ರೌಂಡ್ ಕ್ಯಾಮೆರಾ ರಚನೆ ಇರುವ ರಿಯಲ್‌ಮಿಯ ಈ ಫೋನಿಗೆ ಈಗ ಬಿಗ್ ಡಿಸ್ಕೌಂಟ್!
ದಿಗ್ಗಜ ಇ ಕಾಮರ್ಸ್ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಬೊಂಬಾಟ್ ಡಿಸ್ಕೌಂಟ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿದೆ. ಈ ಆನ್‌ಲೈನ್ ವೆಬ್‌ಸೈಟ್ ಎಲ್ಲ ಉತ್ಪನ್ನಗಳಿಗೂ ಒಂದಿಲ್ಲೊಂದು ಡಿಸ್ಕೌಂಟ್ ಲಭ್ಯ ಮಾಡಿರುತ್ತದೆ. ಮುಖ್ಯವಾಗಿ ಫೋನ್‌ಗಳಿಗೂ ಸಹ ಆಕರ್ಷಕ ಡಿಸ್ಕೌಂಟ್ ಆಫರ್‌ಗಳ ನೀಡುವ ಮೂಲಕ ಅಧಿಕ ಗ್ರಾಹಕರನ್ನು ಸೆಳೆಯುತ್ತದೆ. ಸದ್ಯ ರಿಯಲ್‌ಮಿ ಮೊಬೈಲ್ ಸಂಸ್ಥೆಯ ರಿಯಲ್‌ಮಿ P1 (realme P1 5G) ಫೋನ್ ಸೂಪರ್ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ.
ಹೌದು, ಫ್ಲಿಪ್‌ಕಾರ್ಟ್ ಆನ್‌ಲೈನ್ ಪ್ಲಾಟ್‌ಫಾರ್ಮ್ ನಲ್ಲಿ ರಿಯಲ್‌ಮಿ P1 (realme P1 5G) ಮೊಬೈಲ್ ಶೇ. 23% ರಷ್ಟು ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. 6 GB RAM + 128 GB ಸ್ಟೋರೇಜ್ ವೇರಿಯಂಟ್ ಅನ್ನು 15,999ರೂ.ಗಳ ಪ್ರೈಸ್ ಟ್ಯಾಗ್ ನಲ್ಲಿ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಬ್ಯಾಂಕ್ ಕೊಡುಗೆ ಹಾಗೂ ನೋ ಕಾಸ್ಟ್ ಇಎಮ್‌ಐ ಕೂಡಾ ದೊರೆಯುತ್ತದೆ.

ಇನ್ನು ಈ ಮೊಬೈಲ್ 5,000 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಖರೀದಿದಾದರು ಈ ಮೊಬೈಲ್ ಅನ್ನು 8 GB RAM ಮತ್ತು 256 GB ವೇರಿಯಂಟ್ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೆ ರಿಯಲ್‌ಮಿ P1 ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ P1 ಫೀಚರ್ಸ್ ಮಾಹಿತಿ
ರಿಯಲ್‌ಮಿ P1 ಮೊಬೈಲ್ 6.67 ಇಂಚಿನ ಅಮೋಲೆಡ್ FHD+ ಡಿಸ್‌ಪ್ಲೇ ಅನ್ನು ಹೊಂದಿದ್ದು, 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಹಾಗೆಯೇ ಇದು 2,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಪ್ರಮುಖವಾಗಿ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ.
ರಿಯಲ್‌ಮಿ P1 ಫೋನ್ 8 GB RAM ಮತ್ತು 256 GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಜೊತೆಗೆ 50ಎಂಪಿ ಪ್ರೈಮರಿ ಸೆನ್ಸರ್ ಮತ್ತು 2ಎಂಪಿ ತೃತೀಯ ಸೆನ್ಸರ್ ನೊಂದಿಗೆ 8ಎಂಪಿ ಅಲ್ಟ್ರಾವೈಡ್ ಸೆನ್ಸರ್ ಅನ್ನು ಈ ಫೋನ್‌ನಲ್ಲಿ ಇದೆ. ಹಾಗೆಯೇ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿ ಇದೆ.
ರಿಯಲ್‌ಮಿ P1 ಪ್ರೊ ಫೀಚರ್ಸ್ ಮಾಹಿತಿ
ರಿಯಲ್‌ಮಿ P1 ಪ್ರೊ ಮೊಬೈಲ್ 6.67 ಇಂಚಿನ ಅಮೋಲೆಡ್ ಕರ್ವ್ ಡಿಸ್‌ಪ್ಲೇ ಹೊಂದಿದ್ದು, ಇದು 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದ್ದು, ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್ ಬಲ ಪಡೆದಿದೆ. ಹಾಗೆಯೇ 12 GB RAM ಮತ್ತು 256 GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದ್ದು, ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ UI 5 ಅನ್ನು ರನ್ ಮಾಡಲಿದೆ.
ಇದರೊಂದಿಗೆ ರಿಯಲ್‌ಮಿ P1 ಪ್ರೊ ಫೋನ್ 50 ಮೆಗಾಪಿಕ್ಸೆಲ್ OIS ಸಕ್ರಿಯಗೊಳಿಸಿದ ಪ್ರಾಥಮಿಕ ಸೆನ್ಸರ್ ಜೊತೆಗೆ 8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಮತ್ತು ತೃತೀಯ ಸೆನ್ಸರ್ ಅನ್ನು ಈ ಫೋನ್ ಹೊಂದಿದೆ. ಅಲ್ಲದೆ ಈ ಫೋನ್ ಸಹ 45 W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ.
ರಿಯಲ್‌ಮಿ P1 ಮೊಬೈಲ್‌ನ 6GB RAM ಮತ್ತು 128 GB ವೇರಿಯಂಟ್ ಹಾಗೂ 8 GB RAM ಮತ್ತು 128 GB RAM ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಇನ್ನು ಅದೇ ರೀತಿ ರಿಯಲ್‌ಮಿ P1 ಪ್ರೊ 5G ಮೊಬೈಲ್‌ನ 8 GB RAM ಮತ್ತು 128 GB ಸ್ಟೋರೇಜ್ ವೇರಿಯಂಟ್ ಹಾಗೂ 8 GB RAM ಮತ್ತು 256 GB ಸ್ಟೋರೇಜ್ ಆಯ್ಕೆ ಪಡೆದಿದೆ.


Click it and Unblock the Notifications








