Home
ಸುದ್ದಿಜಾಲ

Realme: ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌! 50MP ಕ್ಯಾಮೆರಾ...

ರಿಯಲ್‌ಮಿ (Realme) ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ದೊಡ್ಡ ಬೇಡಿಕೆ ಇದ್ದು, ಈ ನಡುವೆ ರಿಯಲ್‌ಮಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಸುಧಾರಿತ ಫೀಚರ್ಸ್‌ನೊಂದಿಗೆ ಲಾಂಚ್‌ ಮಾಡಿಕೊಂಡು ಬರುತ್ತಿದೆ. ಈ ನಡುವೆ ರಿಯಲ್‌ಮಿಯ ಬಹು ಬೇಡಿಕೆಯ ಸ್ಮಾರ್ಟ್‌ಫೋನ್‌ ಒಂದು ಭಾರೀ ಡಿಸ್ಕೌಂಟ್‌ ಪಡೆಯುವ ಮೂಲಕ ಸದ್ದು ಮಾಡುತ್ತಿದೆ.

ಹೌದು, ಹೊಸ ಸ್ಮಾರ್ಟ್‌ಫೋನ್‌ ಹೊಂದುವುದು ಪ್ರತಿಯೊಬ್ಬರ ಆಸೆ. ಆದರೆ ಹಲವಾರು ಕಾರಣಗಳಿಂದ ಖರೀದಿ ಮಾಡಲು ಸಾಧ್ಯವಾಗದೆ ಇರಬಹುದು. ಅದಾಗ್ಯೂ ನೀವು ಈಗ ಆಫರ್ ಬೆಲೆಗೆ ರಿಯಲ್‌ಮಿ ನಾರ್ಜೋ 50A ಪ್ರೈಮ್ ಸ್ಮಾರ್ಟ್‌ಫೋನ್‌ (Realme Narzo 50A Prime Smartphone) ಅನ್ನು ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 50MP ಮುಖ್ಯ ಕ್ಯಾಮೆರಾ ಹಾಗೂ ಯುನಿಸಾಕ್ T612 ಸಿಪಿಯು ಸೇರಿದಂತೆ ಅನೇಕ ಸುಧಾರಿತ ಸೌಲಭ್ಯ ಪಡೆದಿದೆ. ಹಾಗಿದ್ರೆ, ಈ ಫೋನ್‌ ಪ್ರಮುಖ ಫೀಚರ್ಸ್‌ ಹಾಗೂ ಇದರ ಆಫರ್ ವಿವರ ತಿಳಿಯೋಣ ಬನ್ನಿ.

Realme: ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌! 50MP ಕ್ಯಾಮೆರಾ

ರಿಯಲ್‌ಮಿ ನಾರ್ಜೋ 50A ಪ್ರೈಮ್ ಆಫರ್ ವಿವರ: ಈ ಸ್ಮಾರ್ಟ್‌ಫೋನ್ ಸಾಮಾನ್ಯ ದರ 13,499ರೂ.ಗಳಾಗಿದೆ. ಆದರೆ ನೀವು ಇದನ್ನು ಈಗ 9,499ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಪ್ರಮುಖ ಇ ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ ಇದಕ್ಕೆ 30% ಡಿಸ್ಕೌಂಟ್‌ ಘೋಷಣೆ ಮಾಡಿದೆ. ಇದರಿಂದ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಬ್ಯಾಂಕ್‌ ಕಾರ್ಡ್‌ಗಳಲ್ಲಿ ಇನ್ನೂ ಹೆಚ್ಚಿನ ಆಫರ್ ಸಹ ಲಭ್ಯ ಇದೆ.

ಬ್ಯಾಂಕ್‌ ಆಫರ್‌ ವಿವರ ನೋಡೋದಾದ್ರೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದಲ್ಲಿ 10% ತ್ವರಿತ ರಿಯಾಯಿತಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಾನ್-ಇಎಮ್‌ಐ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ ಸಿಗಲಿದೆ. ಇಷ್ಟೇ ಅಲ್ಲದೆ ಇನ್ನೂ ಹಲವಾರು ಬ್ಯಾಂಕ್ ಆಫರ್‌ ಲಭ್ಯ ಇವೆ.

Realme: ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌! 50MP ಕ್ಯಾಮೆರಾ

ರಿಯಲ್‌ಮಿ ನಾರ್ಜೋ 50A ಪ್ರೈಮ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 400 ppi ಪಿಕ್ಸೆಲ್ ಸಾಂದ್ರತೆ ಮತ್ತು 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆಯುವ ಮೂಲಕ ಉತ್ತಮ ಎನಿಸಿದೆ. ಇದರೊಂದಿಗೆ ಬೆಜೆಲ್-ಫ್ರೀ ಡಿಸ್‌ಪ್ಲೇಯು ವಾಟರ್‌ಡ್ರಾಪ್ ನಾಚ್ ಶೈಲಿಯಲ್ಲಿದೆ.

ರಿಯಲ್‌ಮಿ ನಾರ್ಜೋ 50A ಪ್ರೈಮ್ ಪ್ರೊಸೆಸರ್‌ ಮಾಹಿತಿ: ಈ ವಿಶೇಷ ಸ್ಮಾರ್ಟ್‌ಫೋನ್ ಯುನಿಸಾಕ್ T612 ಸಿಪಿಯು (Unisac T612 CPU) ಬಲ ಪಡೆದಿದ್ದು, ಆಕ್ಟಾ-ಕೋರ್, 1.8GHz ಪ್ರೊಸೆಸರ್, ಕಾರ್ಟೆಕ್ಸ್ A55 ಮತ್ತು ಕಾರ್ಟೆಕ್ಸ್ A75 ಲೇಔಟ್‌ಗಳೊಂದಿಗೆ ಪ್ಯಾಕ್‌ ಆಗಿದೆ. ಇದರೊಂದಿಗೆ ಮಾಲಿ G57 MP1 ಜಿಪಿಯ ಆಯ್ಕೆ ಇದ್ದು, ಫೋನ್‌ನಲ್ಲಿ ಗೇಮಿಂಗ್‌ ಹಾಗೂ ವಿಡಿಯೋ ವೀಕ್ಷಣೆಯಲ್ಲಿ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಇದಕ್ಕೆ 4GB RAM ಇನ್ನಷ್ಟು ಅನ್ನು ಬಲ ನೀಡಲಿದೆ.

Realme: ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌! 50MP ಕ್ಯಾಮೆರಾ

ರಿಯಲ್‌ಮಿ ನಾರ್ಜೋ 50A ಪ್ರೈಮ್ ಕ್ಯಾಮೆರಾ ರಚನೆ: ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, 0.3MP ನ f/2.8 ಡೆಪ್ತ್ ಕ್ಯಾಮೆರಾ, 2MP ನ f/2.4 ಮ್ಯಾಕ್ರೋ ಕ್ಯಾಮೆರಾ ಹಾಗೂ 50MP ನ f/1.8 ಮುಖ್ಯ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಸೆನ್ಸರ್‌ಗಳು ಡಿಜಿಟಲ್ ಜೂಮ್, ಎಲ್ಇಡಿ ಫ್ಲ್ಯಾಶ್‌, ಐಎಸ್ಒ ಹೊಂದಾಣಿಕೆ ಮತ್ತು ಹೆಚ್‌ಡಿಆರ್ ಮೋಡ್ ಸೇರಿದಂತೆ ವಿಶೇಷ ಸೌಕರ್ಯ ನೀಡಲಿವೆ. ಉಳಿದಂತೆ 5000mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Realme Narzo 50A Prime Smartphone can be bought at a cheap price. This smartphone is have 50MP main camera and powered by Unisock T612 CPU.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+