ಭಾರತದಲ್ಲಿ ರಿಯಲ್‌ಮಿ ನಾರ್ಜೊ 50 5G ಮತ್ತು ರಿಯಲ್‌ಮಿ ನಾರ್ಜೊ 50 ಪ್ರೊ ಲಾಂಚ್‌!

|

ರಿಯಲ್‌ಮಿ ಮೊಬೈಲ್‌ ಸಂಸ್ಥೆಯು ಭಾರತದಲ್ಲಿ ಇಂದು ರಿಯಲ್‌ಮಿ ನಾರ್ಜೊ ಸರಣಿಯಲ್ಲಿ ಮತ್ತೆ ಎರಡು ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳು ಕ್ರಮವಾಗಿ ರಿಯಲ್‌ಮಿ ನಾರ್ಜೊ 50 5G ಮತ್ತು ರಿಯಲ್‌ಮಿ ನಾರ್ಜೊ 50 ಪ್ರೊ ಆಗಿವೆ. ಈ ಎರಡು ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿವೆ. ರಿಯಲ್‌ಮಿ ನಾರ್ಜೊ 50 5G ಬಜೆಟ್‌ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ರಿಯಲ್‌ಮಿ ನಾರ್ಜೊ 50 ಪ್ರೊ ಮೀಡ್‌ರೇಂಜ್‌ ದರದಲ್ಲಿ ಗುರುತಿಸಿಕೊಂಡಿದೆ.

ಭಾರತದಲ್ಲಿ ರಿಯಲ್‌ಮಿ ನಾರ್ಜೊ 50 5G ಮತ್ತು ರಿಯಲ್‌ಮಿ ನಾರ್ಜೊ 50 ಪ್ರೊ ಲಾಂಚ್‌!

ಹೌದು, ರಿಯಲ್‌ಮಿ ಕಂಪೆನಿ ಭಾರತದಲ್ಲಿ ಹೊಸದಾಗಿ ರಿಯಲ್‌ಮಿ ನಾರ್ಜೊ 50 5G ಮತ್ತು ರಿಯಲ್‌ಮಿ ನಾರ್ಜೊ 50 ಪ್ರೊ ಮಾಡೆಲ್‌ಗಳನ್ನು ಪರಿಚಯಿಸಿದೆ. ಈ ಎರಡು ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಹಾಗೆಯೇ ರಿಯಲ್‌ಮಿ ನಾರ್ಜೊ 50 5G ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ರಿಯಲ್‌ಮಿ ನಾರ್ಜೊ 50 ಪ್ರೊ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇನ್ನುಳಿದಂತೆ ರಿಯಲ್‌ಮಿ ನಾರ್ಜೊ 50 5G ಮತ್ತು ರಿಯಲ್‌ಮಿ ನಾರ್ಜೊ 50 ಪ್ರೊ ಫೋನ್‌ಗಳ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ನಾರ್ಜೊ 50 ಪ್ರೊ ಫೀಚರ್ಸ್‌
ರಿಯಲ್‌ಮಿ ನಾರ್ಜೊ 50 ಪ್ರೊ ಫೋನ್‌ 90Hz ರಿಫ್ರೆಶ್ ದರದೊಂದಿಗೆ 6.4 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, 360Hz ಟಚ್ ಸ್ಯಾಂಪ್ಲಿಂಗ್ ದರ ಪಡೆದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 5G ಪ್ರೊಸೆಸರ್ ಪವರ್‌ ಚಾಲಿತವಾಗಿದ್ದು, ಇದು 8GB ಯ RAM, 5GB ವರ್ಚುವಲ್ RAM ಮತ್ತು 128GB ಯ ಸ್ಟೋರೇಜ್ ಸ್ಥಳದೊಂದಿಗೆ ಸಂಯೋಜಿಸಲ್ಪಟ್ಟಿದೆ. ಹಾಗೆಯೇ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಒಳಗೊಂಡಿದೆ. 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಫೋನ್ 5,000mAh ಬ್ಯಾಟರಿ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 33W ಡಾರ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.

ಭಾರತದಲ್ಲಿ ರಿಯಲ್‌ಮಿ ನಾರ್ಜೊ 50 5G ಮತ್ತು ರಿಯಲ್‌ಮಿ ನಾರ್ಜೊ 50 ಪ್ರೊ ಲಾಂಚ್‌!

ರಿಯಲ್‌ಮಿ ನಾರ್ಜೊ 50 ಪ್ರೊ 5G ಫೀಚರ್ಸ್‌
ರಿಯಲ್‌ಮಿ ನಾರ್ಜೊ 50 ಪ್ರೊ 5G ಸ್ಮಾರ್ಟ್‌ಫೋನ್ 6.6 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಜೊತೆಗೆ 90Hz ರಿಫ್ರೆಶ್ ದರ, 180Hz ಟಚ್ ಮಾದರಿ ದರ ಪಡೆದಿದೆ. ಈ ಫೋನಿನ ಡಿಸ್‌ಪ್ಲೇಯು 2400×1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಪಡೆದಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್ ಪ್ರೊಸೆಸರ್‌ ಬಲ ಪಡೆದಿದ್ದು, 6GB RAM, 128GB ಸ್ಟೋರೇಜ್ ಆಯ್ಕೆಪಡೆದಿದೆ. ಹಾಗೆಯೇ 1TB ವರೆಗಿನ ಮೈಕ್ರೊ SD ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ. ಇನ್ನು ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್ ನಲ್ಲಿದೆ. ಹಾಗೆಯೇ 8 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿದೆ. ಇದರೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ?
ರಿಯಲ್‌ಮಿ ನಾರ್ಜೊ 50 ಪ್ರೊ ಫೋನ್ 6+128GB ಬೇಸ್‌ ವೇರಿಯಂಟ್‌ ದರವು 19,999 ರೂ. ಆಗಿದೆ. ಅದೇ ರೀತಿ 8+128GB ವೇರಿಯಂಟ್‌ ಬೆಲೆ 21,999 ರೂ. ಆಗಿದೆ. ಇನ್ನು ಈ ಫೋನ್ ಇದೇ ಮೇ 26 ರಿಂದ ಅಮೆಜಾನ್‌ ತಾಣದಲ್ಲಿ ಸೇಲ್ ಆರಂಭಿಸಲಿದೆ. ಹಾಗೆಯೇ ರಿಯಲ್‌ಮಿ ನಾರ್ಜೊ 50 5G ಫೋನಿನ 4GB+64GB ವೇರಿಯಂಟ್ ಬೆಲೆ 13,999 ರೂ, ಆಗಿದೆ. ಅದೇ ರೀತಿ 4GB+128GB ವೇರಿಯಂಟ್ ಬೆಲೆ 14,999 ರೂ. ಆಗಿದೆ. ಇನ್ನು ಈ ಫೋನ್ ಇದೇ ಮೇ 24 ರಿಂದ ಅಮೆಜಾನ್‌ ತಾಣದಲ್ಲಿ ಮಾರಾಟ ಶುರು ಮಾಡಲಿದೆ.

Best Mobiles in India

English summary
Realme Narzo 50 Pro, Nazro 50 5G launched in India: Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X