ಗೇಮಿಂಗ್ ಪ್ರಿಯರಿಗಾಗಿ..! ಬರಲಿದೆ ಜಬರ್ದಸ್ತ್ ಫೋನ್.. ಶಕ್ತಿಶಾಲಿ ಪ್ರೊಸೆಸರ್, ಬಿಗ್ ಬ್ಯಾಟರಿ; ಲಾಂಚ್ ಯಾವಾಗ?
ರಿಯಲ್‌ಮಿ ತನ್ನ ನಾರ್ಜೊ ಸರಣಿಯಲ್ಲಿ ಹೊಸ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಇಂದು ಈ ಫೋನನ್ನು ಅಧಿಕೃತವಾಗಿ ಘೋಷಿಸಿದೆ. ಹೌದು, ರಿಯಲ್‌ಮಿ ನಾರ್ಜೊ 80 ಪ್ರೊ 5G (Realme Narzo 80 Pro 5G) ಮೊಬೈಲ್ ಶೀಘ್ರದಲ್ಲೇ ಲಾಂಚ್ ಆಗಲಿದೆ. ರಿಯಲ್‌ಮಿ ಅಧಿಕೃತವಾಗಿ ನಾರ್ಜೊ 80 ಪ್ರೊ 5G ಫೋನಿನ ಟೀಸರ್ ಹಂಚಿಕೊಂಡಿದೆ. ಈ ಮೂಲಕ ಪ್ರೊಸೆಸರ್ ಬಗ್ಗೆ ಮಾಹಿತಿಯನ್ನು ಸಹ ಬಹಿರಂಗಪಡಿಸಲಾಗಿದೆ. ಈ ಮೊಬೈಲ್ ಗೇಮಿಂಗ್‌ಗೆ ಉತ್ತಮ ಆಯ್ಕೆಯಾಗಿದೆ. ಈ ಫೋನ್ ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕಂಪನಿಯು ಭಾರತದಲ್ಲಿ ನಾರ್ಜೊ ಸರಣಿಯನ್ನು ವಿಸ್ತರಿಸುವುದಾಗಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಿಳಿಸಿದೆ. ಮುಂಬರುವ ಫೋನ್ ರಿಯಲ್‌ಮಿ ನಾರ್ಜೊ 80 ಪ್ರೊ 5G ಆಗಿರುತ್ತದೆ. ಪ್ರಸ್ತುತ, ಕಂಪನಿಯು ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಆದರೆ, ಟೀಸರ್‌ನಲ್ಲಿ 'ಶೀಘ್ರದಲ್ಲೇ ಬರಲಿದೆ' ಎಂದು ಬರೆಯಲಾಗಿದೆ. ಮತ್ತೊಂದೆಡೆ, ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ (Amazon) ರಿಯಲ್‌ಮಿ ನಾರ್ಜೊ 80 ಪ್ರೊ 5G ಮೈಕ್ರೋ ಸೈಟ್ ಲೈವ್ ಆಗಿದೆ.

ರಿಯಲ್‌ಮಿ ನಾರ್ಜೊ 80 ಪ್ರೊ 5G ಪ್ರೊಸೆಸರ್
ರಿಯಲ್‌ಮಿ ನಾರ್ಜೊ 80 ಪ್ರೊ 5G ಫೋನನ್ನು ಮೀಡಿಯಾಟೆಕ್‌ನ ಡೈಮೆನ್ಸಿಟಿ 7400 ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಬಹಿರಂಗಪಡಿಸಿದೆ. ವಿಶೇಷವೆಂದರೆ, ಈ ಪ್ರೊಸೆಸರ್ ಹೊಂದಿರುವ ಯಾವುದೇ ಮೊಬೈಲ್ ಫೋನ್ ಭಾರತದಲ್ಲಿ ಇನ್ನೂ ಬಿಡುಗಡೆಯಾಗಿಲ್ಲ. ಈ ಪ್ರೊಸೆಸರ್ 2.6GHz ವರೆಗಿನ ಗಡಿಯಾರದ ವೇಗದಲ್ಲಿ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ರಿಯಲ್‌ಮಿ ನಾರ್ಜೊ 80 ಪ್ರೊ 5G ಮೊಬೈಲ್ 780K+ AnTuTu ಸ್ಕೋರ್ ಪಡೆಯುವ ಸಾಧ್ಯತೆಯಿದೆ ಎಂದು ಕಂಪನಿ ಹೇಳಿದೆ. ಗೇಮಿಂಗ್ ಪ್ರಿಯರಿಗೆ ಇದು ಉತ್ತಮವಾಗಿದೆ. ಈ ಮೊಬೈಲ್‌ನಲ್ಲಿ ಗರಿಷ್ಠ ಗೇಮಿಂಗ್ ಅನುಭವ ಲಭ್ಯವಿರುತ್ತದೆ.
ರಿಯಲ್‌ಮಿ ನಾರ್ಜೊ 70 ಪ್ರೊ 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ ನಾರ್ಜೊ 70 ಪ್ರೊ 5G ಫೋನ್ 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 2400 x 1080 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಪಂಚ್ ಹೋಲ್ ಶೈಲಿಯ ಡಿಸ್ಪ್ಲೇ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿದೆ. ಹಾಗೆಯೇ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ ನಾರ್ಜೊ 70 ಪ್ರೊ 5G ಮೊಬೈಲ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 7050 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಗ್ರಾಫಿಕ್ಸ್‌ಗಾಗಿ, ಈ ಮೊಬೈಲ್‌ನಲ್ಲಿ ARM Mali G68 ಜಿಪಿಯು ಸಹ ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ರಿಯಲ್‌ಮಿ ನಾರ್ಜೊ 70 ಪ್ರೊ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ ನಾರ್ಜೊ 70 ಪ್ರೊ 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಲು, 67W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿರಲಿದೆ.


Click it and Unblock the Notifications








