Home
ಸುದ್ದಿಜಾಲ

Realme: ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್‌ ಭಾರೀ ಕಡಿಮೆ ಬೆಲೆಗೆ! 50MP ಕ್ಯಾಮೆರಾ.. 6000mAh ಬ್ಯಾಟರಿ

ರಿಯಲ್‌ಮಿಯ (Realme) ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಈ ಫೋನ್‌ಗಳು ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಆಯ್ಕೆ ಪಡೆದಿದ್ದು, ಭಿನ್ನ ಸೌಲಭ್ಯ ನೀಡಲಿವೆ. ಇದರೊಂದಿಗೆ ಭಾರೀ ಬೇಡಿಕೆ ಇರುವ ಫೋನ್‌ಗೆ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚು ಬೇಡಿಕೆ ಇರುವ ರಿಯಲ್‌ಮಿ ನಾರ್ಜೋ 50A ಸ್ಮಾರ್ಟ್‌ಫೋನ್‌ (Realme Narzo 50A Smartphone) ಇದೀಗ 23% ರಿಯಾಯಿತಿ ಪಡೆದಿದೆ. ಈ ಫೋನ್ 64 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಟ್ರಿಪಲ್‌ ರಿಯರ್‌ ಕ್ಯಾಮೆರಾ ಮೂಲಕ ಉತ್ತಮ ಎನಿಸಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ಬೆಲೆ ವಿವರ ಹಾಗೂ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

 ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್‌ ಭಾರೀ ಕಡಿಮೆ ಬೆಲೆಗೆ! 50MP ಕ್ಯಾಮೆರಾ..

ರಿಯಲ್‌ಮಿ ನಾರ್ಜೋ 50A ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಫೋನ್ 12,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 9,998 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ (Flipkart) ಈ ಫೋನ್‌ಗೆ 23% ರಿಯಾಯಿತಿ ನೀಡಿದೆ. ಅದಾಗ್ಯೂ ನೀವು ಕೆಲವು ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್‌ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ 620 ರೂ.ಗಳ ತಿಂಗಳ ಇಎಮ್‌ಐ ಸಹ ಲಭ್ಯ ಇದ್ದು, ಈ ಮೂಲಕ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದಾಗಿದೆ. ಜೊತೆಗೆ 119 ರೂ.ಮೌಲ್ಯದ FreebieSpotify ಪ್ರೀಮಿಯಂ ಸೌಲಭ್ಯವನ್ನು ಈ ವೇಳೆ ಪಡೆಯಬಹುದಾಗಿದೆ.

 ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್‌ ಭಾರೀ ಕಡಿಮೆ ಬೆಲೆಗೆ! 50MP ಕ್ಯಾಮೆರಾ..

ರಿಯಲ್‌ಮಿ ನಾರ್ಜೋ 50A ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.5 ಇಂಚಿನ ಐಪಿಎಸ್‌ ಎಲ್‌ಸಿಡಿ ವಾಟರ್‌ಡ್ರಾಪ್ ನಾಚ್ ಡಿಸ್‌ಪ್ಲೇ ಹೊಂದಿದ್ದು, ಇದು 275 ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ. ಜೊತೆಗೆ ಫುಲ್‌ ಹೆಚ್‌ಡಿ+ (720×1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್) ಸಾಮರ್ಥ್ಯ ಹೊಂದಿದ್ದು, ಈ ಮೂಲಕ ಉತ್ತಮ ವೀಕ್ಷಣೆ ಅನುಭವ ಪಡೆಯಬಹುದಾಗಿದೆ. ಅಲ್ಲದೆ ಸುಮಾರು 89% ರಷ್ಟು ಅದ್ಭುತವಾದ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಈ ಫೋನ್‌ ಹೊಂದಿದೆ.

ರಿಯಲ್‌ಮಿ ನಾರ್ಜೋ 50A ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ: ಇನ್ನು ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G85 SoC ಪ್ರೊಸೆಸರ್‌ ಬಲ ಪಡೆದಿದ್ದು, ಈ ಪ್ರೊಸೆಸೆರ್ 2GHz ನಲ್ಲಿ ಕಾರ್ಯನಿರ್ವಹಿಸುವ ಆಕ್ಟಾ-ಕೋರ್ ಅನ್ನು ಹೊಂದಿದೆ. ಅಲ್ಲದೆ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 ಪ್ರೊಸೆಸರ್‌ಗೆ ಸಮನಾಗಿರುತ್ತದೆ. ಇದರೊಂದಿಗೆ ಮಾಲಿ G52 GPU ಮತ್ತು ಮಲ್ಟಿಟಾಸ್ಕಿಂಗ್‌ಗಾಗಿ 4GB RAM ಹಾಗೂ 64 GB ಇಂಟರ್‌ ಸ್ಟೋರೇಜ್‌ ಪಡೆದಿದೆ.

 ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್‌ ಭಾರೀ ಕಡಿಮೆ ಬೆಲೆಗೆ! 50MP ಕ್ಯಾಮೆರಾ..

ರಿಯಲ್‌ಮಿ ನಾರ್ಜೋ 50A ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್‌ ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಆಟೋಫೋಕಸ್ ಮ್ಯಾಕ್ರೋ ಕ್ಯಾಮೆರಾ, ಎರಡು 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸರ್‌ ಆಯ್ಕೆ ಹೊಂದಿದೆ. ಹಾಗೆಯೇ ಎಲ್‌ಇಡಿ ಫ್ಲಾಶ್‌ನೊಂದಿಗೆ ಉತ್ತಮ ಎನಿಸಿದೆ. ಇದರೊಂದಿಗೆ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಇದೆ.

ರಿಯಲ್‌ಮಿ ನಾರ್ಜೋ 50A ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್‌ 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಸುರಕ್ಷಿತ ಅನ್‌ಲಾಕಿಂಗ್‌ಗಾಗಿ, ಮುಖದ ಗುರುತಿಸುವಿಕೆ ಕಾರ್ಯ ಮತ್ತು ರಿಯರ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಪಡೆದಿದೆ ಉಳಿದಂತೆ ಉತ್ತಮ ವೈ-ಫೈ, ಬ್ಲೂಟೂತ್‌ ಹಾಗೂ ಇನ್ನಿತರೆ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

Best Mobiles in India

English summary
Realme Narzo 50A Smartphone, which is most in demand among Realme smartphones, has now got 23% discount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+