Home
ಸುದ್ದಿಜಾಲ

ಇದೇ ಅಕ್ಟೋಬರ್‌ 20 ರಂದು Realme P1 Speed 5G ಫಸ್ಟ್‌ ಸೇಲ್‌; ಆಫರ್‌ ಏನು?

ರಿಯಲ್‌ಮಿ ಸಂಸ್ಥೆಯ ಹೊಸ ರಿಯಲ್‌ಮಿ P1 Speed 5G ( Realme P1 Speed 5G ) ಸ್ಮಾರ್ಟ್‌ಫೋನ್‌ಗಳು ಈಗಾಗಲೇ ತನ್ನ ಫೀಚರ್ಸ್‌ ಮೂಲಕ ಗಮನ ಸೆಳದಿದೆ. ಈ ಫೋನಿನ ಫಸ್ಟ್‌ ಸೇಲ್‌ ಅಕ್ಟೋಬರ್ 20 ರಂದು ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಪ್ರಾರಂಭ ಆಗಲಿದೆ. ಅಂದಹಾಗೆ ರಿಯಲ್‌ಮಿ P1 Speed 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ ಪವರ್‌ ಸೌಲಭ್ಯ ಪಡೆದಿರುವುದು ಆಕರ್ಷಕ ಎನಿಸಿದೆ.

ಹೌದು, ರಿಯಲ್‌ಮಿ P1 Speed 5G ಸ್ಮಾರ್ಟ್‌ಫೋನ್ ಸರಣಿಯ ಮೊದಲ ಮಾರಾಟವು ಇದೇ ಅಕ್ಟೋಬರ್ 20 ರಂದು ಫ್ಲಿಪ್‌ಕಾರ್ಟ್‌ ವೆಬ್‌ಸೈಟ್ ಮೂಲಕ ನಡೆಯಲಿದೆ. ಈ ಬಗ್ಗೆ ಫ್ಲಿಪ್‌ಕಾರ್ಟ್‌ ತಾಣವು ಈಗಾಗಲೇ ಮೈಕ್ರೋ ಪೇಜ್‌ ಸಹ ರೂಪಿಸಿದೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಆರಂಭಿಕ ಕೊಡುಗೆಯ ಬೆಲೆಯು 15,999ರೂ. ಆಗಿದೆ.

ಇದೇ ಅಕ್ಟೋಬರ್‌ 20 ರಂದು Realme P1 Speed 5G ಫಸ್ಟ್‌ ಸೇಲ್‌; ಆಫರ್‌ ಏನು?

ಅಲ್ಲದೇ ಈ ಮೊಬೈಲ್ 8GB + 128GB ಹಾಗೂ 12GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯದಲ್ಲಿ ಇದೆ. ಹಾಗಾದರೆ ಈ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬ್ನನಿರಿ. ಮುಂದೆ ಓದಿರಿ.

ರಿಯಲ್‌ಮಿ P1 ಸ್ಪೀಡ್‌ 5G - ಹೀಗಿವೆ

ರಿಯಲ್‌ಮಿ P1 ಸ್ಪೀಡ್‌ 5G ಸ್ಮಾರ್ಟ್‌ಫೋನ್‌ 6.67 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 ×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದ್ದು, ರೇನ್ ವಾಟರ್‌ ಸ್ಮಾರ್ಟ್‌ ಟಚ್‌ ಹಾಗೂ ಪಾಂಡಾ ಗ್ಲಾಸ್‌ ಪ್ರೊಕೆಕ್ಷನ್‌ ಸೌಲಭ್ಯ ಒಳಗೊಂಡಿದೆ.

ರಿಯಲ್‌ಮಿ P1 ಸ್ಪೀಡ್‌ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ ಪವರ್‌ ಪಡೆದಿದ್ದು, ಜೊತೆಗೆ ಇದು ಮಾಲಿ-G615 MC2 GPU ಹೊಂದಿದೆ. ಇದು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ 8GB RAM / 12GB ಮತ್ತು 128GB RAM / 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ.

ರಿಯಲ್‌ಮಿ P1 ಸ್ಪೀಡ್‌ 5G ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ AI ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2MP ಸೆನ್ಸಾರ್‌ ಪಡೆದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ.

ರಿಯಲ್‌ಮಿ P1 ಸ್ಪೀಡ್‌ 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 45W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಲ್ಲದೇ ಇದು ಬ್ಲೂಟೂತ್ 5.4, ಬೀಡೌ, GPS, GLONASS, ಗೆಲಿಲಿಯೋ, QZSS, USB ಟೈಪ್-ಸಿ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ.

ಬೆಲೆ ಮತ್ತು ಲಭ್ಯತೆ
ದೇಶಿಯ ಮಾರುಕಟ್ಟೆಯಲ್ಲಿ ರಿಯಲ್‌ಮಿ P1 ಸ್ಪೀಡ್‌ 5G (realme P1 Speed 5G) ಸ್ಮಾರ್ಟ್‌ಫೋನ್‌ 8GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯು 17,999ರೂ. ಬೆಲೆಯನ್ನು ಪಡೆದಿದೆ. ಇನ್ನು ಇದರ 12GB + 256GB ಸ್ಟೋರೇಜ್ ವೇರಿಯಂಟ್‌ ಆಯ್ಕೆಯು 20,999ರೂ. ಬೆಲೆಯನ್ನು ಪಡೆದಿದೆ.

Best Mobiles in India

English summary
realme P1 Speed 5G first Sale Start on 20th October. check Price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+