ಇಂದು ಗೆಸ್ಚರ್ ಸೌಲಭ್ಯ ಇರುವ ಈ ಫೋನ್ ಖರೀದಿಗೆ ಲಭ್ಯ!..ಉಚಿತ ಆಫರ್ ಸಹ ಇದೆ!
ರಿಯಲ್‌ಮಿ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ರಿಯಲ್‌ಮಿ ನಾರ್ಜೋ 70 ಪ್ರೊ 5G ಫೋನಿನ ಸೇಲ್ ಇಂದು (ಮಾರ್ಚ್ 22 ರಂದು) ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಮಧ್ಯಾಹ್ನ 12 ರಿಂದ ಪ್ರಾರಂಭವಾಗಲಿದೆ. ಈ ಮೊಬೈಲ್ ಬಜೆಟ್ ಪ್ರೈಸ್ ಟ್ಯಾಗ್ ಪಡೆದಿದ್ದು, ಗೆಸ್ಚರ್ ಫೀಚರ್ಸ್‌ನಿಂದಾಗಿ ಮಾರುಕಟ್ಟೆಯಲ್ಲಿ ಸಖತ್ ಗಮನ ಸೆಳದಿದೆ.
ಹೌದು, ರಿಯಲ್‌ಮಿ ನಾರ್ಜೋ 70 ಪ್ರೊ 5G ಮೊಬೈಲ್ ಅಮೆಜಾನ್ ಪ್ಲಾಟ್‌ಫಾರ್ಮ್ ಮೂಲಕ ಇಂದು ಖರೀದಿಗೆ ಲಭ್ಯ ಆಗಲಿದ್ದು, ಈ ಫೋನ್ ಖರೀದಿಯೊಂದಿಗೆ ಗ್ರಾಹಕರು ರಿಯಲ್‌ಮಿ ಬಡ್ಸ್ T300 ಇಯರ್‌ಬಡ್ಸ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಹಾಗೆಯೇ ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಸಹ ಪಡೆಯಲು ಅವಕಾಶ ಇದೆ.

ಇನ್ನು ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಪಡೆದಿದ್ದು, ಖರೀದಿದಾರರು ಈ ಮೊಬೈಲ್ ಅನ್ನು ಗ್ಲಾಸ್ ಗ್ರೀನ್ ಹಾಗೂ ಗ್ಲಾಸ್ ಗೋಲ್ಡ್ ಕಲರ್ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೇ ರಿಯಲ್‌ಮಿ ನಾರ್ಜೋ 70 ಪ್ರೊ 5G ಮೊಬೈಲ್ ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ ನಾರ್ಜೋ 70 ಪ್ರೊ 5G - ಫೀಚರ್ಸ್ ಹೀಗಿವೆ
ಈ ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇಯು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಸಹ ಒಳಗೊಂಡಿದೆ. ಅಲ್ಲದೇ ಇದರ ಡಿಸ್‌ಪ್ಲೇ 2,000 nits ಬ್ರೈಟ್ನೆಸ್ ಸೌಲಭ್ಯ ಪಡೆದಿದ್ದು, 120 Hz ರಿಫ್ರೆಶ್ ರೇಟ್ ಸಪೋರ್ಟ್‌ನೊಂದಿಗೆ ಕೆಲಸ ಮಾಡುತ್ತದೆ.

ರಿಯಲ್‌ಮಿ ಕಂಪನಿಯ ಈ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಪವರ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಸಪೋರ್ಟ್ ಜೊತೆಗೆ ಕೆಲಸ ಮಾಡಲಿದೆ. ಅಲ್ಲದೇ ಇದು ಎರಡು ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 8GB + 128 GB ವೇರಿಯಂಟ್ ಹಾಗೂ 8 GB + 256 GB ವೇರಿಯಂಟ್ ಆಯ್ಕೆ ಆಗಿವೆ.
ಹಾಗೆಯೇ ಈ 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಈ ಫೋನಿನ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX 890 ಸೆನ್ಸಾರ್ ಆಗಿದ್ದು, ದ್ವಿತೀಯ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಈ ಫೋನಿನ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಪಡೆದಿದೆ.
ಈ ನೂತನ ಮೊಬೈಲ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ 67W SUPERVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಇನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಕಾಣಬಹುದಾಗಿದೆ
ದೇಶಿಯ ಮಾರುಕಟ್ಟೆಯಲ್ಲಿ ನಾರ್ಜೋ 70 ಪ್ರೊ 5G ಮೊಬೈಲ್‌ನ 8GB + 128GB ವೇರಿಯಂಟ್ ಬೆಲೆಯು 18,999ರೂ. ಆಗಿದೆ. ಹಾಗೆಯೇ 8GB + 256GB ವೇರಿಯಂಟ್ ವೇರಿಯಂಟ್ ದರವು 19,999ರೂ. ಆಗಿದೆ. ಗ್ರಾಹಕರು ಅಮೆಜಾನ್ ಹಾಗೂ ರಿಯಲ್‌ಮಿ ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








