Home
ಸುದ್ದಿಜಾಲ

Realme: ಹೊಸ ಫೋನ್ ಬಿಡುಗಡೆಗೆ ಸಿದ್ಧ; ಬೆಲೆ ಎಷ್ಟು? ಹೇಗಿವೆ ಫೀಚರ್ಸ್‌

ರಿಯಲ್‌ಮಿ ತನ್ನ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದೆ. ಶೀಘ್ರದಲ್ಲೇ ಹೊಸ ಮೊಬೈಲ್ ಗ್ರಾಹಕರ ಕೈ ಸೇರಲಿದೆ. ಹೌದು, ಕಂಪನಿಯು Realme Narzo 70 ಸರಣಿಯಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಲಿದೆ. ಇದು, ರಿಯಲ್‌ಮಿ ನಾರ್ಜೋ 70 ಕರ್ವ್ (Realme Narzo 70 Curve) ಎಂಬ ಹೆಸರಿನೊಂದಿಗೆ ಭಾರತಕ್ಕೆ ಲಗ್ಗೆ ಇಡಲಿದೆ. ರಿಯಲ್‌ಮಿ ಈ ಸ್ಮಾರ್ಟ್‌ಫೋನ್ ಅನ್ನು ಮುಂದಿನ ತಿಂಗಳು (ಡಿಸೆಂಬರ್) ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬನ್ನಿ ಹೊಸ ಫೋನಿನ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಮುಂಬರುವ ರಿಯಲ್‌ಮಿ ನಾರ್ಜೋ 70 ಕರ್ವ್ ಮೊಬೈಲ್ ಡಿಸೆಂಬರ್ ಅಂತ್ಯದ ವೇಳೆಗೆ ಬಿಡುಗಡೆಯಾಗಬಹುದು. ಕಂಪನಿಯು ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ 15,000 ರೂ. ನಿಂದ 20,000 ರೂ. ಬೆಲೆಗೆ ಪರಿಚಯಿಸಹುದು. ಇದರ ವೈಶಿಷ್ಟ್ಯಗಳು ಬಹುತೇಕ ರಿಯಲ್‌ಮಿ ನಾರ್ಜೋ 70 ಸರಣಿಯ ಸ್ಮಾರ್ಟ್‌ಫೋನ್‌ಗಳಂತೆಯೇ ಇರಲಿದೆ. ಫೋನ್‌ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿದೆ. ಆದರೆ, ರಿಯಲ್‌ಮಿ ನಾರ್ಜೋ 70 ಮತ್ತು ರಿಯಲ್‌ಮಿ ನಾರ್ಜೋ 70x ಫೋನ್ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿವೆ. ಇವುಗಳ ಬೆಲೆ ಸಹ 20,000 ರೂ.ಗಿಂತ ಕಡಿಮೆ ಇದೆ.

Realme: ಹೊಸ ಫೋನ್ ಬಿಡುಗಡೆಗೆ ಸಿದ್ಧ; ಬೆಲೆ ಎಷ್ಟು? ಹೇಗಿವೆ ಫೀಚರ್ಸ್‌

ರಿಯಲ್‌ಮಿ ನಾರ್ಜೋ 70 ಸರಣಿಯ ಬೆಲೆ

Realme Narzo 70 5G ಬೆಲೆ = 14,999 ರೂ.
Realme Narzo 70 Pro ಬೆಲೆ = 18,999 ರೂ.
Realme Narzo 70x 5G ಬೆಲೆ = 10,999 ರೂ.
Realme Narzo 70 Turbo 5G ಬೆಲೆ = 16,999 ರೂ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ವೈಶಿಷ್ಟ್ಯಗಳು

ಕಂಪನಿಯು ರಿಯಲ್‌ಮಿ ನಾರ್ಜೋ 70 ಕರ್ವ್ ಫೋನಿನ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಫೋನಿನ ವೈಶಿಷ್ಟ್ಯಗಳು ಮತ್ತು ವಿನ್ಯಾಸ ರಿಯಲ್‌ಮಿ ನಾರ್ಜೋ 70 ಫೋನ್‌ಗಳಂತೆಯೇ ಇರಲಿವೆ. ವಿಶೇಷವೆಂದರೆ, ಮುಂಬರುವ ಫೋನ್ ಕರ್ವ್‌ ಡಿಸ್ಪ್ಲೇಯನ್ನು ಹೊಂದಿರುತ್ತದೆ. ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.

ಡಿಸ್ಪ್ಲೇ ವಿವರ

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್‌ 6.67 ಇಂಚಿನ ಸ್ಯಾಮ್‌ಸಂಗ್ E4 ಒಎಲ್ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ, 200 ನಿಟ್ಸ್‌ ಬ್ರೈಟ್‌ನೆಸ್‌ ಮತ್ತು ಎಜಿ ಡಿಟಿ ಸ್ಟಾರ್ 2 ಗ್ಲಾಸ್ ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5G 4nm ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5.0 ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಫೋನ್ ಮಾಲಿ G615 ಜಿಪಿಯು ಮತ್ತು ಸ್ಟೇನ್‌ಲೆಸ್ ಸ್ಟೀಲ್ ವಿಸಿ (VC) ಕೂಲಿಂಗ್ ಹೊಂದಿದೆ. ಮೊಬೈಲ್‌ನಲ್ಲಿ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಲಭ್ಯವಿದೆ. ಇದು 14GB ಡೈನಾಮಿಕ್ RAM ಬೆಂಬಲವನ್ನು ಸಹ ಹೊಂದಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್‌

ಕಂಪನಿಯು ಈ ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದನ್ನು ಚಾರ್ಜ್ ಮಾಡಲು, 45W ಅಲ್ಟ್ರಾ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಮೊಬೈಲ್ ನೀರು ನಿರೋಧಕ IP65 ರೇಟಿಂಗ್, ಮಳೆ ನೀರಿನ ಟಚ್ ವೈಶಿಷ್ಟ್ಯ ಹೊಂದಿದೆ. ವೈ-ಫೈ 6, ಬ್ಲೂಟೂತ್ 5.4, ಡ್ಯುಯಲ್ ಸ್ಟಿರಿಯೊ, ಸ್ಪೀಕರ್, ಏರ್ ಮತ್ತು ಗೆಸ್ಚರ್, ರೀಡಿಂಗ್ ಮೋಡ್ ಸೇರಿದಂತೆ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Realme Narzo 70 Curve India launch confirmed: Expected Price, Specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+