ಕರ್ವ್ ಡಿಸ್‌ಪ್ಲೇಯ ಈ ಫೋನಿನ ಬೆಲೆಯಲ್ಲಿ ಸಖತ್ ಇಳಿಕೆ!..100ಎಂಪಿ ಕ್ಯಾಮೆರಾ!
ರಿಯಲ್‌ಮಿ ಮೊಬೈಲ್ ಕಂಪನಿಯ ಇತ್ತೀಚಿನ ರಿಯಲ್‌ಮಿ ನಾರ್ಜೋ 60 ಪ್ರೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇದೀಗ ಬೊಂಬಾಟ್ ರಿಯಾಯಿತಿ ಲಭ್ಯವಾಗಿದೆ. ಕರ್ವ್ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿರುವ ಈ ಫೋನ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಈಗ ಭರ್ಜರಿ ಡಿಸ್ಕೌಂಟ್ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ.
ಹೌದು, ದೈತ್ಯ ಇ ಕಾಮರ್ಸ್ ತಾಣ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ರಿಯಲ್‌ಮಿ ನಾರ್ಜೋ 60 ಪ್ರೊ ಮೊಬೈಲ್ 11% ರಷ್ಟು ರಿಯಾಯಿತಿ ಪಡೆದಿದೆ. 8GB RAM + 128GB ಸ್ಟೋರೇಜ್ ಆರೇಂಜ್ ಕಲರ್ ವೇರಿಯಂಟ್ 26,999ರೂ. ಬೆಲೆಯನ್ನು ಹೊಂದಿದ್ದು, ಇದೀಗ 23,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇತರೆ ಆಯ್ದ ಬ್ಯಾಂಕ್‌ಗಳಿಂದಲೂ ಡಿಸ್ಕೌಂಟ್ ಲಭ್ಯವಾಗಲಿದೆ.

ಅಂದಹಾಗೆ ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಪ್ರಾಥಮಿಕ ಕ್ಯಾಮೆರಾವು 100 ಮೆಗಾಪಿಕ್ಸಲ್ ಆಗಿದೆ. ಹಾಗೆಯೇ 5,000 mAh ಬ್ಯಾಟರಿ ಬ್ಯಾಕ್‌ಅಪ್ ಸಹ ಒಳಗೊಂಡಿದೆ. ಇನ್ನುಳಿದಂತೆ ರಿಯಲ್‌ಮಿ ನಾರ್ಜೋ 60 ಪ್ರೊ ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ ನಾರ್ಜೋ 60 ಪ್ರೊ ಡಿಸ್‌ಪ್ಲೇ ಮತ್ತು ರಚನೆ : ರಿಯಲ್‌ಮಿ ನಾರ್ಜೋ 60 ಪ್ರೊ ಮೊಬೈಲ್ 6.7 ಇಂಚಿನ ಕರ್ವ್ಡ ಹೆಚ್‌ಡಿ+ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಪಡೆದಿದ್ದು, 2,400 x 1,080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದು 1260Hz ಟಚ್ ಸ್ಯಾಂಪಲಿಂಗ್ ರೇಟ್ ಹೊಂದಿದ್ದು, 2160Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಆಯ್ಕೆ ಒಳಗೊಂಡಿದೆ.
ರಿಯಲ್‌ಮಿ ನಾರ್ಜೋ 60 ಪ್ರೊ ಪ್ರೊಸೆಸರ್ ಯಾವುದು : ರಿಯಲ್‌ಮಿ ನಾರ್ಜೋ 60 ಪ್ರೊ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, 24GB RAM ಹಾಗೂ 1TB RAM ವರೆಗಿನ ಆಂತರೀಕ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಅಂದರೆ ಇದರಲ್ಲಿ 12GB ಫಿಸಿಕಲ್ RAM ಆಯ್ಕೆ ಇದ್ದು, ಉಳಿದ 12GB ಡೈನಾಮಿಕ್ RAM ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್ 13 ಆಧಾರಿತ ಓಎಸ್ ಇದೆ.
ರಿಯಲ್‌ಮಿ ನಾರ್ಜೋ 60 ಪ್ರೊ ಕ್ಯಾಮೆರಾ ಮಾಹಿತಿ : ರಿಯಲ್‌ಮಿ ನಾರ್ಜೋ 60 ಪ್ರೊ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. ಅವುಗಳು 100 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಆಗಿವೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.
ರಿಯಲ್‌ಮಿ ನಾರ್ಜೋ 60 ಪ್ರೊ ಬ್ಯಾಟರಿ ಹಾಗೂ ಇತರೆ ಆಯ್ಕೆ : ರಿಯಲ್‌ಮಿ ನಾರ್ಜೋ 60 ಪ್ರೊ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಇದ್ದು, 67W ಸೂಪರ್‌ವೂಕ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ. ಈ ಫೋನ್ ಬ್ಲೂಟೂತ್ ಹಾಗೂ ವೈ-ಫೈ ಸೇರಿದಂತೆ ಇನ್ನಿತರೆ ಕನೆಕ್ಟಿಟಿವಿ ಸೌಲಭ್ಯ ಪಡೆದಿದೆ.
ರಿಯಲ್‌ಮಿ ನಾರ್ಜೋ 60 ಪ್ರೊ ಮೆಮೊರಿ ಹಾಗೂ ಕಲರ್ : ರಿಯಲ್‌ಮಿ ನಾರ್ಜೋ 60 ಪ್ರೊ ಫೋನ್ 8GB RAM + 128GB ಸ್ಟೋರೇಜ್, 12GB + 256GB ಸ್ಟೋರೇಜ್ ಹಾಗೂ 12GB + 1TB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಗ್ರಾಹಕರು ರಿಯಲ್‌ಮಿ ನಾರ್ಜೋ 60 ಪ್ರೊ ಫೋನ್ ಅನ್ನು ಬ್ಲ್ಯಾಕ್ ಮತ್ತು ಆರೇಂಜ್ ಕಲರ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








