ಇದೇ ಏಪ್ರಿಲ್ 22 ರಂದು ರಿಯಲ್‌ಮಿ ಈ ಹೊಸ ಫೋನ್ ಸೇಲ್ ಪ್ರಾರಂಭ!
ರಿಯಲ್‌ಮಿ ಸಂಸ್ಥೆಯ ಹೊಸ ರಿಯಲ್‌ಮಿ P1 ಸರಣಿಯ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ತನ್ನ ಫೀಚರ್ಸ್ ಮೂಲಕ ಗಮನ ಸೆಳದಿದೆ. ಈ ಫೋನಿನ ಫಸ್ಟ್ ಸೇಲ್ ಏಪ್ರಿಲ್ 22 ರಂದು ಫ್ಲಿಪ್‌ಕಾರ್ಟ್ ತಾಣದ ಮೂಲಕ ಪ್ರಾರಂಭವಾಗಲಿದೆ. ಅಂದಹಾಗೆ ರಿಯಲ್‌ಮಿ P1 ಫೋನ್ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್ ಪವರ್ ಸೌಲಭ್ಯ ಪಡೆದಿರುವುದು ಆಕರ್ಷಕ ಎನಿಸಿದೆ.
ಹೌದು, ರಿಯಲ್‌ಮಿ P1 ಸ್ಮಾರ್ಟ್‌ಫೋನ್ ಸರಣಿಯ ಮೊದಲ ಮಾರಾಟವು ಇದೇ ಏಪ್ರಿಲ್ 22 ರಂದು ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಮೂಲಕ ನಡೆಯಲಿದೆ. ಈ ಬಗ್ಗೆ ಫ್ಲಿಪ್‌ಕಾರ್ಟ್ ತಾಣವು ಈಗಾಗಲೇ ಮೈಕ್ರೋ ಪೇಜ್ ಸಹ ರೂಪಿಸಿದೆ. ಇನ್ನು ಈ ಫೋನಿನ ಆರಂಭಿಕ ಕೊಡುಗೆಯ ಬೆಲೆಯು 14,999ರೂ. ಆಗಿದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ P1 ಫೀಚರ್ಸ್ ಹೀಗಿವೆ
ರಿಯಲ್‌ಮಿ P1 ಸ್ಮಾರ್ಟ್‌ಫೋನ್ 6.67 ಇಂಚಿನ ಅಮೋಲೆಡ್ FHD+ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಹಾಗೆಯೇ ಇದು 2,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಪ್ರಮುಖವಾಗಿ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ.
ರಿಯಲ್‌ಮಿ P1 ಫೋನ್ 8 GB RAM ಮತ್ತು 256 GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಜೊತೆಗೆ 50ಎಂಪಿ ಪ್ರೈಮರಿ ಸೆನ್ಸರ್ ಮತ್ತು 2ಎಂಪಿ ತೃತೀಯ ಸೆನ್ಸರ್ ನೊಂದಿಗೆ 8ಎಂಪಿ ಅಲ್ಟ್ರಾವೈಡ್ ಸೆನ್ಸರ್ ಅನ್ನು ಈ ಫೋನ್‌ನಲ್ಲಿ ಇದೆ. ಹಾಗೆಯೇ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿ ಇದೆ.

ರಿಯಲ್‌ಮಿ P1 ಪ್ರೊ ಫೀಚರ್ಸ್ ಹೀಗಿವೆ
ರಿಯಲ್‌ಮಿ P1 ಪ್ರೊ ಫೋನ್ 6.67 ಇಂಚಿನ ಅಮೋಲೆಡ್ ಕರ್ವ್ ಡಿಸ್‌ಪ್ಲೇ ಹೊಂದಿದ್ದು, ಇದು 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದ್ದು, ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್ ಬಲ ಪಡೆದಿದೆ. ಹಾಗೆಯೇ 12 GB RAM ಮತ್ತು 256 GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದ್ದು, ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ UI 5 ಅನ್ನು ರನ್ ಮಾಡಲಿದೆ.
ಇದರೊಂದಿಗೆ ರಿಯಲ್‌ಮಿ P1 ಪ್ರೊ ಫೋನ್ 50 ಮೆಗಾಪಿಕ್ಸೆಲ್ OIS ಸಕ್ರಿಯಗೊಳಿಸಿದ ಪ್ರಾಥಮಿಕ ಸೆನ್ಸರ್ ಜೊತೆಗೆ 8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಮತ್ತು ತೃತೀಯ ಸೆನ್ಸರ್ ಅನ್ನು ಈ ಫೋನ್ ಹೊಂದಿದೆ. ಅಲ್ಲದೆ ಈ ಫೋನ್ ಸಹ 45 W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿಯಲ್ಲಿ ಹೊಂದಿದೆ.
ಬೆಲೆ ಹಾಗೂ ಲಭ್ಯತೆ
ರಿಯಲ್‌ಮಿ P1 ಮೊಬೈಲ್‌ನ 6GB RAM ಮತ್ತು 128 GB ವೇರಿಯಂಟ್‌ಗೆ 14,999 ರೂ.ಗಳು ಆಗಿದೆ. ಅದೇ ರೀತಿ 8 GB RAM ಮತ್ತು 128 GB RAM ಸ್ಟೋರೇಜ್ ವೇರಿಯಂಟ್‌ಗೆ 16,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ.
ಇನ್ನು ರಿಯಲ್‌ಮಿ P1 ಪ್ರೊ 5G ಮೊಬೈಲ್‌ನ 8 GB RAM ಮತ್ತು 128 GB ಸ್ಟೋರೇಜ್ ವೇರಿಯಂಟ್ ಫೋನ್‌ಗೆ 19,999 ರೂ.ಗಳ ಬೆಲೆಯನ್ನು ಪಡೆದಿದ್ದು, 8 GB RAM ಮತ್ತು 256 GB ಸ್ಟೋರೇಜ್ ಆಯ್ಕೆಯ ಫೋನ್‌ಗೆ 20,999 ರೂ. ಗಳ ಬೆಲೆ ಪಡೆದಿದೆ.


Click it and Unblock the Notifications








