Home
ಸುದ್ದಿಜಾಲ

ಸದ್ಯದಲ್ಲೇ ಲಾಂಚ್‌ ಆಗಲಿದೆ ರಿಯಲ್‌ಮಿ ನಾರ್ಜೋ 70 ಪ್ರೊ 5G!..ಫೀಚರ್ಸ್‌ ಏನು?

ಜನಪ್ರಿಯ ರಿಯಲ್‌ಮಿ ಮೊಬೈಲ್‌ ಸಂಸ್ಥೆಯು ಇದೀಗ ತನ್ನ ನೂತನ ರಿಯಲ್‌ಮಿ ನಾರ್ಜೋ 70 ಪ್ರೊ 5G ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬರಲಿರುವ ಈ ಫೋನ್‌ ಅನ್ನು ಇದೇ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆಯು ಖಚಿತಪಡಿಸಿದೆ. ಈ ಬಗ್ಗೆ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್ ಕೂಡ ಇದ್ದು, ಕೆಲವು ಹೈಲೈಟ್‌ ಕೀ ಫೀಚರ್ಸ್‌ ಮಾಹಿತಿ ಕಾಣಬಹುದಾಗಿದೆ.

ಹೌದು, ರಿಯಲ್‌ಮಿ ಸಂಸ್ಥೆಯು ರಿಯಲ್‌ಮಿ ನಾರ್ಜೋ 70 ಪ್ರೊ 5G ಫೋನ್‌ ಲಾಂಚ್‌ಗೆ ತಯಾರಿ ನಡೆಸಿದ್ದು, ಇದೇ ಮಾರ್ಚ್ 2024 ರಲ್ಲಿ ಭಾರತಕ್ಕೆ ಲಗ್ಗೆ ಇಡಲಿದೆ. ಅಂದಹಾಗೆ ಈ ಫೋನ್‌ ರಿಯಲ್‌ಮಿ ನಾರ್ಜೋ 60 ಪ್ರೊ 5G ಫೋನಿಗೆ ಉತ್ತರಾಧಿಕಾರಿಯಾಗಿ ಎಂಟ್ರಿ ಕೊಡಲಿದೆ ಎನ್ನಲಾಗಿದೆ. ಆದಾಗ್ಯೂ, ಮಾರ್ಚ್ ತಿಂಗಳಿನಲ್ಲಿ ಖಚಿತ ದಿನಾಂಕವನ್ನು ಸಂಸ್ಥೆಯು ಇನ್ನೂ ಬಹಿರಂಗಪಡಿಸಿಲ್ಲ.

ಸದ್ಯದಲ್ಲೇ ಲಾಂಚ್‌ ಆಗಲಿದೆ ರಿಯಲ್‌ಮಿ ನಾರ್ಜೋ 70 ಪ್ರೊ 5G!..ಫೀಚರ್ಸ್‌ ಏನು?

ರಿಯಲ್‌ಮಿ ನಾರ್ಜೋ 70 ಪ್ರೊ 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ 5100mAh ಬ್ಯಾಟರಿ ಬ್ಯಾಕ್‌ಅಪ್‌ ಪ್ರಯೋಜನ ಪಡೆದಿರುವ ಸಾಧ್ಯತೆಗಳು ಅಧಿಕ ಆಗಿವೆ. ಅಲ್ಲದೇ ಮುಂಭಾಗದಲ್ಲಿ 24 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಇದು ಪಡೆದಿರಲಿದೆ. ಹಾಗಾದರೇ ರಿಯಲ್‌ಮಿ ನಾರ್ಜೋ 70 ಪ್ರೊ 5G ಫೋನಿನ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ನಾರ್ಜೋ 70 ಪ್ರೊ 5G ನಿರೀಕ್ಷಿತ ಫೀಚರ್ಸ್‌

ಈ ಫೋನ್‌ 6.65 ಇಂಚಿನ ಡಿಸ್‌ಪ್ಲೇ ಪಡೆದಿರಲಿದ್ದು, ಡಿಸ್‌ಪ್ಲೇಯು 1080 x 2400 ಪಿಕ್ಸಲ್‌ ರೆಸಲ್ಯೂಶನ್‌ ಪಡೆದಿರಲಿದೆ. ಇನ್ನು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದ್ದು, 5100 mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿರಲಿದೆ.

ಸದ್ಯದಲ್ಲೇ ಲಾಂಚ್‌ ಆಗಲಿದೆ ರಿಯಲ್‌ಮಿ ನಾರ್ಜೋ 70 ಪ್ರೊ 5G!..ಫೀಚರ್ಸ್‌ ಏನು?

ಹಾಗೆಯೇ ಇದು ಕ್ವಾಡ್‌ ಕ್ಯಾಮೆರಾ ರಚನೆಯೊಂದಿಗೆ ಲಗ್ಗೆ ಇಡುವ ಸಾಧ್ಯತೆಗಳು ಇದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇರಲಿದೆ. ಅಲ್ಲದೇ ಸೆಲ್ಫಿ ಕ್ಯಾಮೆರಾವು 24 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆ ಪಡೆದಿರಲಿದೆ. ಅಲ್ಲದೇ ಈ ಫೋನ್‌ ರಿಯಲ್‌ಮಿ 12 ಪ್ರೊ+ ರೀ ಬ್ರ್ಯಾಂಡ್‌ ಮಾದರಿ ಎನ್ನಲಾಗಿದೆ.

ರಿಯಲ್‌ಮಿ ನಾರ್ಜೋ 60 ಪ್ರೊ 5G ಫೀಚರ್ಸ್‌
ರಿಯಲ್‌ಮಿ ನಾರ್ಜೋ 60 ಪ್ರೊ 5G ಫೋನ್ 6.7 ಇಂಚಿನ ಕರ್ವ್ಡ ಹೆಚ್‌ಡಿ+ ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 2,400 x 1,080 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ ಇದು ಮೀಡಿಯಾಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, 24 GB RAM ಹಾಗೂ 1 TB RAM ವರೆಗಿನ ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಆಯ್ಕೆ ಜೊತೆಗೆ 100 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ ಮುಂಭಾಗದಲ್ಲಿ ಈ ಫೋನ್‌ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದ್ದು, ಈ ಬ್ಯಾಟರಿಯು 67W ಸೂಪರ್‌ವೂಕ್ ಚಾರ್ಜಿಂಗ್‌ಗೆ ಸಪೋರ್ಟ್‌ ಪಡೆದಿದೆ.

Best Mobiles in India

English summary
Realme Narzo 70 Pro 5G launching in India in March. Check Expected Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+