Home
ಸುದ್ದಿಜಾಲ

ಇಂದು Realme P1 Speed 5G ಲಾಂಚ್; ಕಡಿಮೆ ಬೆಲೆ.. ವಿಶೇಷತೆಗಳೇನು?

ರಿಯಲ್‌ಮಿ (Realme) ಕಂಪನಿಯ ಬಹುನಿರಿಕ್ಷಿತ ಸ್ಮಾರ್ಟ್‌ಫೋನ್ ಇಂದು ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್‌ ರಿಯಲ್‌ಮಿ P1 ಸ್ಪೀಡ್ 5G (Realme P1 Speed 5G) ಹೆಸರಿನೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕಂಪನಿಯು ಇದನ್ನು ತನ್ನ 'P1' ಸರಣಿಯ ಅಡಿಯಲ್ಲಿ ಪರಿಚಯಿಸುತ್ತಿದೆ. ಈಗಾಗಲೇ, ಈ ಸರಣಿಯಲ್ಲಿ Realme P1 ಮತ್ತು Realme P1 Pro ಮೊಬೈಲ್‌ಗಳನ್ನು ಲಾಂಚ್ ಮಾಡಲಾಗಿದೆ. ಇದು ಮೂರನೇ ಫೋನ್ ಆಗಿದೆ. ಹಾಗಿದ್ರೆ, ಈ ನೂತನ ಮೊಬೈಲ್‌ನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ ಬನ್ನಿ.

ಕಂಪನಿಯು ಇಂದು (ಅಕ್ಟೋಬರ್ 15) ಮಧ್ಯಾಹ್ನ 12 ಗಂಟೆಗೆ ರಿಯಲ್‌ಮಿ P1 ಸ್ಪೀಡ್ 5G ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಫೋನ್ ದೊಡ್ಡ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ಹಿಂಭಾಗದಲ್ಲಿ ಫ್ಲಾಟ್ ಕಾರ್ನರ್‌ಗಳನ್ನು ಹೊಂದಿದೆ. ಈ ಫೋನ್ ಮುಂಭಾಗದಲ್ಲಿ ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಫೋನನ್ನು ನೀಲಿ ಬಣ್ಣದಲ್ಲಿ ತೋರಿಸಲಾಗಿದೆ. ಇದು ಬಹುತೇಕ Realme P1 ಮತ್ತು Realme P1 Pro ಮೊಬೈಲ್‌ನ ವಿನ್ಯಾಸವನ್ನು ಹೋಲುತ್ತದೆ.

ಇಂದು Realme P1 Speed 5G ಲಾಂಚ್; ಕಡಿಮೆ ಬೆಲೆ.. ವಿಶೇಷತೆಗಳೇನು?

ರಿಯಲ್‌ಮಿ P1 ಸ್ಪೀಡ್ 5G ವೈಶಿಷ್ಟ್ಯಗಳು (ನಿರೀಕ್ಷಿತ)

ಮುಂಬರುವ ರಿಯಲ್‌ಮಿ P1 ಸ್ಪೀಡ್ 5G ಫೋನ್ 120Hz ರಿಫ್ರೆಶ್ ದರದೊಂದಿಗೆ OLED ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಐ ಪ್ರೊಟೆಕ್ಷನ್ ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪನಿ ದೃಢಪಡಿಸಿದೆ. ಮಾಹಿತಿಯ ಪ್ರಕಾರ, ರಿಯಲ್‌ಮಿ P1 ಸ್ಪೀಡ್ 5G ಫೋನ್‌ ಮಿಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ 5G ಚಿಪ್‌ಸೆಟ್ ಅನ್ನು ಹೊಂದಿರಲಿದೆ. ಈ ಪ್ರೊಸೆಸರ್‌ 750K ಗಿಂತ ಹೆಚ್ಚಿನ AnTuTu ಸ್ಕೋರ್ ಅನ್ನು ಪಡೆದಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಕಂಪನಿಯ ಇತ್ತೀಚಿನ UI ನೊಂದಿಗೆ ಬರುವ ನಿರೀಕ್ಷೆಯಿದೆ.

ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ 26GB RAM ಮತ್ತು 256GB ಸ್ಟೋರೇಜ್‌ ಆಯ್ಕೆ ಹೊಂದಿರಲಿದೆ. ಇದರೊಂದಿಗೆ, 8GB RAM ಮತ್ತು 12GB RAM ಸ್ಟೋರೇಜ್ ಆಯ್ಕೆಯಲ್ಲಿ ಬರುವ ಸಾಧ್ಯತೆಯಿದೆ. ಈ ಫೋನಿನಲ್ಲಿ 14 GB ವರೆಗಿನ ವರ್ಚುವಲ್ ತಂತ್ರಜ್ಞಾನವು ಲಭ್ಯವಿರುತ್ತದೆ. ಇದರ ಸಹಾಯದಿಂದ 26GB RAM ವರೆಗೆ ಬಳಸಬಹುದು. ರಿಯಲ್‌ಮಿ P1 ಸ್ಪೀಡ್ 5G ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲೆನ್ಸ್ ಹೊಂದಿರುತ್ತದೆ. ಇದು ಎಲ್‌ಇಡಿ ಫ್ಲ್ಯಾಷ್ ಮತ್ತು ಎಐ ತಂತ್ರಜ್ಞಾನದೊಂದಿಗೆ ಬರುತ್ತದೆ.

ಈ ಸುದ್ದಿ ಓದಿದ್ದೀರಾ?: 108MP ಕ್ಯಾಮೆರಾ, 256GB ಸ್ಟೋರೇಜ್.. ಕಡಿಮೆ ಬೆಲೆಗೆ Realme 5G ಫೋನ್ ಸೇಲ್!

5000mAh ಬ್ಯಾಟರಿ, 45W ವೇಗದ ಚಾರ್ಜಿಂಗ್

ರಿಯಲ್‌ಮಿ P1 ಸ್ಪೀಡ್ 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು, ಸುಧೀರ್ಘ ಬ್ಯಾಕಪ್ ಜೊತೆಗೆ ತ್ವರಿತ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಈ ರಿಯಲ್‌ಮಿ ಮೊಬೈಲ್ TUV ಲ್ಯಾಗ್ ಉಚಿತ ಮೊಬೈಲ್ ಗೇಮಿಂಗ್ ಪ್ರಮಾಣೀಕರಣದೊಂದಿಗೆ ಬರುತ್ತದೆ. ನೀರು ಮತ್ತು ಧೂಳಿನ ರಕ್ಷಣೆಗಾಗಿ IP65 ರೇಟಿಂಗ್ ಪಡೆದಿದೆ. ಜೊತೆಗೆ, ವೈ ಫೈ 6, ಬ್ಲೂಟೂತ್ 5.4, 5G, 4G ಸಂಪರ್ಕ ಆಯ್ಕೆಗಳು ಇರಲಿದೆ.

ರಿಯಲ್‌ಮಿ P1 ಸ್ಪೀಡ್ 5G ಬೆಲೆ (ನಿರೀಕ್ಷಿತ)

ಕಂಪನಿಯು ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್‌ನ ಬೆಲೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ, ಇದನ್ನು ಕಡಿಮೆ ಬಜೆಟ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ. ವರದಿಯ ಪ್ರಕಾರ, 20,000 ರೂ. ಗಿಂತ ಕಡಿಮೆ ಬೆಲೆ ಹೊಂದಿರಲಿದೆ. ನೀವು, ಆಫರ್‌ಗಳೊಂದಿಗೆ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿಸಬಹುದು.

Best Mobiles in India

English summary
Realme P1 Speed 5G launch in India Today: Expected Price and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+