ಭಾರೀ ಡಿಸ್ಕೌಂಟ್ ಬೆಲೆಗೆ ಈ ವೇಗದ ಪ್ರೊಸೆಸರ್ ಮೊಬೈಲ್ ಲಭ್ಯ!..ಖರೀದಿ ಮಾಡ್ತೀರಾ?
ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್ ಬಿಗ್ ಸೇವಿಂಗ್ ಡೇಸ್ ಮಾರಾಟವನ್ನು ವಿಸ್ತರಿಸಿದ್ದು, ಹೊಸ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಖುಷಿ ಎನಿಸಿದೆ. ಈ ಮಾರಾಟದಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳು ಬೊಂಬಾಟ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ರಿಯಲ್‌ಮಿ P1 ಸ್ಪೀಡ್ 5G (realme P1 Pro 5G) ಮೊಬೈಲ್ ಸಹ ಅತ್ಯುತ್ತಮ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಸ್ನಾಪ್‌ಡ್ರಾಗನ್ 7 ಜೆನ್ 3 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ರಿಯಲ್‌ಮಿ P1 ಸ್ಪೀಡ್ 5G (realme P1 Pro 5G) ಫೋನ್ ಶೇ. 19% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಫೋನಿನ 8 GB RAM + 256 GB ಸ್ಟೋರೇಜ್ ವೇರಿಯಂಟ್ ಅನ್ನು ಗ್ರಾಹಕರು 20,999ರೂ. ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದು. ಅಲ್ಲದೇ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳ ಡಿಸ್ಕೌಂಟ್ ಪಡೆದುಕೊಂಡರೆ, ಹೆಚ್ಚಿನ ರಿಯಾಯಿತಿ ಪಡೆಯಬಹುದು.

ಇನ್ನು ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್‌ನ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಈ ಫೋನ್ 8GB + 128GB ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೆ ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬ್ನನಿರಿ. ಮುಂದೆ ಓದಿರಿ.
ರಿಯಲ್‌ಮಿ P1 ಸ್ಪೀಡ್ 5G ಫೀಚರ್ಸ್ ಮಾಹಿತಿ
ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ 6.67 ಇಂಚಿನ AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 2400 ×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದ್ದು, ರೇನ್ ವಾಟರ್ ಸ್ಮಾರ್ಟ್ ಟಚ್ ಹಾಗೂ ಪಾಂಡಾ ಗ್ಲಾಸ್ ಪ್ರೊಕೆಕ್ಷನ್ ಸೌಲಭ್ಯ ಒಳಗೊಂಡಿದೆ.
ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಪವರ್ ಪಡೆದಿದ್ದು, ಇದರ ಜೊತೆಗೆ ಇದು ಮಾಲಿ-G615 MC2 GPU ಹೊಂದಿದೆ. ಇದು ಆಂಡ್ರಾಯ್ಡ್ 14 ಸಪೋರ್ಟ್ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಇದಲ್ಲದೆ 8GB RAM / 12GB ಹಾಗೂ 128GB RAM / 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ.
ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್ AI ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2MP ಸೆನ್ಸಾರ್ ಪಡೆದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ.
ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 45W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಲ್ಲದೇ ಇದು ಬ್ಲೂಟೂತ್ 5.4, ಬೀಡೌ, GPS, GLONASS, ಗೆಲಿಲಿಯೋ, QZSS, USB ಟೈಪ್-ಸಿ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ. ಅಂದಹಾಗೆ ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ 8GB + 128GB ಸ್ಟೋರೇಜ್ ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ.


Click it and Unblock the Notifications








