ಕಡಿಮೆ ಬೆಲೆಗೆ 'ರಿಯಲ್ ಮಿ' ಸ್ಮಾರ್ಟ್‌ಫೋನ್ ಆಕ್ಸಸರಿಸ್ ಬಿಡುಗಡೆ!
ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿ 'ರಿಯಲ್ ಮಿ' ಈಗಾಗಲೇ ತನ್ನ ವಿವಿಧ ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಂದ ಭಾರತೀಯ ಗ್ರಾಹಕರ ಮೆಚ್ಚುಗೆ ಪಡೆದಿದೆ. ಆದ್ರೆ ಇದೀಗ ಕಂಪನಿಯು ಮತ್ತಷ್ಟು ಗ್ರಾಹಕ ಸ್ನೇಹಿ ಆಗುವ ಹೆಜ್ಜೆ ಇಟ್ಟಿದ್ದು, ಇನ್ಮುಂದೆ ಮಾರುಕಟ್ಟೆಯಲ್ಲಿ ಕಂಪನಿಯ ಸ್ಮಾರ್ಟ್‌ಫೋನ್‌ಗಳಷ್ಟೇ ಅಲ್ಲದೇ ಸ್ಮಾರ್ಟ್‌ಫೋನ್ ಅಗತ್ಯ ಆಕ್ಸಸರಿಸ್‌ಗಳು ಗ್ರಾಹಕರಿಗೆ ದೊರೆಯಲಿವೆ.

ಹೌದು, ರಿಯಲ್ ಮಿ ಕಂಪನಿಯು ಸ್ಮಾರ್ಟ್‌ಫೋನಿಗೆ ಅಗತ್ಯವಿರುವ ಆಕ್ಸಸರಿಸ್‌ಗಳನ್ನು ಇದೇ ಜುಲೈ 15ರಂದು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವುಗಳಲ್ಲಿ ಚಾರ್ಜಿಂಗ್ 10W ಅಡಾಪ್ಟರ್, VOOC 3.0 20W ಅಡಾಪ್ಟರ್, ಮೈಕ್ರೋ ಯುಎಸ್‌ಬಿ ಕೇಬಲ್, VOOC 3.0 20W ಕೇಬಲ್ ಮತ್ತು VOOC 3.0 20W ಟೈಪ್ ಸಿ ಕೇಬಲ್‌ಗಳು ಪ್ರಮುಖವಾಗಿದ್ದು, ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿವೆ.

ರಿಯಲ್‌ಮಿಯೂ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಬಿಡಿ ಉತ್ಪನ್ನಗಳನ್ನು ಲಾಂಚ್ ಮಾಡಿದ್ದು, ಈ ಕಾಮರ್ಸ್ ಮೂಲಕ ಆಕ್ಸಸರಿಸ್‌ಗಳ ಮಾರಾಟ ಮಾಡಲಿದೆ. ಸ್ಮಾರ್ಟ್‌ಫೋನ್ ಆಕ್ಸಸರಿಸ್ ಮಾರುಕಟ್ಟೆಯಲ್ಲಿ ಶಿಯೋಮಿಗೆ ಪ್ರತಿಸ್ಪರ್ಧಿಯಾಗಲಿದೆ. ಹಾಗಾದರೇ ರಿಯಲ್ ಮಿ ಕಂಪನಿಯ ಸ್ಮಾರ್ಟ್‌ಪೋನ್ ಆಕ್ಸಸರಿಸ್‌ಗಳು ಯಾವುವು ಮತ್ತು ಅವುಗಳ ಪ್ರೈಸ್‌ಟ್ಯಾಗ್ ಏನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಚಾರ್ಜಿಂಗ್ ಕೇಬಲ್‌ಗಳು
ರಿಯಲ್ ಮಿ ಕಂಪನಿಯು ಮೂರು ಮಾದರಿಯ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಕೇಬಲ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ VOOC 3.0 20W ಕೇಬಲ್ 299ರೂ ಬೆಲೆಯನ್ನು ಹೊಂದಿದೆ ಹಾಗೆಯೇ VOOC 3.0 20W ಟೈಪ್ ಸಿ ಕೇಬಲ್ ಬೆಲೆಯು 399ರೂ.ಗಳು ಆಗಿದೆ. ಮತ್ತು ಮೈಕ್ರೊ ಯುಎಸ್‌ಬಿ ಕೇಬಲ್ ಸಹ ಲಭ್ಯವಿದ್ದು, ಇದು 199ರೂ. ಪ್ರೈಸ್‌ಟ್ಯಾಗ್‌ನಲ್ಲಿದೆ.

ಚಾರ್ಜಿಂಗ್ ಅಡಾಪ್ಟರ್‌ಗಳು
ಸ್ಮಾರ್ಟ್‌ಫೋನ್‌ಗಳಿಗೆ ಅತೀ ಮುಖ್ಯವಾಗಿ ಚಾರ್ಜರ್‌ಗಳು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ರಿಯಲ್ ಮಿ ಕಂಪನಿಯು VOOC ಚಾರ್ಜಿಂಗ್ ತಂತ್ರಜ್ಞಾನದ ಎರಡು ಫಾಸ್ಟ್ ಚಾರ್ಜರ್ ಅಡಾಪ್ಟರ್‌ಗಳನ್ನು ಬಿಡುಗಡೆ ಮಾಡಿದೆ. 10W ಚಾರ್ಜಿಂಗ್ ಅಡಾಪ್ಟರ್ ಬೆಲೆಯು 499ರೂ.ಗಳಾಗಿದೆ ಮತ್ತು 20W VOOC 3.0 ಚಾರ್ಜಿಂಗ್ ಅಡಾಪ್ಟರ್ ಬೆಲೆಯು 999ರೂ.ಗಳಾಗಿದೆ.

ಇತರೆ ಆಕ್ಸಸರಿಸ್‌ಗಳು
ರಿಯಲ್ ಮಿ ಸಂಸ್ಥೆಯು ತನ್ನ ರಿಯಲ್ ಮಿ C2 ಸ್ಮಾರ್ಟ್‌ಫೋನಿಗೆ ಟ್ರಾನ್ಸ್ಪರೆಂಟ್ ಸಿಲಿಕಾನ್ ಕೇಸ್ ಸಹ ಬಿಡುಗಡೆ ಮಾಡಿದ್ದು, ಇದರ ಬೆಲೆಯು 149ರೂ.ಗಳು ಆಗಿದೆ. ಹಾಗೆಯೇ ಹೊಸ ರಿಯಲ್ ಮಿ ಎಕ್ಸ್ ಸ್ಮಾರ್ಟ್‌ಫೋನಿಗಾಗಿ ಸಾಫ್ಟ್ ಸಿಲಿಕಾನ್ ಕೇಸ್ ಪರಿಚಯಿಸಿದ್ದು, ಬೆಲೆಯು 299ರೂ.ಗಳಾಗಿದೆ. ಅವುಗಳು ಯಲ್ಲೊ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆ ಜೊತೆ ಕಂಪನಿಯ ಲೊಗೊ ಸಹ ಹೊಂದಿವೆ.

ಆಕ್ಸಸರಿಸ್ ಲಭ್ಯತೆ
ಸದ್ಯ ಇ ಕಾಮರ್ಸ್ ತಾಣಗಳ ಮೂಲಕದ ಗ್ರಾಹಕರು ಸ್ಮಾರ್ಟ್‌ಫೋನ್ ಆಕ್ಸಸರಿಸ್ ಖರೀದಿಸುತ್ತಿದ್ದು, ಈ ದಿಸೆಯಲ್ಲಿ ರಿಯಲ್ ಮಿ ಕಂಪನಿಯು ತನ್ನ ಆಕ್ಸಸರಿಸ್‌ಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಿಸಿದೆ. ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








