Home
ಸುದ್ದಿಜಾಲ

Realme: ರಿಯಲ್‌ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್‌ಫೋನ್‌ ಲಾಂಚ್‌! ಸಖತ್‌ ಫೀಚರ್ಸ್‌... ಬೆಲೆ ಎಷ್ಟು?

ರಿಯಲ್‌ಮಿ (Realme) ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಾದ ರಿಯಲ್‌ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್‌ಫೋನ್‌ (Realme Narzo 70 5G, Narzo 70x 5G Smartphone) ಅನ್ನು ಇದೀಗ ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು ವಿಶೇಷ ಫೀಚರ್ಸ್‌ ಆಯ್ಕೆಯೊಂದಿಗೆ ಮೀಡಿಯಾಟೆಕ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ .

ಹೌದು, ರಿಯಲ್‌ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಅನಾವರಣ ಮಾಡಲಾಗಿದ್ದು, ಈ ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿವೆ. ಇದರ ಜೊತೆಗೆ IP54-ರೇಟೆಡ್ ಅನ್ನೂ ಸಹ ಪಡೆದಿವೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ವಿವರದ ಮಾಹಿತಿ ಇಲ್ಲಿದೆ ನೋಡಿ.

ರಿಯಲ್‌ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್‌ಫೋನ್‌ ಲಾಂಚ್‌!..

ರಿಯಲ್‌ಮಿ ನಾರ್ಜೋ 70 5G ಫೀಚರ್ಸ್‌: ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ (1,080x2,400 ಪಿಕ್ಸೆಲ್‌) ಅಮೋಲೆಡ್‌ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 1,200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ UI 5.0 ಸ್ಕಿನ್‌ನಲ್ಲಿ ರನ್‌ ಆಗಲಿದ್ದು, ಮೂರು ವರ್ಷಗಳ ಭದ್ರತಾ ನವೀಕರಣಗಳು ಮತ್ತು ಎರಡು ವರ್ಷಗಳ ಸಾಫ್ಟ್‌ವೇರ್ ನವೀಕರಣದ ಭರವಸೆ ನೀಡಲಾಗಿದೆ. ಇದರ ಜೊತೆಗೆ ಈ ಫೋನ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ ಮಾಲಿ-ಜಿ 68 ಜಿಪಿಯು ಬಲ ಪಡೆದಿದೆ ಇನ್ನು 6GB ಮತ್ತು 8GB RAM ಆಯ್ಕೆಗಳಲ್ಲಿ ಲಭ್ಯ ಇದ್ದು , RAM ವಿಸ್ತರಣೆಯ ಆಯ್ಕೆ ಸಹ ಇದೆ.

ರಿಯಲ್‌ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್‌ಫೋನ್‌ ಲಾಂಚ್‌!..

ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಡ್ಯುಯಲ್ ರಿಯರ್ ಕ್ಯಾಮೆರಾ ಫೀಚರ್ಸ್‌ ಹೊಂದಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ f/1.8 ಅಪರ್ಚರ್ ಮತ್ತು 2-ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ಪಡೆದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್‌ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಉಳಿದಂತೆ ಈ ಫೋನ್ 5G, ವೈ ಫೈ ಮತ್ತು ಬ್ಲೂಟೂತ್ ಆವೃತ್ತಿ 5.2 ಅನ್ನು ಒಳಗೊಂಡಿವೆ.

ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌, ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಹೊಂದಿದ್ದು, ಹೈ-ರೆಸ್ ಆಡಿಯೊ ಪ್ರಮಾಣೀಕರಣದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಮಿಗಿಲಾಗಿ ಒದ್ದೆಯಾದ ಕೈಗಳಿಂದ ಈ ಫೋನ್ ಬಳಸುವಾಗ ಟಚ್ ಇನ್‌ಪುಟ್ ಅನ್ನು ವರ್ಧಿಸಲು ಇದು ರೈನ್‌ವಾಟರ್ ಸ್ಮಾರ್ಟ್ ಟಚ್ ಫೀಚರ್ಸ್‌ ಅನ್ನು ಸಹ ಪಡೆದಿದೆ.

ಇದರ ಜೊತೆಗೆ ರಿಯಲ್‌ಮಿ 45W ಸೂಪರ್‌ವೂಕ್‌ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಆಯ್ಕೆ ಪಡೆದಿದೆ. ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ 518 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಕೇವಲ 61 ನಿಮಿಷಗಳಲ್ಲಿ ಫೋನ್‌ ಅನ್ನು 100 ಪ್ರತಿಶತದಷ್ಟು ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ ಎಂದು ಕಂಪೆನಿ ಹೇಳಿದೆ.

ರಿಯಲ್‌ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್‌ಫೋನ್‌ ಲಾಂಚ್‌!..

ರಿಯಲ್‌ಮಿ ನಾರ್ಜೋ 70x 5G ಫೀಚರ್ಸ್‌: ಈ ಫೋನ್ 6.72 ಇಂಚಿನ ಫುಲ್‌ ಹೆಚ್‌ಡಿಪ್ಲಸ್‌ (1,080x2,400 ಪಿಕ್ಸೆಲ್‌) ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಆಯ್ಕೆ ಪಡೆದಿದ್ದು, ಈ ಮೂಲಕ ಉತ್ತಮ ವೀಕ್ಷಣೆ ಅನುಭವವನ್ನು ನೀಡಲಿದೆ.

ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು. ಆರ್ಮ್ ಮಾಲಿ-ಜಿ 57 ಜಿಪಿಯು ಬಲದೊಂದಿಗೆ 6GB RAM ಸ್ಟೋರೇಜ್‌ ಆಯ್ಕೆ ಪಡೆದಿದೆ. ಇದರಲ್ಲೂ ಸಹ ಡೈನಾಮಿಕ್ RAM ಫೀಚರ್ಸ್ ಆಯ್ಕೆ ನೀಡಲಾಗಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಶೂಟರ್ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಹಾಗೂ ಈ ಫೋನ್ ಬ್ಯಾಟರಿ ಎಚ್ಚರಿಕೆಗಳು ಮತ್ತು ಚಾರ್ಜಿಂಗ್ ಸ್ಟೇಟಸ್‌ ಅನ್ನು ತೋರಿಸುವ ಮಿನಿ ಕ್ಯಾಪ್ಸುಲ್ 2.0 ಫೀಚರ್ಸ್ ಅನ್ನು ಪಡೆದಿದೆ.

ರಿಯಲ್‌ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್‌ಫೋನ್‌ ಲಾಂಚ್‌!..

ಕನೆಕ್ಟಿವಿಟಿ ಆಯ್ಕೆಗಳು ಮತ್ತು ಆಡಿಯೊ ಫೀಚರ್ಸ್‌ ವಿಭಾಗದಲ್ಲಿ ರಿಯಲ್‌ಮಿ ನಾರ್ಜೋ 70 5G ಅನ್ನೇ ಹೋಲಲಿದೆ. ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್‌ ಮತ್ತು IP54-ರೇಟೆಡ್ ಬಿಲ್ಡ್ ಅನ್ನು ಸಹ ಹೊಂದಿದ್ದು, 45W ಸೂಪರ್‌ವೂಕ್‌ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಊಈ ಫೋನ್‌ ಪಡೆದುಕೊಂಡಿದೆ.

ರಿಯಲ್‌ಮಿ ನಾರ್ಜೋ 70 5G, ರಿಯಲ್‌ಮಿ ನಾರ್ಜೋ 70x 5G ಬೆಲೆ ಹಾಗೂ ಲಭ್ಯತೆ: ರಿಯಲ್‌ಮಿ ನಾರ್ಜೋ 70 5G ಸ್ಮಾರ್ಟ್‌ಫೋನ್‌ನ 6GB RAM + 128GB ಸ್ಟೋರೇಜ್ ವೇರಿಯಂಟ್‌ಗೆ 14,999 ರೂ.ಗಳ ಬೆಲೆ ಇದ್ದು, 8GB RAM + 128GB ಸ್ಟೋರೇಜ್ ವೇರಿಯಂಟ್‌ಗೆ 15,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಅದೇ ರೀತಿ ರಿಯಲ್‌ಮಿ ನಾರ್ಜೋ 70x 5G ಫೋನ್‌ನ 4GB RAM + 128GB ಸ್ಟೋರೇಜ್ ವೇರಿಯಂಟ್‌ಗೆ 10,999 ರೂ.ಗಳು ಹಾಗೂ 6GB RAM + 128GB ವೇರಿಯಂಟ್‌ಗೆ 11,999 ರೂ.ಗಳ ಬೆಲೆ ಇದ್ದು, ಎರಡೂ ಫೋನ್‌ಗಳು ಫಾರೆಸ್ಟ್ ಗ್ರೀನ್ ಮತ್ತು ಐಸ್ ಬ್ಲೂ ಶೇಡ್‌ಗಳಲ್ಲಿ ಕಾಣಿಸಿಕೊಂಡಿವೆ.

Best Mobiles in India

English summary
Realme Narzo 70 5G, Narzo 70x 5G smartphones have been unveiled in India and these phones have opted for a 5,000mAh capacity battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+