ನಾಳೆ ಹೊಸ Realme ಫೋನ್ ಸೇಲ್; 4000 ಡಿಸ್ಕೌಂಟ್ ಘೋಷಣೆ.. ಬಜೆಟ್ ಬೆಲೆ, ವಿಶೇಷತೆಗಳೇನು?
ರಿಯಲ್‌ಮಿ ಇತ್ತೀಚೆಗೆ ಹೊಸ 5G ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ರಿಯಲ್‌ಮಿ P3 ಅಲ್ಟ್ರಾ 5G (Realme P3 Ultra 5G) ಹೆಸರಿನೊಂದಿಗೆ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಫೋನ್ ತನ್ನ ವಿನ್ಯಾಸ ಮತ್ತು ವಿಭಿನ್ನ ವೈಶಿಷ್ಟ್ಯಗಳ ಮೂಲಕ ಗ್ರಾಹಕರ ಮೆಚ್ಚುಗೆ ಪಡೆದಿದೆ. ಅಂದಹಾಗೆ, ಈ ಮೊಬೈಲ್ ನಾಳೆ (ಮಾರ್ಚ್ 25) ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ನೀವು ಮೊದಲ ದಿನವೇ ಈ ಫೋನನ್ನು ಖರೀದಿಸಿದರೆ 4,000 ರೂ. ಉಳಿತಾಯ ಮಾಡಬಹುದು. ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಿಯಲ್‌ಮಿ P3 ಅಲ್ಟ್ರಾ 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗಿಲಿದೆ. ಈ ಫೋನಿನ ವಿಶೇಷತೆಗಳೆಂದರೆ, ಈ ಫೋನ್ 50MP ಮುಖ್ಯ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಲ್ಟ್ರಾ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೆಯೇ 12GBRAM + 256GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ರಿಯಲ್‌ಮಿ 5G ಫೋನ್ ಎಐ ಮತ್ತು ಸ್ಮಾರ್ಟ್ ಫೀಚರ್ ಹೊಂದಿದೆ. ಇದು ಗೂಗಲ್ ಜೆಮಿನಿ ಎಐ ಅನ್ನು ಸಂಯೋಜಿಸಿದೆ. ಇದರೊಂದಿಗೆ ಪಠ್ಯವನ್ನು ಸುಲಭವಾಗಿ ರಚಿಸಲು ಮತ್ತು ಸ್ಮಾರ್ಟ್ ಹುಡುಕಾಟಗಳನ್ನು ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಇದರಲ್ಲಿ ಎಐ (AI) ಸ್ಮಾರ್ಟ್ ಲೂಪ್ ಮತ್ತು ಎಐ ರೆಕಾರ್ಡಿಂಗ್ ಸಾರಾಂಶದಂತಹ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಈ ಫೋನಿನ ಬೆಲೆ ಮತ್ತು ಇನ್ನಿತರ ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.
ರಿಯಲ್‌ಮಿ P3 ಅಲ್ಟ್ರಾ ವೈಶಿಷ್ಟ್ಯಗಳು
ರಿಯಲ್‌ಮಿ P3 ಅಲ್ಟ್ರಾ ಸ್ಮಾರ್ಟ್‌ಫೋನ್ 6.83 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2800 x 1272 ಪಿಕ್ಸೆಲ್‌ಗಳ ರೆಸಲ್ಯೂಶನ್, 3840Hz PWM ಡಿಮ್ಮಿಂಗ್ ಮತ್ತು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಇದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI 6.0 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಮಾಲಿ G615 MC6 ಜಿಪಿಯು ಸಹ ಹೊಂದಿದೆ.
ರಿಯಲ್‌ಮಿ P3 ಅಲ್ಟ್ರಾ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಶ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಇದೆ. ಎಐ (AI) ವೈಶಿಷ್ಟ್ಯಗಳಲ್ಲಿ ಎಐ ಎರೇಸರ್, ಎಐ ಬೆಸ್ಟ್ ಫೇಸ್ ಮತ್ತು ಎಐ ಮೋಷನ್ ಡೆಬ್ಲರ್ ಒಳಗೊಂಡಿದೆ.
ರಿಯಲ್‌ಮಿ P3 ಅಲ್ಟ್ರಾ 5G ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W SuperVOOC ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ರಿಯಲ್‌ಮಿ 5G ಫೋನ್ ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು, ಹೈ ರೆಸ್ ಆಡಿಯೋ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP66 + IP68 + IP69 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ P3 ಅಲ್ಟ್ರಾ ಬೆಲೆ ಮತ್ತು ರಿಯಾಯಿತಿ
ರಿಯಲ್‌ಮಿ P3 ಅಲ್ಟ್ರಾ 5G ಫೋನಿನ 8GB RAM + 128GB ಸ್ಟೋರೇಜ್ 26,999 ರೂ.ಗೆ ಮಾರಾಟವಾಗಲಿದೆ. 8GB RAM + 256GB ಸ್ಟೋರೇಜ್ ಬೆಲೆ 27,999 ರೂ. ಮತ್ತು 12GB RAM + 256GB ಸ್ಟೋರೇಜ್ ವೇರಿಯಂಟ್ 29,999 ರೂ.ಗೆ ಲಭ್ಯವಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ಎಲ್ಲಾ ಮೂರು ರೂಪಾಂತರಗಳ ಮೇಲೆ 4,000 ರೂ. ವರೆಗೆ ರಿಯಾಯಿತಿ ಘೋಷಿಸಿದೆ. ಇದನ್ನು ಸೀಮಿತ ಅವಧಿಗೆ ಮಾತ್ರ ಇರುತ್ತದೆ.
ನೀವು ರಿಯಾಯಿತಿಯೊಂದಿಗೆ ಮೂಲ ರೂಪಾಂತರವನ್ನು 22,999 ರೂ.ಗೆ ಕೊಳ್ಳಬಹುದು. 8GB RAM + 256GB ಸ್ಟೋರೇಜ್ ಬೆಲೆ 23,999 ರೂ. ಮತ್ತು 12GB RAM ಬೆಲೆ 25,999 ರೂ.ಗೆ ಮಾರಾಟವಾಗಲಿದೆ. ಈ ಫೋನ್ ನಾಳೆಯಿಂದ (ಮಾರ್ಚ್ 25 ರಂದು ಮಧ್ಯಾಹ್ನ 12 ಗಂಟೆಯಿಂದ) ಕಂಪನಿಯ ಅಧಿಕೃತ ವೆಬ್‌ಸೈಟ್, ರಿಯಲ್‌ಮಿ ಸ್ಟೋರ್ ಆಪ್, ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.
ರಿಯಲ್‌ಮಿ P3 5G ಬೆಲೆ ಮತ್ತು ರಿಯಾಯಿತಿ
6GB RAM + 128GB ಸ್ಟೋರೇಜ್ ಬೆಲೆ = 16,999 ರೂ.
8GB RAM + 128GB ಸ್ಟೋರೇಜ್ ಬೆಲೆ = 17,999 ರೂ.
8GB RAM + 256GB ಸ್ಟೋರೇಜ್ ಬೆಲೆ = 19,999 ರೂ.
ರಿಯಲ್‌ಮಿ P3 5G ಮೊಬೈಲ್ 16,999 ರೂ.ಗಳ ಆರಂಭಿಕ ಬೆಲೆ ಹೊಂದಿದೆ. ಮಾರ್ಚ್ 26 ರಂದು ಮಧ್ಯಾಹ್ನ 12 ಗಂಟೆಯಿಂದ ಕಂಪನಿಯ ಅಧಿಕೃತ ವೆಬ್‌ಸೈಟ್ (realme.com), ರಿಯಲ್‌ಮಿ ಸ್ಟೋರ್ ಆಪ್, ಫ್ಲಿಪ್‌ಕಾರ್ಟ್ (Flipkart) ಮೂಲಕ ಈ ಫೋನ್ ತನ್ನ ಮಾರಾಟ ಪ್ರಾರಂಭಿಸಲಿದೆ. ಮಾರ್ಚ್ 19 ರಂದು ಸಂಜೆ 6 ರಿಂದ ರಾತ್ರಿ 10 ರವರೆಗೆ ಮೊದಲ ಮಾರಾಟ ನಡೆಯಲಿದೆ. ನೀವು 2,000 ರೂ. ಬ್ಯಾಂಕ್ ಆಫರ್ ಪಡೆಯಬಹುದು. ಹಾಗೆಯೇ ರಿಯಲ್‌ಮಿ ಹಳೆಯ ಗ್ರಾಹಕರಿಗೆ ಹೆಚ್ಚುವರಿ 500 ರೂ. ರಿಯಾಯಿತಿ ಸಿಗುತ್ತದೆ. ಈ ಮೊಬೈಲ್ ಸ್ಪೇಸ್ ಸಿಲ್ವರ್, ಕಾಮೆಟ್ ಗ್ರೇ ಮತ್ತು ನೆಬ್ಯುಲಾ ಪಿಂಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ರಿಯಲ್‌ಮಿ P3 5G ವೈಶಿಷ್ಟ್ಯಗಳು
ರಿಯಲ್‌ಮಿ P3 5G ಮೊಬೈಲ್ 6.67 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 1500Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 2000 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 4 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ ಯುಐ 6.0 ಜೊತೆಗೆ ಕೆಲಸ ಮಾಡುತ್ತದೆ.ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 810 ಜಿಪಿಯು ಒಳಗೊಂಡಿದೆ. ಈ ಫೋನ್ 6GB RAM + 8GB RAM ಹೊಂದಿದೆ. ಇದರಲ್ಲಿ 128GB ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ರಿಯಲ್‌ಮಿ P3 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅಳವಡಿಸಲಾಗಿದೆ. ಈ ರಿಯಲ್‌ಮಿ 5G ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನಿನಲ್ಲಿ 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.


Click it and Unblock the Notifications








