Home
ಸುದ್ದಿಜಾಲ

ರಿಯಲ್‌ಮಿ ನಾರ್ಜೋ N53 ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌: ಈ ಆಫರ್‌ ಇವತ್ತಿಗೆ ಮಾತ್ರ!

ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಇಂದು ಹೆಚ್ಚಾಗಿ ಸೇಲ್‌ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಮುಖ ಎನಿಸಿಕೊಂಡಿವೆ. ಅದರಲ್ಲೂ ಇತ್ತೀಚೆಗೆ ಸುಧಾರಿತ ಫೀಚರ್ಸ್‌ನೊಂದಿಗೆ ಹೊಸ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗುತ್ತಿದ್ದು, ಇದರ ಭಾಗವಾಗಿ ವಾರದ ಹಿಂದಷ್ಟೇ ಭಾರತದಲ್ಲಿ ರಿಯಲ್‌ಮಿ ನಾರ್ಜೋ N53 ಫೋನ್‌ ಅನ್ನು ಅನಾವರಣ ಮಾಡಲಾಗಿದ್ದು, ಈ ಫೋನ್‌ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ.

ಹೌದು, ಭಾರತದಲ್ಲಿ ಸಾಕಷ್ಟು ನಿರೀಕ್ಷೆ ಉಂಟುಮಾಡಿದ್ದ ರಿಯಲ್‌ಮಿ ನಾರ್ಜೋ N53ಸ್ಮಾರ್ಟ್‌ಫೋನ್‌(Realme Narzo N53)ಅನ್ನು ಕೆಲವು ದಿನಗಳ ಹಿಂದಷ್ಟೇ ಲಾಂಚ್ ಮಾಡಲಾಗಿದ್ದು, ಇದೀಗ ರಿಯಲ್‌ಮಿ ಪ್ರಿಯರಿಗೆ ಸಂತಸ ಸುದ್ದಿಯೊಂದನ್ನು ಕಂಪೆನಿ ನೀಡಿದೆ. ಅಂದರೆ ಈ ಫೋನ್‌ ಖರೀದಿ ಮಾಡಲು ನೀವೇನಾದೂ ಮುಂದಾಗಿದ್ದರೆ ಇಂದೇ ಖರೀದಿಸಿ. ಇನ್ನು ಈ ಫೋನ್ ಆಕ್ಟಾ-ಕೋರ್ ಯುನಿಸಾಕ್T612 SoCಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಬನ್ನಿ ಈ ಫೋನ್ ಖರೀದಿಯಲ್ಲಿ ಸಿಗುವ ದೊಡ್ಡ ಆಫರ್‌ ಏನು ಎಂಬುದನ್ನು ತಿಳಿಯೋಣ.

ರಿಯಲ್‌ಮಿ ನಾರ್ಜೋ N53 ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌....

ರಿಯಲ್‌ಮಿ ನಾರ್ಜೋ N53 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್‌ ನೀವು ವಿಶೇಷ ಸೇಲ್‌ನಲ್ಲಿ ಇಂದು ಖರೀದಿ ಮಾಡಬಹುದಾಗಿದೆ. ಆದರೆ, ಈ ವಿಶೇಷ ಆಫರ್‌ ಬಗ್ಗೆ ತಿಳಿಯುವ ಮುನ್ನ ಇದರ ಫೀಚರ್ಸ್ ಬಗ್ಗೆ ತಿಳಿದುಕೊಳ್ಳಿ. ಅದರಂತೆ ಈ ಫೋನ್ 6.74 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಜೊತೆಗೆ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಆಯ್ಕೆ ಇದರಲ್ಲಿದೆ.

ರಿಯಲ್‌ಮಿ ನಾರ್ಜೋ N53 ಪ್ರೊಸೆಸರ್‌: ಇದರ ಪ್ರೊಸೆಸರ್ ವಿಚಾರಕ್ಕೆ ಬರುವುದಾದರೆ ಆಕ್ಟಾ-ಕೋರ್ ಯುನಿಸೊಕ್ T612 SoC ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ರನ್‌ ಆಗಲಿದೆ. ಇನ್ನು 6GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಆಯ್ಕೆ ಇದರಲ್ಲಿದ್ದು, 128GB ಹಾಗೂ ಹೆಚ್ಚುವರಿ 6GB ವರ್ಚುವಲ್ RAM ಅನ್ನು ಆಯ್ಕೆ ಸಹ ಈ ಫೋನ್‌ನಲ್ಲಿ ಇರುವುದು ವಿಶೇಷ.

ರಿಯಲ್‌ಮಿ ನಾರ್ಜೋ N53 ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌....

ರಿಯಲ್‌ಮಿ ನಾರ್ಜೋ N53 ಕ್ಯಾಮೆರಾ ರಚನೆ: ರಿಯಲ್‌ಮಿ ನಾರ್ಜೋ N53 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ AI ಸೆನ್ಸಾರ್‌ ಹಾಗೂ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 8ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮರಾವನ್ನು ಆಯ್ಕೆ ನೀಡಲಾಗಿದೆ.

ರಿಯಲ್‌ಮಿ ನಾರ್ಜೋ N53 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್‌5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 33W ವೈರ್ಡ್ ಸೂಪರ್‌ವೂಕ್‌ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಂದರೆ 30 ನಿಮಿಷಗಳಲ್ಲಿ 0% ನಿಂದ 50% ವರೆಗೆ ಇದರಲ್ಲಿ ಚಾರ್ಜಿಂಗ್‌ ಮಾಡಬಹುದು. ಇನ್ನುಳಿದಂತೆ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಹಾಟ್‌ಸ್ಪಾಟ್‌, ವೈ-ಫೈ, ಯುಎಸ್‌ಬಿ-ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ

ರಿಯಲ್‌ಮಿ ನಾರ್ಜೋ N53 ವಿಶೇಷ ಆಫರ್‌: ಮೇ 22 ರಂದು ಅಂದರೆ ಇಂದು ಮಧ್ಯಾಹ್ನ 2 ರಿಂದ ಸಂಜೆ 4 ರ ನಡುವೆ ರಿಯಲ್‌ಮಿ ನಾರ್ಜೊ N53ಯ ವಿಶೇಷ ಸೇಲ್‌ ಜರುಗಲಿದ್ದು, ಈ ವಿಶೇಷ ಸಮಯದಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು 4GB ವೇರಿಯಂಟ್‌ನಲ್ಲಿ 750ರೂ.ಗಳ ರಿಯಾಯಿತಿ ಮತ್ತು 6GB ಆವೃತ್ತಿಯಲ್ಲಿ 1,000ರೂ.ಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ರಿಯಲ್‌ಮಿ ನಾರ್ಜೋ N53 ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌....

ರಿಯಲ್‌ಮಿ ನಾರ್ಜೋ N53 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ನಲ್ಲಿ ಬರಲಿದೆ. ಅಂದರೆ 4GB+64GB ಮತ್ತು 6GB+128GB ನಲ್ಲಿ ಕಾಣಿಸಿಕೊಳ್ಳಲಿವೆ. ಇವುಗಳ ಬೆಲೆ ಕ್ರಮವಾಗಿ 8,999 ರೂ. ಮತ್ತು ರೂ 10,999ರೂ.ಗಳಾಗಿದೆ. ಈ ಫೋನ್‌ಗಳು ಫೆದರ್ ಗೋಲ್ಡ್ ಮತ್ತು ಫೆದರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.ಈ ಫೋನ್‌ ಅನ್ನು ಪ್ರಮುಖ ಇ ಕಾಮರ್ಸ್‌ ಸೈಟ್‌ಗಳಲ್ಲಿ ಖರೀದಿ ಮಾಡಬಹುದು.

Best Mobiles in India

English summary
The much awaited Realme Narzo N53 smartphone was launched in India a few days back and now the company has given a good news to the Realme lovers. So if you are planning to buy this phone, buy it today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+