Realme: ರಿಯಲ್‌ಮಿ P1 5G ಸರಣಿಯ ಬೆಲೆ, ವಿನ್ಯಾಸ ಸೇರಿದಂತೆ ಅನೇಕ ಮಾಹಿತಿ ಲೀಕ್! ಯಾವಾಗ ಲಾಂಚ್?
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphones) ಅಗ್ಗದ ದರದಲ್ಲಿ ಸುಧಾರಿತ ಫೀಚರ್ಸ್ ಆಯ್ಕೆ ನೀಡುವ ಫೋನ್‌ಗಳಲ್ಲಿ ಪ್ರಮುಖವಾಗಿವೆ. ಈ ಫೋನ್ ಲಾಂಚ್ ಆಗುವ ಮುನ್ನವೇ ವಿವಿಧ ವಿಷಯಗಳಿಗೆ ಮುನ್ನೆಲೆಗೆ ಬಂದಿದೆ.
ಹೌದು, ರಿಯಲ್‌ಮಿ P1 5G ಸರಣಿಯನ್ನು (Realme P1 5G series) ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಸರಣಿ ಬಜೆಟ್ ಬೆಲೆಯಲ್ಲಿ ಲಭ್ಯ ಇರಲಿದ್ದು, ರಿಯಲ್‌ಮಿ P1 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಆಯ್ಕೆ ಪಡೆದಿರಲಿದೆ ಚಾಲಿತವಾಗಲಿದೆ?, ಯಾವಾಗ ಲಾಂಚ್ ಆಗಲಿದೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ P1 5G ಸರಣಿ: ರಿಯಲ್‌ಮಿ ಭಾರತದಲ್ಲಿ ಹೊಸ P-ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಅಂದರೆ ಏಪ್ರಿಲ್ 15 ರಂದು ದೇಶದಲ್ಲಿ ರಿಯಲ್‌ಮಿ P1 5G ಮತ್ತು ರಿಯಲ್‌ಮಿ P1 ಪ್ರೊ 5G ಅನ್ನು ಲಾಂಚ್ ಮಾಡಲಾಗುತ್ತದೆ. ಈ ಹಿಂದೆ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಎರಡೂ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವನ್ನು ಬಹಿರಂಗಪಡಿಸಿತ್ತು. ಆದರೆ, ಈಗ ಅದು ಪ್ರಮಾಣಿತ ಮಾದರಿಯ ಪ್ರಮುಖ ಫೀಚರ್ಸ್ ಅನ್ನು ಬಹಿರಂಗಪಡಿಸಿದೆ.
ಕಂಪನಿಯು ತನ್ನ ಭಾರತದ ವೆಬ್‌ಸೈಟ್‌ನಲ್ಲಿ P1 ಮತ್ತು P1 ಪ್ರೊ ಉತ್ಪನ್ನದ ಪೇಜ್ ಅನ್ನೂ ಸಹ ತೆರೆದಿದ್ದು, ಸ್ಟ್ಯಾಂಡರ್ಡ್ ಮಾಡೆಲ್ ಅನ್ನು 15,000 ರೂ.ಗಳಿಗಿಂತ ಕಡಿಮೆ ಬೆಲೆಗೆ ಮತ್ತು ಪ್ರೊ ಮಾಡೆಲ್ ಅನ್ನು 20,000 ರೂ.ಗಳಿಗಿಂತ ಕಡಿಮೆ ಬೆಲೆಗೆ ನೀಡಲಾಗುತ್ತದೆ ಎಂದು ಈ ಮೂಲಕ ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್ ಏನೆಲ್ಲಾ ಫೀಚರ್ಸ್ ಪಡೆದಿರಲಿದೆ ಅನ್ನೋ ಮಾಹಿತಿಯನ್ನು ತಿಳಿಯೋಣ ಬನ್ನಿ.

ರಿಯಲ್‌ಮಿ P1 5G ಸರಣಿ ಫೀಚರ್ಸ್: ರಿಯಲ್‌ಮಿ P1 5G ಸ್ಮಾರ್ಟ್‌ಫೋನ್ ಅನ್ನು ಪೀಕಾಕ್ ಗ್ರೀನ್ ಮತ್ತು ಫೀನಿಕ್ಸ್ ರೆಡ್ ಎಂಬ ಎರಡು ಬಣ್ಣ ವೇರಿಯಂಟ್‌ನಲ್ಲಿ ಟೀಸಿಂಗ್ ಮಾಡುತ್ತಿದೆ. ಪ್ರೊ ಮಾದರಿಯು ಹೆಚ್ಚುವರಿ ಬಣ್ಣ ಪ್ಯಾರಟ್ ಬ್ಲೂ ನಲ್ಲಿಯೂ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಸ್ಟ್ಯಾಂಡರ್ಡ್ ಮಾದರಿಯು ಫ್ಲಾಟ್ ವಿನ್ಯಾಸ ಹೊಂದಿದ್ದು, ರಿಯರ್‌ನ ಮೇಲ್ಭಾಗದ ಮಧ್ಯದಲ್ಲಿದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಕಾಣಬಹುದಾಗಿದೆ.
ಇದರ ಜೊತೆಗೆ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಅನ್ನೋದನ್ನು ಕಂಡುಕೊಳ್ಳಬಹುದು. ಹಾಗೆಯೇ ಎಲ್ಇಡಿ ಫ್ಲ್ಯಾಶ್ ಅನ್ನು ಹೊಂದಿದ್ದು, ಪ್ರೊ ಮಾದರಿಯು ಎರಡು ಕ್ಯಾಮೆರಾಗಳೊಂದಿಗೆ ಒಂದೇ ರೀತಿಯ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಕರ್ವ್ ರಿಯರ್‌ಮತ್ತು ಕರ್ವ್ ಡಿಸ್‌ಪ್ಲೇ ಆಯ್ಕೆ ಪಡೆದಿದೆ.
ಮೈಕ್ರೋಸೈಟ್ ಪ್ರಕಾರ, ರಿಯಲ್‌ಮಿ P1 5G ಮೀಡಿಯಾ ಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ. ಇದನ್ನು 15 ಸಾವಿರ ರೂ.ಗಳಲ್ಲಿ ಲಭ್ಯ ಇರುವ ಫೋನ್‌ಗಳ ಅಡಿಯಲ್ಲಿ ವೇಗವಾದ ಚಿಪ್‌ಸೆಟ್ ಎಂದು ಟ್ಯಾಗ್ ಮಾಡಲಾಗಿದೆ. ಆಕ್ಟಾ-ಕೋರ್ ಚಿಪ್‌ಸೆಟ್ ಗರಿಷ್ಠ CPU ಗಡಿಯಾರದ ವೇಗ 2.6 GHz ಅನ್ನು ಹೊಂದಿದೆ. ಪ್ರೊಸೆಸರ್ 4,356.62 ಎಂಎಂ ಆವಿ ಚೇಂಬರ್‌ನಿಂದ ಮಾಡಲ್ಪಟ್ಟ 7 ಲೇಯರ್ ವಿಸಿ ಕೂಲಿಂಗ್ ಸಿಸ್ಟಮ್‌ನೊಂದಿಗೆ ಜೋಡಿಯಾಗಿದೆ.

ಇನ್ನು ಈ ಫೋನ್‌ಗಳು 2,000 ನಿಟ್ಸ್ ಬ್ರೈಟ್‌ನೆಸ್ ಮತ್ತು TUV ರೈನ್‌ಲ್ಯಾಂಡ್ ಐ-ಪ್ರೊಟೆಕ್ಷನ್ ಪ್ರಮಾಣೀಕರಣ ಬೆಂಬಲದೊಂದಿಗೆ 120 Hz ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ. ಈ ಮೂಲಕ ಈ ಬೆಲೆ ವಿಭಾಗದಲ್ಲಿ P1 5G ಫೋನ್ ಈ ರೀತಿಯ ಡಿಸ್‌ಪ್ಲೇಯನ್ನು ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ರಿಯಲ್‌ಮಿ ಹೇಳಿಕೊಂಡಿದೆ.
ಇಷ್ಟೇ ಅಲ್ಲದೆ ಈ ಡಿಸ್‌ಪ್ಲೇಯು TUV ರೈನ್‌ಲ್ಯಾಂಡ್‌ನಿಂದ 4-ವರ್ಷದ ಫ್ಲೂಯೆನ್ಸಿ ಪ್ರಮಾಣಪತ್ರದೊಂದಿಗೆ ಬರುತ್ತದೆ ಮತ್ತು ರೈನ್‌ವಾಟರ್ ಟಚ್‌ಗೆ ಬೆಂಬಲವನ್ನು ನೀಡುತ್ತದೆ. ಇದು ಒದ್ದೆಯಾದ ಕೈಗಳಿಂದಲೂ ಟಚ್‌ಸ್ಕ್ರೀನ್ ಅನ್ನು ಬಳಸಲು ನಿಮಗೆ ಅನುಮತಿಸುತ್ತದೆ ಎಂದು ರಿಯಲ್‌ಮಿ ಮಾಹಿತಿ ನೀಡಿದೆ. ಇದೆಲ್ಲದರ ಜೊತೆಗೆ ಈ ಸ್ಮಾರ್ಟ್‌ಫೋನ್ ಸರಣಿ 45W ಸೂಪರ್ ವೂಕ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಪಡೆದಿದೆ. ಈ ಸ್ಮಾರ್ಟ್‌ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








