ ಬಳಕೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ (Android 14 OS) ಅನ್ನು ಈ ಫೋನ್‌ ರನ್‌ ಮಾಡಲಿದ್ದು, ಇದನ್ನು ಪಡೆದ ಮೊದಲ ಫೋನ್ ಆಗಿ ಇದು ಗುರುತಿಸಿಕೊಳ್ಳಲಿದೆ.

ಸುಂಟರಗಾಳಿ ಎಬ್ಬಿಸಲಿದೆ ಹೊಸ ರಿಯಲ್‌ಮಿ ಫೋನ್! 100W ಚಾರ್ಜಿಂಗ್.. 16GB RAM

ಇದರೊಂದಿಗೆ ಈ ಸ್ಮಾರ್ಟ್‌ಫೋನ್ ನವೀಕರಣಗಳು ಮತ್ತು ಭದ್ರತಾ ನವೀಕರಣಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದ್ದು, 12GB/16GB RAM ಮತ್ತು 256GB/512GB ಸ್ಟೋರೇಜ್ ವೇರಿಯಂಟ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಅದಾಗ್ಯೂ 24GB RAM ಅನ್ನೂ ಹೊಂದಿರಬಹುದು ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಬಗ್ಗೆ ಯಾವುದೇ ನಿಖರ ಮಾಹಿತಿ ತಿಳಿದುಬಂದಿಲ್ಲ.

ರಿಯಲ್‌ಮಿ GT5 ಪ್ರೊ ಕ್ಯಾಮೆರಾ ರಚನೆ: ಇನ್ನು ಈ ಸ್ಮಾರ್ಟ್‌ಫೋನ್ ಎಲ್ಇಡಿ ಫ್ಲ್ಯಾಶ್ ಲೈಟ್‌ ಬೆಂಬಲದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿರಲಿದೆ ಎನ್ನಲಾಗಿದೆ. ಅಂದರೆ 50 ಮೆಗಾಪಿಕ್ಸೆಲ್‌ಮುಖ್ಯ ಕ್ಯಾಮರಾ, 8 ಮೆಗಾಪಿಕ್ಸೆಲ್ 120° ಅಲ್ಟ್ರಾ-ವೈಡ್ ಕ್ಯಾಮರಾ, 50 ಮೆಗಾಪಿಕ್ಸೆಲ್‌ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮರಾ ಹಾಗೂ 32 ಮೆಗಾಪಿಕ್ಸೆಲ್‌ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ಸುಂಟರಗಾಳಿ ಎಬ್ಬಿಸಲಿದೆ ಹೊಸ ರಿಯಲ್‌ಮಿ ಫೋನ್! 100W ಚಾರ್ಜಿಂಗ್.. 16GB RAM

ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್‌ 5400mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ ಎನ್ನಲಾಗಿದ್ದು, 100W ಸೂಪರ್‌ವೂಕ್‌ ಚಾರ್ಜಿಂಗ್ ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ವಿಶೇಷವಾದ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ಸ್ ಹೊಂದಿದ್ದು, ವೈ-ಫೈ 6, ಎನ್‌ಎಫ್‌ಸಿ, ಜಿಪಿಎಸ್‌ ಮತ್ತು ಬ್ಲೂಟೂತ್ 5.2 ಸಂಪರ್ಕ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂದು ಲೀಕ್‌ ಮಾಹಿತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗೆಯೇ ನವೆಂಬರ್‌ನಲ್ಲಿ ಚೀನಾದಲ್ಲಿ ಈ ಫೋನ್‌ ಕಾಣಿಸಿಕೊಳ್ಳಲಿದೆ.

Best Mobiles in India

English summary
Realme GT5 Pro Smartphone is all set to launch. That means this phone is expected to be launched later this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+