ಈ ಫೋನಿಗೆ ಲಭ್ಯವಿರುವ ಆಫರ್ ತಿಳಿದ್ರೆ, ನೀವು ಈ ಚಾನ್ಸ್ ಬಿಡಲ್ಲ!
ಅಮೆಜಾನ್ ದೈತ್ಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದ್ದು, ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್ ನೀಡುತ್ತದೆ. ಎಲ್ಲ ಮಾದರಿಯ ಫೋನ್‌ಗಳಿಗೂ ಒಂದಿಲ್ಲೊಂದು ಡಿಸ್ಕೌಂಟ್ ಲಭ್ಯ ಮಾಡಿರುತ್ತದೆ. ಸದ್ಯ ಬಜೆಟ್ ಬೆಲೆಯ ರಿಯಲ್‌ಮಿ ನಾರ್ಜೊ N55 ಸ್ಮಾರ್ಟ್‌ಫೋನ್ ಕೂಡಾ ಅಮೆಜಾನ್ ತಾಣದಲ್ಲಿ ಸಕತ್ ಡಿಸ್ಕೌಂಟ್ ಪಡೆದಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ದೀಪಾವಳಿ ಹಬ್ಬದ ಸಂದರ್ಭ ಇದೀಗ ರಿಯಲ್‌ಮಿ ನಾರ್ಜೊ N55 ಸ್ಮಾರ್ಟ್‌ಫೋನ್ ಶೇ. 15% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಇದರ 4GB RAM + 64GB ಸ್ಟೋರೇಜ್ ವೇರಿಯಂಟ್ ಅನ್ನು ಗ್ರಾಹಕರು 10,999ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಅಮೆಜಾನ್ ತಾಣದಲ್ಲಿ ಲಭ್ಯ ಇರುವ ಇತರೆ ಎಲ್ಲ ಕೊಡುಗೆಗಳು ಪಡೆದುಕೊಂಡರೆ ಈ ಫೋನ್ ಇನ್ನಷ್ಟು ಕಡಿಮೆ ಬೆಲೆಯಲ್ಲಿ ಖರೀದಿಗೆ ಮಾಡಬಹುದು.

ಅಂದಹಾಗೆ ರಿಯಲ್‌ಮಿ ನಾರ್ಜೊ N55 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G88 SoC ಪ್ರೊಸೆಸರ್ ಪವರ್ ಹೊಂದಿದ್ದು, ಹಿಂಭಾಗದಲ್ಲಿ ಇದು ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಹಾಗಾದರೆ ರಿಯಲ್‌ಮಿ ನಾರ್ಜೊ N55 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್ ಹೇಗಿದೆ ಹಾಗೂ ವಿನ್ಯಾಸದ ಮಾಹಿತಿ
ರಿಯಲ್‌ಮಿ ನಾರ್ಜೊ N55 ಫೋನ್ 6.72 ಇಂಚಿನ IPS LCD ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಸಹ ಮಾಡಲಿದೆ. ಇನ್ನು ಸ್ಮಾರ್ಟ್‌ಫೋನ್ ಕ್ಯಾಮರಾ ಪಂಚ್-ಹೋಲ್ ಕಟೌಟ್ ಪಡೆದಿದೆ.

ಪ್ರೊಸೆಸರ್ ಪವರ್ ಎಷ್ಟಿದೆ
ರಿಯಲ್‌ಮಿ ಸಂಸ್ಥೆಯ ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G88 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, ಇದು ಆಂಡ್ರಾಯ್ಡ್ 13 ಆಧಾರಿತ ರಿಯಲ್‌ಮಿ UI ಔಟ್-ಆಫ್-ದಿ-ಬಾಕ್ಸ್ ನಲ್ಲಿ ರನ್ ಆಗಲಿದೆ. ಅಲ್ಲದೇ ಈ ಫೋನ್ 4GB + 64 GB ಮತ್ತು 6GB RAM + 128 GB ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆ ಹೊಂದಿದೆ.

ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ಸೌಲಭ್ಯ
ರಿಯಲ್‌ಮಿ ನಾರ್ಜೊ N55 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರ ಜೊತೆಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಎಷ್ಟಿದೆ
ಸಂಸ್ಥೆಯ ಈ ನಾರ್ಜೊ N55 ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಪಡೆದುಕೊಂಡಿದ್ದು, ಇದರ ಜೊತೆಗೆ 33W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಪಡೆದಿದೆ. ಇದರಿಂದ ಈ ಸ್ಮಾರ್ಟ್‌ಫೋನ್ ಕೇವಲ 29 ನಿಮಿಷಗಳಲ್ಲಿ 0 ದಿಂದ 50% ವರೆಗೆ ಚಾರ್ಜ್ ಮಾಡುವ ಸೌಲಭ್ಯ ಒಳಗೊಂಡಿದೆ.
ಇದಲ್ಲದೇ ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಪಡೆದಿದ್ದು, ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ ಬ್ಲೂ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಖರೀದಿ ಮಾಡಲು ಅವಕಾಶ ಲಭ್ಯ.


Click it and Unblock the Notifications