ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದ್ದ ಈ ಫೋನ್ ನಾಳೆ ಖರೀದಿಗೆ ಲಭ್ಯ!..ಬೆಲೆ ಎಷ್ಟು?
ಆನ್‌ಲೈನ್ ಶಾಪಿಂಗ್ ಪ್ರಿಯರು ಕುತೂಹಲದಿಂದ ಎದುರುನೋಡುತ್ತಿರುವ ಅಮೆಜಾನ್ ಪ್ರೈಮ್ ಡೇ (Amazon Prime Day) ಸೇಲ್ ಬಂದೇ ಬಿಡ್ತು. ಜುಲೈ 15 ರಿಂದ ಅಮೆಜಾನ್ ಪ್ರೈಮ್ ಡೇ ಮಾರಾಟ ಪ್ರಾರಂಭವಾಗಲಿದೆ. ಈ ಮಾರಾಟ ಮೇಳದಲ್ಲಿ ಗ್ಯಾಡ್ಜೆಟ್ಸ್‌ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯ. ಹಾಗೆಯೇ ಈ ಸೇಲ್‌ನಲ್ಲಿ ಕೆಲವು ಹೊಸ ಫೋನ್‌ಗಳು ಮಾರಾಟ ಶುರು ಮಾಡಲಿವೆ. ಆ ಪೈಕಿ ರಿಯಲ್‌ಮಿ ನಾರ್ಜೋ 6 ಸರಣಿ ಸಹ ಒಂದು.
ಹೌದು, ರಿಯಲ್‌ಮಿ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ರಿಯಲ್‌ಮಿ ನಾರ್ಜೋ 60 ಸರಣಿ ಲಾಂಚ್ ಮಾಡಿದೆ. ಈ ಸರಣಿಯು ರಿಯಲ್‌ಮಿ ನಾರ್ಜೋ 60 5G ಮತ್ತು ರಿಯಲ್‌ಮಿ ನಾರ್ಜೋ 60 ಪ್ರೊ 5G ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ. ಈ ಫೋನ್‌ಗಳು ನಾಳೆ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಮೊದಲ ಬಾರಿಗೆ ಮಾರಾಟ ಪ್ರಾರಂಭಿಸಲಿವೆ.

ರಿಯಲ್‌ಮಿ ನಾರ್ಜೋ 60 5G ಆರಂಭಿಕ ಬೆಲೆ 17,999ರೂ. ಆಗಿದ್ದು, ಹಾಗೆಯೇ ರಿಯಲ್‌ಮಿ ನಾರ್ಜೋ 60 ಪ್ರೊ 5G ಫೋನಿನ ಆರಂಭಿಕ ದರ 23,999ರೂ. ಆಗಿದೆ. ಇನ್ನು ಈ ಫೋನ್‌ಗಳು ಕಾಸ್ಮಿಕ್ ಬ್ಲ್ಯಾಕ್ ಮತ್ತು ಮಾರ್ಸ್ ಆರೆಂಜ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿವೆ. ಇನ್ನುಳಿದಂತೆ ಈ ಎರಡು ಫೋನ್‌ಗಳ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ ನಾರ್ಜೋ 60 5G ಫೀಚರ್ಸ್ ಹೀಗಿವೆ : ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ HD+ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಪಡೆದಿದ್ದು, 1,000ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ.
ರಿಯಲ್‌ಮಿ ನಾರ್ಜೋ 60 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಬೆಂಬಲದೊಂದಿಗೆ ಕೆಲಸ ಮಾಡಲಿದೆ. ಹಾಗೆಯೇ 8GB RAM + 256 GB ಆಂತರೀಕ ಸ್ಟೋರೇಜ್ ಹೊಂದಿದೆ. ಜೊತೆಗೆ ಈ ಫೋನಿನ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಹಾಗೆಯೇ 16 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ರಿಯಲ್‌ಮಿ ನಾರ್ಜೋ 60 ಪ್ರೊ 5G ಫೀಚರ್ಸ್ ಹೀಗಿವೆ :
ರಿಯಲ್‌ಮಿ ನಾರ್ಜೋ 60 ಪ್ರೊ 5G ಮೊಬೈಲ್ 6.7 ಇಂಚಿನ ಕರ್ವ್ಡ ಹೆಚ್‌ಡಿ+ ಸೂಪರ್ ಅಮೋಲೆಡ್ ಮಾದರಿಯ ಡಿಸ್‌ಪ್ಲೇ ಪಡೆದಿದ್ದು, 2,400 x 1,080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, 24GB RAM ಹಾಗೂ 1TB RAM ವರೆಗಿನ ಇಂಟರ್ ಸ್ಟೋರೇಜ್ ಆಯ್ಕೆ ಒಳಗೊಂಡಿದೆ.
ಇದಲ್ಲದೆ ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 100 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಪ್ರಾಥಮಿಕ ಕ್ಯಾಮೆರಾ ಇದೆ. ಹಾಗೆಯೆ 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಹೊಂದಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 67W ಸೂಪರ್‌ವೂಕ್ ಚಾರ್ಜಿಂಗ್‌ಗೆ ಸಪೋರ್ಟ್ ಸಹ ಪಡೆದಿದೆ.


Click it and Unblock the Notifications








