Home
ಸುದ್ದಿಜಾಲ

ರಿಯಲ್‌ಮಿಯ ಈ ಸ್ಟೈಲಿಶ್‌ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!..ಆಕರ್ಷಕ ಫೀಚರ್ಸ್‌!

ಅಮೆಜಾನ್‌ ಇ ಕಾಮರ್ಸ್‌ ಅನೇಕ ಆನ್‌ಲೈನ್‌ ಶಾಪಿಂಗ್‌ ಮಾಡುವ ಗ್ರಾಹಕರಿಗೆ ಅತ್ಯುತ್ತಮ ತಾಣ ಎನಿಸಿದೆ. ಈ ತಾಣವು ಮುಖ್ಯವಾಗಿ ಮೊಬೈಲ್‌ಗಳಿಗೆ ಸ್ಪೆಷಲ್‌ ಡಿಸ್ಕೌಂಟ್‌ ಲಭ್ಯ ಮಾಡುತ್ತದೆ. ಇದೀಗ ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ ನಾರ್ಜೋ 70 ಪ್ರೊ 5G ಮೊಬೈಲ್‌ ಕೂಡಾ ಬೊಂಬಾಟ್‌ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು ಮೊಬೈಲ್‌ನತ್ತ ಹಿಂತಿರುಗಿ ನೋಡುವಂತಾಗಿದೆ. ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ ಅನ್ನು ಪಡೆದಿದ್ದು, ಹಾಗೆಯೇ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಕೂಡಾ ಒಳಗೊಂಡಿದೆ.

ಹೌದು, ಲೀಡಿಂಗ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್‌ ತಾಣದಲ್ಲಿ ರಿಯಲ್‌ಮಿ ನಾರ್ಜೋ 70 ಪ್ರೊ 5G ಫೋನ್‌ 3000ರೂ. ಗಳ ವರೆಗೂ ರಿಯಾಯಿತಿ ಹೊಂದಿದೆ. ಈ ಮೊಬೈಲ್‌ನ 8GB + 128GB ಸ್ಟೋರೇಜ್‌ ವೇರಿಯಂಟ್‌ 15,999ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿ ಮಾಡಬಹುದು. ಇದಲ್ಲದೇ ಇತರೆ ಆಯ್ದ ಬ್ಯಾಂಕ್‌ ಕೊಡುಗೆಗಳು ಕೂಡಾ ಗ್ರಾಹಕರಿಗೆ ದೊರೆಯುತ್ತವೆ.

ರಿಯಲ್‌ಮಿಯ ಈ ಸ್ಟೈಲಿಶ್‌ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!..ಆಕರ್ಷಕ ಫೀಚರ್ಸ್‌!

ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಅಲ್ಲದೇ 8GB + 128GB ವೇರಿಯಂಟ್‌ ಹಾಗೂ 8GB + 256GB ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನ್‌ ಗ್ಲಾಸ್‌ ಗ್ರೀನ್‌ ಹಾಗೂ ಗ್ಲಾಸ್‌ ಗೋಲ್ಡ್‌ ಕಲರ್‌ ಆಯ್ಕೆ ಪಡೆದಿದೆ. ಹಾಗಾದರೇ ರಿಯಲ್‌ಮಿ ನಾರ್ಜೋ 70 ಪ್ರೊ 5G ಮೊಬೈಲ್‌ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ನಾರ್ಜೋ 70 ಪ್ರೊ 5G - ಫೀಚರ್ಸ್‌

ರಿಯಲ್‌ಮಿ ನಾರ್ಜೋ 70 ಪ್ರೊ 5G ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇಯು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಸಹ ಪಡೆದುಕೊಂಡಿದೆ. ಇದರ ಜೊತೆಗೆ ಡಿಸ್‌ಪ್ಲೇ 2,000 nits ಬ್ರೈಟ್ನೆಸ್‌ ಸೌಲಭ್ಯ ಪಡೆದಿದ್ದು, 120 Hz ರಿಫ್ರೆಶ್ ರೇಟ್‌ ಸಪೋರ್ಟ್‌ನೊಂದಿಗೆ ಕೆಲಸ ಮಾಡಲಿದೆ.

ರಿಯಲ್‌ಮಿ ನಾರ್ಜೋ 70 ಪ್ರೊ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಸಪೋರ್ಟ್‌ ಜೊತೆಗೆ ಕೆಲಸ ಮಾಡಲಿದೆ. ಅಲ್ಲದೇ ಇದು ಎರಡು ಸ್ಟೋರೇಜ್‌ ಆಯ್ಕೆಯನ್ನು ಪಡೆದಿದ್ದು, ಅವುಗಳು ಕ್ರಮವಾಗಿ 8GB + 128 GB ವೇರಿಯಂಟ್‌ ಹಾಗೂ 8 GB + 256 GB ವೇರಿಯಂಟ್‌ ಆಯ್ಕೆ ಆಗಿವೆ.

ರಿಯಲ್‌ಮಿ ನಾರ್ಜೋ 70 ಪ್ರೊ 5G ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಈ ಫೋನಿನ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೋನಿ IMX 890 ಸೆನ್ಸಾರ್‌ ಆಗಿದ್ದು, ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಇದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಈ ಫೋನಿನ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ.

ರಿಯಲ್‌ಮಿ ನಾರ್ಜೋ 70 ಪ್ರೊ 5G ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 67W SUPERVOOC ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳು ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಇನ್‌ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಆಯ್ಕೆ ಸಹ ಇದೆ.

ರಿಯಲ್‌ಮಿ ನಾರ್ಜೋ 70 ಪ್ರೊ 5G ಮೊಬೈಲ್‌ನ 8GB + 128GB ವೇರಿಯಂಟ್‌ ಹಾಗೂ 8GB + 256GB ವೇರಿಯಂಟ್‌ ಆಗಿದೆ. ಇನ್ನು ಈ ಫೋನ್‌ ಗ್ಲಾಸ್‌ ಗ್ರೀನ್‌ ಹಾಗೂ ಗ್ಲಾಸ್‌ ಗೋಲ್ಡ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಗ್ರಾಹಕರು ಅಮೆಜಾನ್‌ ಹಾಗೂ ರಿಯಲ್‌ಮಿ ವೆಬ್‌ಸೈಟ್‌ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Realme Narzo 70 Pro 5G price in India discounted by Rs 3,000: worth to buy?. check other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+