ಇಂದು ರಿಯಲ್‌ಮಿ ನಾರ್ಜೊ 50 5G ಫಸ್ಟ್ ಸೇಲ್!..ಬೆಲೆ ಎಷ್ಟು?
ರಿಯಲ್‌ಮಿ ಮೊಬೈಲ್ ಸಂಸ್ಥೆಯ ತನ್ನ ಬಹುನಿರೀಕ್ಷಿತ ರಿಯಲ್‌ಮಿ ನಾರ್ಜೊ 50 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಆಗಿ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಮೇ 26) ಜನಪ್ರಿಯ ಇ ಕಾಮರ್ಸ್ ತಾಣ ಅಮೆಜಾನ್ ಹಾಗೂ ಅಧಿಕೃತ ರಿಯಲ್ ಮಿ ತಾಣದ ಮೂಲಕ ಮೊದಲ ಮಾರಾಟ ಆರಂಭಿಸಲಿದೆ. ಇನ್ನು ರಿಯಲ್‌ಮಿ ನಾರ್ಜೊ 50 5G ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 19,999 ರೂ. ಆಗಿದೆ.

ಹೌದು, ರಿಯಲ್ ಮಿ ಕಂಪನಿಯ ರಿಯಲ್‌ಮಿ ನಾರ್ಜೊ 50 5G ಸ್ಮಾರ್ಟ್‌ಫೋನಿನ ಮೊದಲ ಮಾರಾಟ ಇಂದು ನಡೆಯಲಿದೆ. ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, 6GB RAM, 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಇನ್ನು ಈ ಫೋನಿನ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಇನ್ನುಳಿದಂತೆ ರಿಯಲ್‌ಮಿ ನಾರ್ಜೊ 50 5G ಸ್ಮಾರ್ಟ್‌ಫೋನಿನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ರಿಯಲ್‌ಮಿ ನಾರ್ಜೊ 50 ಪ್ರೊ 5G ಫೀಚರ್ಸ್
ರಿಯಲ್‌ಮಿ ನಾರ್ಜೊ 50 ಪ್ರೊ 5G ಸ್ಮಾರ್ಟ್‌ಫೋನ್ 6.6 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಜೊತೆಗೆ 90Hz ರಿಫ್ರೆಶ್ ದರ, 180Hz ಟಚ್ ಮಾದರಿ ದರ ಪಡೆದಿದೆ. ಈ ಫೋನಿನ ಡಿಸ್‌ಪ್ಲೇಯು 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಪಡೆದಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್ ಪ್ರೊಸೆಸರ್ ಬಲ ಪಡೆದಿದ್ದು, 6GB RAM, 128GB ಸ್ಟೋರೇಜ್ ಆಯ್ಕೆಪಡೆದಿದೆ. ಹಾಗೆಯೇ 1TB ವರೆಗಿನ ಮೈಕ್ರೊ SD ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ. ಇನ್ನು ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಹಾಗೆಯೇ 8 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿದೆ. ಇದರೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ.

ರಿಯಲ್‌ಮಿ ನಾರ್ಜೊ 50 ಪ್ರೊ ಫೀಚರ್ಸ್
ರಿಯಲ್‌ಮಿ ನಾರ್ಜೊ 50 ಪ್ರೊ ಫೋನ್ 90Hz ರಿಫ್ರೆಶ್ ದರದೊಂದಿಗೆ 6.4 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, 360Hz ಟಚ್ ಸ್ಯಾಂಪ್ಲಿಂಗ್ ದರ ಪಡೆದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 5G ಪ್ರೊಸೆಸರ್ ಪವರ್ ಚಾಲಿತವಾಗಿದ್ದು, ಇದು 8GB ಯ RAM, 5GB ವರ್ಚುವಲ್ RAM ಮತ್ತು 128GB ಯ ಸ್ಟೋರೇಜ್ ಸ್ಥಳದೊಂದಿಗೆ ಸಂಯೋಜಿಸಲ್ಪಟ್ಟಿದೆ. ಹಾಗೆಯೇ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಪಡೆದಿದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಒಳಗೊಂಡಿದೆ. 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಫೋನ್ 5,000mAh ಬ್ಯಾಟರಿ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 33W ಡಾರ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.
ಬೆಲೆ ಮತ್ತು ಲಭ್ಯತೆ?
ರಿಯಲ್‌ಮಿ ನಾರ್ಜೊ 50 ಪ್ರೊ ಫೋನ್ 6 + 128 GB ಬೇಸ್ ವೇರಿಯಂಟ್ ದರವು 19,999 ರೂ. ಆಗಿದೆ. ಅದೇ ರೀತಿ 8 + 128 GB ವೇರಿಯಂಟ್ ಬೆಲೆ 21,999 ರೂ. ಆಗಿದೆ. ಇನ್ನು ಈ ಫೋನ್ ಇದೇ ಮೇ 26 ರಿಂದ ಅಮೆಜಾನ್ ತಾಣದಲ್ಲಿ ಸೇಲ್ ಆರಂಭಿಸಲಿದೆ. ಹಾಗೆಯೇ ರಿಯಲ್‌ಮಿ ನಾರ್ಜೊ 50 5G ಫೋನಿನ 4 GB + 64 GB ವೇರಿಯಂಟ್ ಬೆಲೆ 13,999 ರೂ, ಆಗಿದೆ. ಅದೇ ರೀತಿ 4 GB + 128 GB ವೇರಿಯಂಟ್ ಬೆಲೆ 14,999 ರೂ. ಆಗಿದೆ.


Click it and Unblock the Notifications