Home
ಸುದ್ದಿಜಾಲ

ಬರೋಬ್ಬರಿ 1TB ಸ್ಟೋರೇಜ್‌ನಲ್ಲಿ ಕಾಣಿಸಿಕೊಳ್ಳಲಿದೆ ಈ ಫೋನ್‌; ಬೆಲೆ ಎಷ್ಟಿರಬಹುದು!?

ರಿಯಲ್‌ಮಿಯ ಫೋನ್‌ಗಳು ಇತ್ತೀಚೆಗೆ ಮೊಬೈಲ್‌ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿವೆ. ಇದಕ್ಕೆ ಮುಖ್ಯ ಕಾರಣ ವಿಶೇಷ ಫೀಚರ್ಸ್‌ ಆಯ್ಕೆ. ಈ ನಡುವೆ ರಿಯಲ್‌ಮಿ ಮತ್ತೊಂದು ಹೊಸ ಫೋನ್‌ ಅನ್ನು ಅನಾವರಣ ಮಾಡಲು ಮುಂದಾಗಿದ್ದು, ಇದು ಬರೋಬ್ಬರಿ 1TB ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಹೌದು, ಶೀಘ್ರದಲ್ಲೇ ಲಾಂಚ್‌ ಆಗಲು ಸಜ್ಜಾಗಿರುವ ರಿಯಲ್‌ಮಿ ನಾರ್ಜೋ 60 (Realme Narzo 60) ಸರಣಿ ಫೋನ್‌ ವಿಶೇಷ ಫೀಚರ್ಸ್‌ ಹೊಂದಿರಲಿದೆ ಎನ್ನಲಾಗಿದ್ದು. ಇದರಲ್ಲಿನ 1TB ಸ್ಟೋರೇಜ್‌ ಆಯ್ಕೆ ಮಾತ್ರ ಭಾರೀ ಸದ್ದು ಮಾಡುತ್ತಿದೆ. ಹಾಗಿದ್ರೆ, ಈ ಫೋನ್‌ನ ನಿರೀಕ್ಷಿತ ಫೀಚರ್ಸ್‌ ಹಾಗೂ ನಿರೀಕ್ಷಿತ ಬೆಲೆ ವಿವರ ಸೇರಿದಂತೆ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬರೋಬ್ಬರಿ 1TB ಸ್ಟೋರೇಜ್‌ನಲ್ಲಿ ಕಾಣಿಸಿಕೊಳ್ಳಲಿದೆ ಈ ಫೋನ್‌; ಬೆಲೆ ಎಷ್ಟಿರಬಹುದು!

ರಿಯಲ್‌ಮಿ ನಾರ್ಜೋ 60: ರಿಯಲ್‌ಮಿ ನಾರ್ಜೋ 60 ಸ್ಮಾರ್ಟ್‌ಫೋನ್ ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ. ಆದರೆ ಇದು ಲಾಂಚ್ ಆಗುವ ಮುನ್ನವೇ ಭಾರೀ ಸದ್ದು ಮಾಡುತ್ತಿದ್ದು, ಈ ಮಧ್ಯಮ ಶ್ರೇಣಿಯ 5G ಫೋನ್ ಬಗ್ಗೆ ರಿಯಲ್‌ಮಿ ತನ್ನ ಸಾಮಾಜಿಕ ಮಾಧ್ಯಮ ಚಾನಲ್‌ಗಳ ಮೂಲಕ ಕೆಲವು ಅಚ್ಚರಿ ಮಾಹಿತಿ ನೀಡುತ್ತಾ ಬರುತ್ತಿದೆ. ಅದರಲ್ಲೂ ಟಿಪ್‌ಸ್ಟರ್ ಮುಕುಲ್ ಶರ್ಮಾ ಪ್ರಕಾರ, 1TB ಇಂಟರ್‌ ಸ್ಟೋರೇಜ್‌ನಲ್ಲಿ ಈ ಫೋನ್‌ ಕಾಣಿಸಿಕೊಳ್ಳಲಿದೆಯಂತೆ.

ಇದರೊಂದಿಗೆ ಅಮೆಜಾನ್‌ನಲ್ಲಿ ಪೋಸ್ಟ್ ಮಾಡಲಾದ ಟೀಸರ್‌ನಲ್ಲಿ ಗಡಿಗಳನ್ನು ಮೀರಿದ ಸಂಗ್ರಹಣೆ ಎಂದು ಉಲ್ಲೇಖ ಮಾಡಲಾಗಿದೆ. ಈ ಮೂಲಕ ಈ ಸ್ಮಾರ್ಟ್‌ಫೋನ್ ಹೆಚ್ಚಿನ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ ಇರಲಿದೆ ಎಂದು ತೋರುತ್ತದೆ. ಅಷ್ಟು ಮಾತ್ರವಲ್ಲ ಈ ಫೋನ್‌ 2,50,000 ಕ್ಕೂ ಹೆಚ್ಚು ಫೋಟೋಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದೂ ಸಹ ಟೀಸರ್‌ನಲ್ಲಿ ತಿಳಿಸಲಾಗಿದೆ.

ಈ ನಡುವೆ ಪ್ರೊ ಮಾದರಿಯನ್ನು ಘೋಷಿಸುವ ನಿರೀಕ್ಷೆಯಿದ್ದು, ಇದರಲ್ಲಿ ಪ್ರೊ ಮಾದರಿ 1TB ಸ್ಟೋರೇಜ್‌ ಸಾಮರ್ಥ್ಯ ಪಡೆಯಲಿದೆಯೋ ಅಥವಾ ರಿಯಲ್‌ಮಿ ನಾರ್ಜೋ 60 ಸ್ಮಾರ್ಟ್‌ಫೋನ್‌ ಈ ಸ್ಟೋರೇಜ್‌ ಸಾಮರ್ಥ್ಯ ಪಡೆಯಲಿದೆಯೋ ಎಂದು ತಿಳಿದಿಲ್ಲ. ಜೊತೆಗೆ ಕಂಪೆನಿಯು ಸಹ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ನಡುವೆ ಈ ಫೋನ್‌ನ ಕೆಲವು ಲೀಕ್‌ ಫೀಚರ್ಸ್‌ ಕಡೆ ಕಣ್ಣಾಯಿಸೋಣ ಬನ್ನಿ.

ಈ ಫೋನ್ 6.4 ಇಂಚಿನ ಫುಲ್‌ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿರಲಿದ್ದು, ಇದು 90Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಳ್ಳಿದೆ ಎನ್ನಲಾಗಿದೆ. ಜೊತೆಗೆ ಮೀಡಿಯಾ ಟೆಕ್‌ ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಮಾಲಿ G57 MC2 ಜಿಪಿಯು ಬೆಂಬಲ ಪಡೆದುಕೊಳ್ಳಲಿದೆ ಎಂದು ತೋರುತ್ತದೆ. ಹಾಗೆಯೇ ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸರ್ ಜೊತೆಗೆ 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಆಯ್ಕೆ ಇದರಲ್ಲಿ ಇರಲಿದೆ ಎನ್ನುವ ಮಾತುಗಳು ಸಹ ಕೇಳಿ ಬಂದಿವೆ.

ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆಯೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆ ಇರಲಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಪಂಚ್-ಹೋಲ್ ಡಿಸ್‌ಪ್ಲೇ ವಿನ್ಯಾಸ ಹೊಂದಿದೆ. ಈ ನಡುವೆ ಓಸ್‌ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಿದ್ದು, ಆಂಡ್ರಾಯ್ಡ್‌ 13 ಓಎಸ್‌ ಇದರಲ್ಲಿ ರನ್‌ ಆಗಲಿದೆ ಎಂದು ತೋರುತ್ತದೆ. ಯಾಕೆಂದರೆ ಆಂಡ್ರಾಯ್ಡ್‌ 14 ಓಎಸ್‌ ಆವೃತ್ತಿ ಇನ್ನೂ ಲಾಂಚ್‌ ಆಗಿಲ್ಲ.

ಬರೋಬ್ಬರಿ 1TB ಸ್ಟೋರೇಜ್‌ನಲ್ಲಿ ಕಾಣಿಸಿಕೊಳ್ಳಲಿದೆ ಈ ಫೋನ್‌; ಬೆಲೆ ಎಷ್ಟಿರಬಹುದು!

ಇನ್ನುಳಿದಂತೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, ಇದು 33W ವೇಗದ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಬೆಂಬಲ ಪಡೆದುಕೊಳ್ಳಲಿದೆ. ಜೊತೆಗೆ ಬಾಕ್ಸ್‌ನಲ್ಲಿಯೇ ಚಾರ್ಜರ್ ಅನ್ನು ಬಂಡಲ್ ಮಾಡುತ್ತದೆ ಎಂದೂ ಸಹ ಹೇಳಲಾಗುತ್ತಿದೆ. ಈ ಎಲ್ಲಾ ವಿಶೇಷ ಫೀಚರ್ಸ್‌ ನೊಂದಿಗೆ ಇದು 21,999 ರೂ.ಗಳಿಂದ 30,000ರೂ.ಗಳ ಬೆಲೆ ಹೊಂದಿರಬಹುದು ಎಂದು ಹೇಳಲಾಗಿದೆ.

Best Mobiles in India

English summary
It is said that Realme Narzo 60 series phone which is ready to be released soon will appear with special features. Mainly the 1TB storage option is making a big noise.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+