ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ ಅನಾವರಣ!..ಬೆಲೆ ಎಷ್ಟು?

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ರಿಯಲ್‌ಮಿಯು ನೂತನವಾಗಿ ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ ಅನ್ನು ಅನಾವಾರಣ ಮಾಡಿದೆ. ಈಗಾಗಲೇ ಸಂಸ್ಥೆಯು ನಾರ್ಜೊ 30 ಸರಣಿಯಲ್ಲಿ ನಾರ್ಜೊ 30A, ನಾರ್ಜೋ 30 ಮತ್ತು ನಾರ್ಜೊ 30 ಪ್ರೊ 5G ಫೋನ್‌ಗಳನ್ನು ಬಿಡುಗಡೆ ಮಾಡಿ ಗಮನ ಸೆಳೆದಿದೆ. ಅದೇ ಸರಣಿಯಲ್ಲಿ ಈ ಫೋನ್ ಸಹ ಲಾಂಚ್ ಆಗಿದ್ದು, ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಸಂಸ್ಥೆಯು ನೂತನವಾಗಿ ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ ಅನ್ನು ಯುರೋಪ್‌ನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಆಕ್ಟಾ-ಕೋರ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 700 5G SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 405 ppi ಪಿಕ್ಸೆಲ್‌ ಸಾಂದ್ರತೆಯನ್ನು, 600 ಬ್ರೈಟ್ನೆಸ್‌ ನಿಟ್ಸ್‌ ಹಾಗೂ 90Hz ಸ್ಕ್ರೀನ್ ರೀಫ್ರೇಶ್ ರೇಟ್ ಒಳಗೊಂಡಿದೆ.

ಯಾವ ಪ್ರೊಸೆಸರ್‌

ಯಾವ ಪ್ರೊಸೆಸರ್‌

ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 700 5G SoC ಪ್ರೊಸೆಸರ್‌ ಅನ್ನು ಹೊಂದಿದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1TB ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಲು ಅವಕಾಶ ನೀಡಿದೆ.

ತ್ರಿವಳಿ ಕ್ಯಾಮೆರಾ ಸೆನ್ಸಾರ್

ತ್ರಿವಳಿ ಕ್ಯಾಮೆರಾ ಸೆನ್ಸಾರ್

ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದರೊಂದಿಗೆ 18W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, 5G ನೆಟ್‌ವರ್ಕ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರಿಯಲ್‌ಮಿ ನಾರ್ಜೊ 30 5G ಸ್ಮಾರ್ಟ್‌ಫೋನ್‌ 4GB RAM + 128GB ಸ್ಟೋರೇಜ್ ಮಾದರಿಯು ಬೆಲೆಯು EUR 189 (ಭಾರತದಲ್ಲಿ ಅಂದಾಜು 16,800ರೂ. ಎನ್ನಲಾಗಿದೆ). ಇನ್ನು ಈ ಫೋನ್ ಭಾರತದ ಮಾರುಕಟ್ಟೆಗೆ ಯಾವಾಗ ಬರಲಿದೆ ಎಂಬುದರ ಬಗ್ಗೆ ಕಂಪನಿಯು ಮಾಹಿತಿ ಹೊರಹಾಕಿಲ್ಲ.

Best Mobiles in India

English summary
Realme Narzo 30 5G price and specifications have been revealed as the phone has gone official in Europe.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X