Home
ಸುದ್ದಿಜಾಲ

ಇಂದು realme NARZO N61 ಫಸ್ಟ್‌ ಸೇಲ್‌; ಆಫರ್‌ ಬೆಲೆ ತಿಳಿದ್ರೆ ವಾವ್‌ ಅಂತೀರಾ!

ಮೊಬೈಲ್‌ ಪ್ರಿಯರ ಫೇವರೇಟ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ರಿಯಲ್‌ಮಿ (Realme) ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ರಿಯಲ್‌ಮಿ ನಾರ್ಜೋ N61 (Realme Narzo N61) ಸ್ಮಾರ್ಟ್‌ಫೋನ್ ಈಗಾಗಲೇ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್‌ ಇಂದು (ಆಗಷ್ಟ್‌ 6 ರಂದು) ಅಧಿಕೃತ ಅಮೆಜಾನ್‌ ಆನ್‌ಲೈನ್ ವೆಬ್‌ಸೈಟ್‌ ಮೂಲಕ ಮಧ್ಯಾಹ್ನ 12 ಗಂಟೆಗೆ ಫಸ್ಟ್‌ ಸೇಲ್‌ ಪ್ರಾರಂಭಿಸಲಿದೆ. ಅಂದಹಾಗೆ ಇದು ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ.

ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಇಂದು ರಿಯಲ್‌ಮಿ ನಾರ್ಜೋ N61 (Realme Narzo N61) ಮೊಬೈಲ್‌ ಫಸ್ಟ್‌ ಸೇಲ್‌ ಶುರು ಮಾಡಲಿದ್ದು, ಭರ್ಜರಿ ಆಫರ್‌ ಸಹ ಲಭ್ಯವಾಗಲಿದೆ. ಈ ಫೋನ್‌ 4 GB RAM + 64 GB ಮತ್ತು 6 GB RAM + 128 GB ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, Unisoc T612 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದೆ.

ಇಂದು realme NARZO N61 ಫಸ್ಟ್‌ ಸೇಲ್‌; ಆಫರ್‌ ಬೆಲೆ ತಿಳಿದ್ರೆ ವಾವ್‌ ಅಂತೀರಾ!

ಇನ್ನು ಈ ಫೋನಿನ 4 GB RAM + 64 GB ವೇರಿಯಂಟ್‌ ಬೆಲೆಯು 7,499ರೂ. ಆಗಿದ್ದು, 6 GB RAM + 128 GB ಸ್ಟೋರೇಜ್‌ ವೇರಿಯಂಟ್‌ ದರವು 8,499ರೂ. ಆಗಿದೆ. ಹಾಗೆಯೇ ಅಮೆಜಾನ್‌ ತಾಣದಲ್ಲಿ ಕೆಲವು ರಿಯಾಯಿತಿ ಆಫರ್‌ ಪ್ರಯೋಜನ ಕೂಡಾ ಖರೀದಿದಾರರಿಗೆ ಲಭ್ಯ ಆಗಲಿವೆ. ಹಾಗಾದರೆ ರಿಯಲ್‌ಮಿ ನಾರ್ಜೋ N61 (Realme Narzo N61) ಫೋನಿನ ಇತರೆ ಫೀಚರ್ಸ್‌ ಯಾವುವು ಹಾಗೂ ಆಫರ್‌ ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ನಾರ್ಜೋ N61 ಫೋನಿನ ಫೀಚರ್ಸ್‌

ರಿಯಲ್‌ಮಿ ನಾರ್ಜೋ N61 ಫೋನ್ ಅನ್ನು 6.74 ಇಂಚಿನ ದೊಡ್ಡ ಡಿಸ್‌ಪ್ಲೇ ಅನ್ನು ಇದು ಪಡೆದುಕೊಂಡಿದೆ. ಇದು 90hz ರಿಫ್ರೆಶ್ ರೇಟ್ ಬೆಂಬಲ ಮಾಡುತ್ತದೆ ಮತ್ತು 560 nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಮಿನಿ ಕ್ಯಾಪ್ಸುಲ್ 2.0 ವೈಶಿಷ್ಟ್ಯದೊಂದಿಗೆ ಫೋನ್ ಅನ್ನು ಪರಿಚಯಿಸಲಾಗಿದೆ.

ರಿಯಲ್‌ಮಿ ಕಂಪನಿಯು ರಿಯಲ್‌ಮಿ ನಾರ್ಜೋ N61 ಫೋನ್ ಆಕ್ಟಾ ಕೋರ್ Unisoc T612 ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿದೆ. ಇದು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಅವುಗಳು ಕ್ರಮವಾಗಿ 4 GB RAM + 64 GB ವೇರಿಯಂಟ್‌ ಹಾಗೂ 6 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳು ಆಗಿವೆ. ಇನ್ನು ಈ ಫೋನ್ 6GB ವರ್ಚುವಲ್ RAM ಸೌಲಭ್ಯ ಸಹ ಪಡೆದಿದೆ.

ರಿಯಲ್‌ಮಿ ನಾರ್ಜೋ N61 ( Realme Narzo N61 ) ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಪ್ರಾಥಮಿಕ 32 ಮೆಗಾ ಪಿಕ್ಸಲ್‌ ಸೂಪರ್ ಕ್ಲಿಯರ್ ಕ್ಯಾಮೆರಾ ಆಗಿದೆ. ಅಲ್ಲದೇ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5 ಮೆಗಾ ಪಿಕ್ಸಲ್‌ ಸೆನ್ಸಾರ್‌ ಲೆನ್ಸ್ ಒದಗಿಸಲಾಗಿದೆ.

ರಿಯಲ್‌ಮಿ ನಾರ್ಜೋ N61 ( Realme Narzo N61 ) ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಈ ಫೋನ್ 30 ಗಂಟೆಗಳ ಧ್ವನಿ ಕರೆಗಳನ್ನು ಮತ್ತು 1013 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಉಳಿದಂತೆ IP54 ರೇಟಿಂಗ್ ಸೌಲಭ್ಯ ಸಹ ಪಡೆದಿದೆ.

Best Mobiles in India

English summary
realme NARZO N61 first sale today via Amazon: Offer, Price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+