ಅಗ್ಗದ ಬೆಲೆಗೆ ರಿಯಲ್‌ಮಿ ಫೋನ್ ಖರೀದಿಸಲು ಇದು ಸಖತ್ ಆಫರ್!
ಜನಪ್ರಿಯ ರಿಯಲ್‌ಮಿ ಮೊಬೈಲ್ ಸಂಸ್ಥೆಯು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್ ಸರಣಿಯನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ನಾರ್ಜೋ ಸರಣಿಯಲ್ಲಿ ಇತ್ತೀಚಿಗೆ ಪರಿಚಯಿಸಿರುವ ರಿಯಲ್‌ಮಿ ನಾರ್ಜೊ N55 ಮೊಬೈಲ್ ಫೀಚರ್ಸ್ ಹಾಗೂ ಬೆಲೆಯಿಂದ ಫೋನ್ ಪ್ರಿಯರನ್ನು ಸೆಳೆದಿದೆ. ಆದರೆ ಈ ಮೊಬೈಲ್ ಇದೀಗ ಬೆಲೆ ಇಳಿಕೆ ಕಂಡು ಗ್ರಾಹಕರನ್ನು ಆಕರ್ಷಿಸಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ರಿಯಲ್‌ಮಿ ಕಂಪನಿಯ ರಿಯಲ್‌ಮಿ ನಾರ್ಜೊ N55 ಮೊಬೈಲ್ ಶೇ. 13% ನಷ್ಟು ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಮೊಬೈಲ್ 6GB+128GB ಸ್ಟೋರೇಜ್‌ನ ವೇರಿಯಂಟ್ 14,999 ರೂ. ಗಳ ಪ್ರೈಸ್ ಟ್ಯಾಗ್ ಹೊಂದಿದ್ದು, 12,999ರೂ. ಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಆಫರ್ ಹಾಗೂ ನೋ ಕಾಸ್ಟ್ ಇಎಮ್‌ಐ ಸೌಲಭ್ಯ ಕೂಡಾ ಗ್ರಾಹಕರಿಗೆ ಸಿಗಲಿದೆ. ಇನ್ನು ಈ ಮೊಬೈಲ್ ಅನ್ನು ಲೈಮ್, ಗ್ರ್ಯಾಫೈಟ್ ಮತ್ತು ವೈಲೆಟ್ ಕಲರ್ ಆಯ್ಕೆಯಲ್ಲಿ ಖರೀದಿ ಮಾಡಬಹುದು. ಹಾಗಾದರೆ ರಿಯಲ್‌ಮಿ ನಾರ್ಜೊ N55 ಮೊಬೈಲ್ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ರಿಯಲ್‌ಮಿ ನಾರ್ಜೊ N55 ಡಿಸ್‌ಪ್ಲೇ ರಚನೆ ಹೀಗಿದೆ :
ರಿಯಲ್‌ಮಿ ನಾರ್ಜೊ N55 ಮೊಬೈಲ್ 6.72 ಇಂಚಿನ IPS LCD ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಪಡೆದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಸ್ಮಾರ್ಟ್‌ಫೋನ್ ಕ್ಯಾಮರಾ ಪಂಚ್-ಹೋಲ್ ಕಟೌಟ್ ಪಡೆದಿದೆ.
ರಿಯಲ್‌ಮಿ ನಾರ್ಜೊ N55 ಪ್ರೊಸೆಸರ್ ಕಾರ್ಯವೈಖರಿ :
ರಿಯಲ್‌ಮಿ ನಾರ್ಜೊ N55 ಮೊಬೈಲ್ ಮೀಡಿಯಾ ಟೆಕ್ ಹಿಲಿಯೋ G88 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಆಧಾರಿತ ರಿಯಲ್‌ಮಿ UI ಔಟ್-ಆಫ್-ದಿ-ಬಾಕ್ಸ್ ನಲ್ಲಿ ರನ್ ಆಗಲಿದೆ. ಹಾಗೆಯೇ 4GB + 64GB ಮತ್ತು 6GB RAM + 128GB ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆ ಪಡೆದಿದೆ.
ರಿಯಲ್‌ಮಿ ನಾರ್ಜೊ N55 ಕ್ಯಾಮೆರಾ ಸೆನ್ಸಾರ್ ಮಾಹಿತಿ :
ರಿಯಲ್‌ಮಿ ನಾರ್ಜೊ N55 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ಇನ್ನು ಸೆಕೆಂಡರಿ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ರಿಯಲ್‌ಮಿ ನಾರ್ಜೊ N55 ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ :
ರಿಯಲ್‌ಮಿ ನಾರ್ಜೊ N55 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಪಡೆದುಕೊಂಡಿದೆ. ಇದರ ಜೊತೆಗೆ 33W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇದರಿಂದ ಈ ಸ್ಮಾರ್ಟ್‌ಫೋನ್ ಕೇವಲ 29 ನಿಮಿಷಗಳಲ್ಲಿ 0 ದಿಂದ 50% ವರೆಗೆ ಚಾರ್ಜ್ ಮಾಡಬಹುದು.
ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಈ ಫೋನ್ 4GB + 64GB ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಬ್ಲೂ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಖರೀದಿ ಮಾಡಬಹುದು.


Click it and Unblock the Notifications








