Realme: ಭಾರತದಲ್ಲಿ ರಿಯಲ್‌ಮಿ P1, ರಿಯಲ್‌ಮಿ P1 ಪ್ರೊ 5G ಲಾಂಚ್! ಬೆಲೆ, ಫೀಚರ್ಸ್ ತಿಳಿಯಿರಿ
ರಿಯಲ್‌ಮಿ ಭಾರತದಲ್ಲಿ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಫೋನ್‌ಗಳು ಲಾಂಚ್ ಆಗುವ ಮುನ್ನವೇ ಕೆಲವು ಫೀಚರ್ಸ್ ಮೂಲಕ ಸ್ಮಾರ್ಟ್‌ಫೋನ್ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಉಂಟು ಮಾಡಿದ್ದವು.
ಹೌದು, ರಿಯಲ್‌ಮಿ (Realme) ಅಂತಿಮವಾಗಿ ತನ್ನ P1 ಸರಣಿಯನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಫೋನ್‌ಗಳು 20,000 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇದ್ದು ಪವರ್‌ಫುಲ್ ಫೀಚರ್ಸ್ ಆಯ್ಕೆ ಹಾಗೂ ಆಕರ್ಷಕ ಫೀಚರ್ಸ್ ಅನ್ನು ಪಡೆದುಕೊಂಡಿವೆ. ಅದರಲ್ಲೂ ನಾರ್ಜೋ 70 ಪ್ರೊ 5G ಯೊಂದಿಗೆ ಹೊಂದಿಕೆಯಾಗುವ P1 ಸರಣಿಯು ರಿಯಲ್‌ಮಿ P1 ಮತ್ತು ರಿಯಲ್‌ಮಿ P1 ಪ್ರೊ (Realme P1 and Realme P1 Pro) ಎಂಬ ಎರಡು ವೇರಿಯಂಟ್ ಅನ್ನು ಹೊಂದಿದೆ. ಹಾಗಿದ್ರೆ, ಬನ್ನಿ ಈ ಸರಣಿಯಲ್ಲಿ ಅನಾವರಣವಾದ ಫೋನ್‌ಗಳ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿಯೋಣ.

ರಿಯಲ್‌ಮಿ P1 ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.67 ಇಂಚಿನ ಅಮೋಲೆಡ್ FHD+ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ. ಇದರ ಜೊತೆಗೆ 2,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಪ್ರಮುಖವಾಗಿ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 603K ಯ Antutu ಸ್ಕೋರ್ ಅನ್ನು ನೀಡುತ್ತದೆ. ಏಳು ಲೇಯರ್‌ನ ಶಾಖದ ಪ್ರಸರಣದೊಂದಿಗೆ 3D VC ಕೂಲಿಂಗ್ ಸಿಸ್ಟಮ್ ಅನ್ನು ಇದು ನೀಡಲಿದೆ.
ಇನ್ನು ಈ ಫೋನ್ 8 GB RAM (ಹೆಚ್ಚುವರಿ 8 GB ಡೈನಾಮಿಕ್ RAM) ಮತ್ತು 256 GB ಇಂಟರ್ ಸ್ಟೋರೇಕ್ ಆಯ್ಕೆ ಪಡೆದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಜೊತೆಗೆ 50 MP ಪ್ರೈಮರಿ ಸೆನ್ಸರ್ ಮತ್ತು 2MP ತೃತೀಯ ಸೆನ್ಸರ್ ನೊಂದಿಗೆ 8 MP ಅಲ್ಟ್ರಾವೈಡ್ ಸೆನ್ಸರ್ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಹಾಗೆಯೇ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ನೋಡಬಹುದು.

ರಿಯಲ್‌ಮಿ P1 ಪ್ರೊ ಫೀಚರ್ಸ್: ಈ ಫೋನ್ 6.67 ಇಂಚಿನ ಅಮೋಲೆಡ್ ಕರ್ವ್ ಡಿಸ್‌ಪ್ಲೇ ಹೊಂದಿದ್ದು, ಇದು 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದ್ದು, 3D ಏಳು ಲೇಯರ್ VC ಕೂಲಿಂಗ್ ಸಿಸ್ಟಮ್‌ನೊಂದಿಗೆ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್ ಬಲ ಪಡೆದಿದೆ. ಹಾಗೆಯೇ 12 GB RAM ಮತ್ತು 256 GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇರಲಿದ್ದು, ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ UI 5 ಅನ್ನು ರನ್ ಮಾಡಲಿದೆ.
ಇದರೊಂದಿಗೆ ಈ ಫೋನ್ 50 ಮೆಗಾಪಿಕ್ಸೆಲ್ OIS ಸಕ್ರಿಯಗೊಳಿಸಿದ ಪ್ರಾಥಮಿಕ ಸೆನ್ಸರ್ ಜೊತೆಗೆ 8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಮತ್ತು ತೃತೀಯ ಸೆನ್ಸರ್ ಅನ್ನು ಈ ಫೋನ್ ಹೊಂದಿದೆ. ಅಲ್ಲದೆ ಈ ಫೋನ್ ಸಹ 45 W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿಯಲ್ಲಿ ಈ ಫೋನ್ ಪ್ಯಾಕ್ ಆಗಿದೆ.
ರಿಯಲ್‌ಮಿ P1 5G ಹಾಗೂ ರಿಯಲ್‌ಮಿ P1 ಪ್ರೊ 5G ಬೆಲೆ ಹಾಗೂ ಲಭ್ಯತೆ: ರಿಯಲ್‌ಮಿ P1 ನ 6GB RAM ಮತ್ತು 128 GB ವೇರಿಯಂಟ್‌ಗೆ 14,999 ರೂ.ಗಳು ಹಾಗೂ 8 GB RAM ಮತ್ತು 128 GB RAM ಸ್ಟೋರೇಜ್ ವೇರಿಯಂಟ್‌ಗೆ 16,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಇದನ್ನು ಪ್ರೀ ಆರ್ಡರ್ ಮಾಡಿದ್ರೆ 2,000 ರೂ.ವರೆಗೆ ಪ್ರಯೋಜನಗಳನ್ನು ಪಡೆಯಬಹುದು.

ಜೊತೆಗೆ ರಿಯಲ್‌ಮಿ P1 ಪ್ರೊ 5G ಸ್ಮಾರ್ಟ್‌ಫೋನ್‌ನ 8 GB RAM ಮತ್ತು 128 GB ಇಂಟರ್ ಸ್ಟೋರೇಜ್ ವೇರಿಯಂಟ್ ಫೋನ್‌ಗೆ 19,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 8 GB RAM ಮತ್ತು 256 GB ಇಂಟರ್ ಸ್ಟೋರೇಜ್ ಆಯ್ಕೆಯ ಫೋನ್‌ಗೆ 20,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಏಪ್ರಿಲ್ 30 ರಿಂದ ಖರೀದಿ ಮಾಡಬಹುದಾಗಿದೆ.


Click it and Unblock the Notifications








