ಕುತೂಹಲ ಮೂಡಿಸಿದ್ದ ರಿಯಲ್‌ಮಿ ನಾರ್ಜೋ 60 ಪ್ರೊ ಲಾಂಚ್: 1TB ಸ್ಟೋರೇಜ್ ಆಯ್ಕೆ, ಬೆಲೆ ಎಷ್ಟು!?
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ರಿಯಲ್‌ಮಿ (Realme) ಕಂಪೆನಿ ಕೊನೆಗೂ ತನ್ನ ನಾರ್ಜೋ ಸರಣಿ ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಫೋನ್‌ಗಳು ವಿಶೇಷ ವಿನ್ಯಾಸದಿಂದ ಕೂಡಿದ್ದು, ಬರೋಬ್ಬರಿ 1TB ಸ್ಟೋರೇಜ್ ಸಾಮರ್ಥ್ಯದ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡಲು ಮುಂದಾಗಿವೆ.
ಹೌದು, ರಿಯಲ್‌ಮಿ ಕೊನೆಗೂ ನಾರ್ಜೋ 60 ಸರಣಿಯ ಫೋನ್‌ಗಳನ್ನು ಅನಾವರಣ ಮಾಡಿದ್ದು, ಅದರಲ್ಲಿ ರಿಯಲ್‌ಮಿ ನಾರ್ಜೋ 60 ಪ್ರೊ (Realme Narzo 60 Pro) ಫೋನ್ ಬಹಳ ವಿಶೇಷ ಎನಿಸಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ಉತ್ತಮ ಕಾರ್ಯಕ್ಷಮತೆ ನಿರೀಕ್ಷೆ ಮಾಡಬಹುದಾಗಿದೆ. ಹಾಗಿದ್ರೆ, ಈ ವಿಶೇಷ ಪೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರಗಳನ್ನು ತಿಳಿಯೋಣ ಬನ್ನಿ.

ರಿಯಲ್‌ಮಿ ನಾರ್ಜೋ 60 ಪ್ರೊ ಡಿಸ್‌ಪ್ಲೇ ವಿವರ: ಈ ಫೋನ್ 6.7 ಇಂಚಿನ ಕರ್ವ್ಡ ಹೆಚ್‌ಡಿ+ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 2,400 x 1,080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದು 1260Hz ಟಚ್ ಸ್ಯಾಂಪಲಿಂಗ್ ರೇಟ್ ಹೊಂದಿದ್ದು, 2160Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಆಯ್ಕೆ ಪಡೆದಿದೆ. ಈ ಮೂಲಕ ಬಳಕೆದಾರರಿಗೆ ಹೊಸ ಅನುಭವ ಸಿಗಲಿದೆ.
ರಿಯಲ್‌ಮಿ ನಾರ್ಜೋ 60 ಪ್ರೊ ಪ್ರೊಸೆಸರ್ ಹಿತಿ: ಇದರ ಪ್ರೊಸೆಸರ್ ವಿಚಾರಕ್ಕೆ ಬರುವುದಾದರೆ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 24GB RAM ಹಾಗೂ 1TB RAM ವರೆಗಿನ ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಅಂದರೆ ಇದರಲ್ಲಿ 12GB ಫಿಸಿಕಲ್ RAM ಆಯ್ಕೆ ಇದ್ದು, ಉಳಿದ 12GB ಡೈನಾಮಿಕ್ RAM ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್ 13 ಆಧಾರಿತ ರಿಯಲ್‌ಮಿ ಯುಐ 4.0 ಅನ್ನು ರನ್ ಮಾಡುತ್ತದೆ.
ರಿಯಲ್‌ಮಿ ನಾರ್ಜೋ 60 ಪ್ರೊ ಕ್ಯಾಮೆರಾ ರಚನೆ: ಇದು ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಆಯ್ಕೆಯೊಂದಿಗೆ 100 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಹೊಂದಿದೆ. ಈ ಕ್ಯಾಮೆರಾ ಆಟೋ ಜೂಮ್ ಫೀಚರ್ಸ್ ಅನ್ನು ಹೊಂದಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ರಿಯಲ್‌ಮಿ ನಾರ್ಜೋ 60 ಪ್ರೊ ಬ್ಯಾಟರಿ ಹಾಗೂ ಇತರೆ: ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಈ ಬ್ಯಾಟರಿಯು 67W ಸೂಪರ್‌ವೂಕ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಉಳಿದಂತೆ ಕಾಸ್ಮಿಕ್ ನೈಟ್ ಆಯ್ಕೆಯು ಫೋನ್ 185 ಗ್ರಾಂ ತೂಕ ಹೊಂದಿದ್ದು, ಮಾರ್ಟಿಯನ್ ಸನ್‌ರೈಸ್ ವೇರಿಯಂಟ್ ಫೋನ್ 191 ಗ್ರಾಂ ತೂಗುತ್ತದೆ. ಜೊತೆಗೆ ಅತ್ಯುತ್ತಮ ಬ್ಲೂಟೂತ್ ಹಾಗೂ ವೈ-ಫೈ ಸೇರಿದಂತೆ ಇನ್ನಿತರೆ ಕನೆಕ್ಟಿಟಿವಿ ಸೌಲಭ್ಯ ಪಡೆದಿದೆ.
ರಿಯಲ್‌ಮಿ ನಾರ್ಜೋ 60 ಪ್ರೊ ಬೆಲೆ ಹಾಗೂ ಲಭ್ಯತೆ: ಈ ಫೋನ್ ವಿವಿಧ ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ ಇದ್ದು ಅದರಲ್ಲಿ 8GB RAM + 128GB ಸ್ಟೋರೇಜ್ ಆಯ್ಕೆಯ ಫೋನ್‌ಗೆ 23,999ರೂ.ಗಳನ್ನು ನಿಗದಿ ಮಾಡಲಾಗಿದ್ದು, 12GB + 256GB ವೇರಿಯಂಟ್‌ಗೆ 26,999 ರೂ.ಗಳ ಬೆಲೆ ಇದೆ. ಹಾಗೆಯೇ 12GB + 1TB ಸ್ಟೋರೇಜ್ ಆಯ್ಕೆಯ ಫೋನ್ 29,999ರೂ.ಗಳ ಬೆಲೆ ಪಡೆದುಕೊಂಡಿದೆ.

ಈ ಫೋನ್‌ನೊಂದಿಗೆ ರಿಯಲ್‌ಮಿ ನಾರ್ಜೋ 60 ಫೋನ್ ಸಹ ಬಹಳ ಸದ್ದು ಮಾಡುತ್ತಿದ್ದು, ಇದೂ ಸಹ 6.43 ಇಂಚಿನ ಫುಲ್ ಹೆಚ್‌ಡಿ+ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ನಿಂದ ಕಾರ್ಯಿರ್ವಹಿಸಲಿದೆ. ಇದರೊಂದಿಗೆ 6GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಇದೆಲ್ಲಕ್ಕೂ ಮಿಗಿಲಾಗಿ 64 ಮೆಗಾಪಿಕ್ಸೆಲ್ ಪ್ರಾಥಮಿಕ ರಿಯರ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಕರ್ಷಕವಾಗಿದೆ. ಈ ಫೋನ್ ಬೆಲೆ 17,999 ರೂ.ಗಳಿಂದ ಆರಂಭ ಆಗುತ್ತದೆ.


Click it and Unblock the Notifications








