Home
ಸುದ್ದಿಜಾಲ

33W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯದ ಈ ಫೋನ್‌ ಬೆಲೆಯಲ್ಲಿ ಸಖತ್‌ ಇಳಿಕೆ!

ಅಮೆಜಾನ್‌ ದಸರಾ ಪ್ರಯುಕ್ತ ಅಂಗವಾಗಿ ಆಯೋಜಿಸಿರುವ ಅಮೆಜಾನ್ ಗ್ರೇಟ್‌ ಇಂಡಿಯನ್ ಫೆಸ್ಟಿವಲ್ ಸೇಲ್‌ ಈಗಾಗಲೇ ಆನ್‌ಲೈನ್‌ ಶಾಪಿಂಗ್ ಪ್ರಿಯರ ಗಮನ ಸೆಳೆದಿದೆ. ಈ ಸೇಲ್‌ನಲ್ಲಿ ಮೊಬೈಲ್‌ ಫೋನ್‌ಗಳು ಆಕರ್ಷಕ ರಿಯಾಯಿತಿ ಪಡೆದಿದ್ದು, ಆ ಪೈಕಿ ರಿಯಲ್‌ಮಿ ನಾರ್ಜೊ 60x ಮೊಬೈಲ್‌ ಭರ್ಜರಿ ಡಿಸ್ಕೌಂಟ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಹೌದು, ಅಮೆಜಾನ್‌ ತಾಣದ ಗ್ರೇಟ್‌ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ರಿಯಲ್‌ಮಿ ನಾರ್ಜೊ 60x ಮೊಬೈಲ್‌ ಶೇ. 18% ರಷ್ಟು ಡಿಸ್ಕೌಂಟ್‌ ಪಡೆದಿದ್ದು, 4GB + 128GB ವೇರಿಯಂಟ್‌ ಫೋನ್‌ 12,249 ರೂ. ಗಳ ದರದಲ್ಲಿ ಲಭ್ಯ ಇದೆ. ಇದಲ್ಲದೇ ಆಯ್ದ ಬ್ಯಾಂಕ್ ಆಫರ್‌, ಎಕ್ಸ್‌ಚೇಂಜ್ ಕೊಡುಗೆ ಹಾಗೂ ಇತರೆ ಆಫರ್‌ ಸೇರಿ ಈ ಫೋನ್‌ ಅನ್ನು 11,499ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

33W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯದ ಈ ಫೋನ್‌ ಬೆಲೆಯಲ್ಲಿ ಸಖತ್‌ ಇಳಿಕೆ!

ಅಂದಹಾಗೆ ರಿಯಲ್‌ಮಿ ನಾರ್ಜೊ 60x ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ ಈ ಫೋನ್‌ 4GB + 128GB ಆಂತರೀಕ ಸ್ಟೋರೇಜ್‌ ಆಯ್ಕೆ ಸಹ ಪಡೆದುಕೊಂಡಿದೆ. ಹಾಗಾದರೇ ಇನ್ನುಳಿದಂತೆ ರಿಯಲ್‌ಮಿ ನಾರ್ಜೊ 60x ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಹಾಗೂ ರಚನೆ ಹೀಗಿದೆ

ರಿಯಲ್‌ಮಿ ನಾರ್ಜೊ 60x ಮೊಬೈಲ್‌ 6.74 ಇಂಚಿನ IPS LCD ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಜೊತೆಗೆ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಸಪೋರ್ಟ್‌ ಕೂಡಾ ಪಡೆದಿದೆ.

ಪ್ರೊಸೆಸರ್‌ ಪವರ್‌ ಹೀಗಿದೆ

ರಿಯಲ್‌ಮಿ ನಾರ್ಜೊ 60x ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ ಪವರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಆಧಾರಿತ Realme UI 4.0 ನಲ್ಲಿ ರನ್ ಆಗುತ್ತದೆ. ಹಾಗೆಯೇ 6GB ಅಥವಾ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯ ವಿಸ್ತರಿಸುವ ಆಯ್ಕೆ ಇದೆ.

ಕ್ಯಾಮೆರಾ ಸೆನ್ಸಾರ್‌ ರಚನೆ ಹೀಗಿದೆ

ರಿಯಲ್‌ಮಿ ನಾರ್ಜೊ 60x ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌, ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಪಡೆದಿದೆ. ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ ಆಯ್ಕೆಗಳ ಮಾಹಿತಿ

ರಿಯಲ್‌ಮಿ ನಾರ್ಜೊ 60x ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದು 33W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಸೌಲಭ್ಯ ಸಹ ಒಳಗೊಂಡಿದೆ.

ಮೆಮೊರಿ ಹಾಗೂ ಕಲರ್ ಆಯ್ಕೆ

ರಿಯಲ್‌ಮಿ ನಾರ್ಜೊ 60x ಫೋನ್‌ 4 GB + 128 GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿದ್ದು, 2TB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಪಡೆದಿದೆ. ಇನ್ನು ಈ ಫೋನ್‌ ಬ್ಲೂ ಮತ್ತು ಪರ್ಪಲ್‌ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Realme narzo 60X 5G huge price drop on amazon. check out offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+