ಇಂದು ರಿಯಲ್‌ಮಿ ನಾರ್ಜೋ N65 5G ಫೋನ್ ಫಸ್ಟ್ ಸೇಲ್!..ಆಫರ್ ಬೆಲೆ ಎಷ್ಟು?
ಜನಪ್ರಿಯ ರಿಯಲ್‌ಮಿ ಮೊಬೈಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸದಾಗಿ ಲಾಮಚ್ ಮಾಡಿರುವ ರಿಯಲ್‌ಮಿ ನಾರ್ಜೋ N65 5G ಮೊಬೈಲ್ ಕಡಿಮೆ ಬೆಲೆಯಲ್ಲಿ ಆಕರ್ಷಕವಾಗಿ ಗುರುತಿಸಿಕೊಂಡಿದೆ. ಇನ್ನು ಈ ಮೊಬೈಲ್‌ನ ಫಸ್ಟ್ ಸೇಲ್ ಇಂದು (ಮೇ 31 ರಂದು) ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಶುರು ಆಗಲಿದೆ. ರಿಯಲ್‌ಮಿ ನಾರ್ಜೋ N65 5G ಮೊಬೈಲ್‌ನ 4GB RAM ಆರಂಭಿಕ ವೇರಿಯಂಟ್ ಆಫರ್ ಬೆಲೆಯು 10,499 ರೂ. ಗಳು ಆಗಿದ್ದು, ಇತರೆ ಕೊಡುಗೆ ಸಹ ಸಿಗಲಿವೆ.
ಹೌದು, ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ ನಾರ್ಜೋ N65 5G (realme NARZO N65 5G) ಮೊಬೈಲ್ ಮೊದಲ ಮಾರಾಟ ಪ್ರಾರಂಭ ಮಾಡಿದೆ. ಈ ಮೊಬೈಲ್ 4GB + 12GB ಹಾಗೂ 6GB + 128GB ಆಂತರೀಕ ಸ್ಟೋರೇಜ್ ಆಯ್ಕೆಗಳನ್ನು ಪಡೆದುಕೊಂಡಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ.

ಇನ್ನು ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6300 5G ಪ್ರೊಸೆಸರ್ ಸೌಲಭ್ಯ ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇದೆ. ಹಾಗೆಯೇ ಈ ಫೋನ್ ಅಂಬರ್ ಗೋಲ್ಡ್ ಮತ್ತು ಡೀಪ್ ಗ್ರೀನ್ ಆಯ್ಕೆಯಲ್ಲಿ ಖರಿದಿಗೆ ಲಭ್ಯ ಇರಲಿದೆ. ಇನ್ನುಳಿದಂತೆ ರಿಯಲ್‌ಮಿ ನಾರ್ಜೋ N65 5G ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.
ರಿಯಲ್‌ಮಿ ನಾರ್ಜೋ N65 5G ಫೀಚರ್ಸ್
ರಿಯಲ್‌ಮಿ ನಾರ್ಜೋ N65 5G ಮೊಬೈಲ್ 6.67 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್, 89.97 ಪ್ರತಿಶತ ಸ್ಕ್ರೀನ್ ಟು ಬಾಡಿ ಅನುಪಾತ ಹಾಗೂ 625 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಡಿಸ್‌ಪ್ಲೇಯು ಪಂಚ್ ಹೋಲ್ ಕಟೌಟ್ ಪಡೆದುಕೊಂಡಿದೆ.
ರಿಯಲ್‌ಮಿ ನಾರ್ಜೋ N65 5G ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6300 5G ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಇದೆ. ಅಲ್ಲದೇ 6GB RAM ಡೈನಾಮಿಕ್ RAM ಸೌಲಭ್ಯ ಸಹ ಈ ಫೋನ್ ಪಡೆದಿದೆ. ಇದರೊಂದಿಗೆ 4GB + 12GB ಹಾಗೂ 6GB + 128GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿದೆ.
ರಿಯಲ್‌ಮಿ ನಾರ್ಜೋ N65 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರೊಂದಿಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಪಡೆದುಕೊಂಡಿದೆ.
ರಿಯಲ್‌ಮಿ ನಾರ್ಜೋ N65 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಅನ್ನು ಪಡೆದುಕೊಂಡಿದ್ದು, ಇದರೊಂದಿಗೆ 15W ಫಾಸ್ಟ್ ಚಾರ್ಜಿಂಗ್‌ಗೆ ಸೌಲಭ್ಯ ಸಹ ಇದೆ. ಅಲ್ಲದೇ ಕ್ವಿಕ್ ಚಾರ್ಜ್ ರಿವರ್ಸ್ ಚಾರ್ಜಿಂಗ್ ವ್ಯವಸ್ಥೆ ಸಹ ಹೊಂದಿದೆ. ಅಲ್ಲದೇ ವೈ-ಫೈ ಮತ್ತು ಬ್ಲೂಟೂತ್ ಸೌಲಭ್ಯ ಪಡೆದಿದ್ದು, ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್ ಪಡೆದುಕೊಂಡಿದೆ. ಹಾಗೆಯೇ ಇದು ಅಂಬರ್ ಗೋಲ್ಡ್ ಮತ್ತು ಡೀಪ್ ಗ್ರೀನ್ ಕಲರ್ ಆಯ್ಕೆ ಪಡೆದುಕೊಂಡಿದೆ.


Click it and Unblock the Notifications








