ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಖರೀದಿಸಬೇಕಿದ್ರೆ, ಈ ಆಫರ್ ನಿಮಗೆ ಸೂಕ್ತ!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರಿಯಲ್‌ಮಿ ಕಂಪನಿಯು ತನ್ನ ನಾರ್ಜೊ ಸರಣಿಯಲ್ಲಿ ಕೆಲವು ಫೋನ್ ಲಾಂಚ್ ಗಮನ ಸೆಳೆದಿದೆ. ಅವುಗಳಲ್ಲಿ ರಿಯಲ್‌ಮಿ ನಾರ್ಜೊ 50i ಪ್ರೈಮ್ ಕೂಡಾ ಒಂದಾಗಿದ್ದು, ಗ್ರಾಹಕ ಸ್ನೇಹಿ ಬೆಲೆಯಿಂದ ಹೆಚ್ಚಿನ ಆಕರ್ಷಣೆ ಪಡೆದಿದೆ. ಆದರೆ ಈ ಮೊಬೈಲ್ ಈಗ ಬಿಗ್ ಡಿಸ್ಕೌಂಟ್ ಪಡೆದಿದ್ದು, ಗ್ರಾಹಕರನ್ನು ಕುತೂಹಲದಿಂದ ನೋಡುವಂತೆ ಆಗಿದೆ.
ಹೌದು, ಇ ಕಾಮರ್ಸ್ ಅಮೆಜಾನ್ ತಾಣದಲ್ಲಿ ರಿಯಲ್‌ಮಿ ನಾರ್ಜೊ 50i ಪ್ರೈಮ್ ಮೊಬೈಲ್ ಶೇ. 31% ರಷ್ಟು ರಿಯಾಯಿತಿ ಪಡೆದಿದೆ. ಈ ಮೊಬೈಲ್‌ನ 4GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆಯು 9,999ರೂ. ಆಗಿದ್ದು, ಆಫರ್ ನಿಂದಾಗಿ ಗ್ರಾಹಕರು 6,899ರೂ. ಗಳ ಬೆಲೆಯಲ್ಲಿ ನಲ್ಲಿ ಖರೀದಿ ಮಾಡಬಹುದಾಗಿದೆ.

ಈ ಫೋನ್ ಯುನಿಸೋಕ್ 9863 SoC ಪ್ರೊಸೆಸರ್ ಪವರ್ ಪಡೆದಿದ್ದು, ಹಿಂಬದಿಯಲ್ಲಿ ರಿಯರ್ ಸಿಂಗಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಅಲ್ಲದೇ ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಕ್‌ಅಪ್ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದುಕೊಂಡಿದೆ.
ಈ ಮೊಬೈಲ್ ಫೋನ್ ಮಿಂಟ್ ಗ್ರೀನ್ ಕಾರ್ಬನ್ ಬ್ಲ್ಯಾಕ್ ಕಲರ್ ಸೌಲಭ್ಯ ಪಡೆದಿದೆ. ಇದರೊಂದಿಗೆ ಈ ಫೋನ್ ಗೇಮಿಂಗ್ ಹಾಗೂ ಮಲ್ಟಿ ಟಾಸ್ಕಿಂಗ್ ಕೆಲಸಗಳಿಗೆ ಈ ಪ್ರೊಸೆಸರ್ ಬೆಂಬಲವಾಗಿ ಇದೆ ಇನ್ನುಳಿದಂತೆ ರಿಯಲ್‌ಮಿ ನಾರ್ಜೊ 50i ಪ್ರೈಮ್ ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹೇಗಿದೆ ಡಿಸ್‌ಪ್ಲೇ ಮತ್ತು ಪ್ರೊಸೆಸರ್
ರಿಯಲ್‌ಮಿ ನಾರ್ಜೊ 50i ಪ್ರೈಮ್ ಮೊಬೈಲ್ 6.5 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿದೆ. ಇದು ಯುನಿಸೋಕ್ 9863 SoC ಪ್ರೊಸೆಸರ್ ಸಾಮರ್ಥ್ಯ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI ಗೋ ಆವೃತ್ತಿ ಸಪೋರ್ಟ್ ದೊಂದಿಗೆ ಕಾರ್ಯ ನಿರ್ವಹಿಸುತ್ತದೆ.

ಇದರೊಂದಿಗೆ ಈ ಸ್ಮಾರ್ಟ್‌ಫೋನ್ 4GB RAM ಮತ್ತು 64 GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಅನ್ನು ಹೊಂದಿದೆ. ಇದರ ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ಅನ್ನು 1TB ವರೆಗೂ ಸಹ ವಿಸ್ತರಿಸುವ ಆಯ್ಕೆ ಪಡೆದುಕೊಂಡಿದೆ. ಅಲ್ಲದೇ ಗೇಮಿಂಗ್ ಹಾಗೂ ಮಲ್ಟಿ ಟಾಸ್ಕಿಂಗ್ ಕೆಲಸಗಳಿಗೆ ಈ ಪ್ರೊಸೆಸರ್ ಬೆಂಬಲವಾಗಿ ಇದೆ.
ಸಿಂಗಲ್ ಕ್ಯಾಮೆರಾ ಮತ್ತು ಬಿಗ್ ಬ್ಯಾಟರಿ ಬ್ಯಾಕ್‌ಅಪ್
ರಿಯಲ್‌ಮಿ ಸಂಸ್ಥೆಯ ಈ ಮೊಬೈಲ್ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದ್ದು, ಅದು 8 ಮೆಗಾ ಪಿಕ್ಸೆಲ್ AI ಸೆನ್ಸಾರ್ ಅನ್ನು ಪಡೆದುಕೊಂಡೊದೆ. ಅಲ್ಲದೆ ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾ ಅನ್ನು ನೀಡಲಾಗಿದೆ.
ಇದರ ಜೊತೆಗೆ ಈ ಮೊಬೈಲ್ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು 43 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಇದು ಸೂಪರ್ ಪವರ್ ಸೇವಿಂಗ್ ಮೋಡ್ ಅನ್ನು ಸಹ ಒಳಗೊಂಡಿದೆ.
ಮೆಮೊರಿ ಮತ್ತು ಕಲರ್ ಆಯ್ಕೆ ಹೀಗಿವೆ
ರಿಯಲ್‌ಮಿ ನಾರ್ಜೊ 50i ಪ್ರೈಮ್ ಫೋನ್ ಫೋನ್ ಎರಡು ವೇರಿಯಂಟ್ ಆಯ್ಕೆ ಹೊಂದಿದೆ. ಅವುಗಳು ಕ್ರಮವಾಗಿ 3 GB RAM + 32GB ಸ್ಟೋರೇಜ್ ವೇರಿಯಂಟ್ ಆಯ್ಕೆ ಮತ್ತು 4GB RAM + 64GB ಸ್ಟೋರೇಜ್ ವೇರಿಯಂಟ್ ಆಯ್ಕೆ ಸಾಮರ್ಥ್ಯದಲ್ಲಿ ಇವೆ. ಇನ್ನು ಈ ಮೊಬೈಲ್ ಫೋನ್ ಮಿಂಟ್ ಗ್ರೀನ್ ಕಾರ್ಬನ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








