ಭಾರತದಲ್ಲಿ ಇಂದು 'ರಿಯಲ್‌ಮಿ ಪ್ಯಾಡ್‌' ಡಿವೈಸ್‌ನ ಫಸ್ಟ್‌ ಸೇಲ್‌: ಆಕರ್ಷಕ ಬೆಲೆ!

|

ರಿಯಲ್‌ಮಿ ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಹೊಸ 'ರಿಯಲ್‌ಮಿ ಪ್ಯಾಡ್‌' ಡಿವೈಸ್‌ ಈಗಾಗಲೇ ಬಳಕೆದಾರರ ಗಮನ ಸೆಳೆದಿದೆ. ರಿಯಲ್‌ಮಿ ಪ್ಯಾಡ್‌ ಟ್ಯಾಬ್ಲೆಟ್ ಇಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಮೊದಲ ಬಾರಿಗೆ ಮಾರಾಟ ಕಾಣಲಿದೆ. ಇನ್ನು ಈ ಡಿವೈಸ್‌ ಜನಪ್ರಿಯ ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಹಾಗೂ ರಿಯಲ್‌ಮಿ ಅಧಿಕೃತ ಸೈಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ರಿಯಲ್‌ಮಿ ಪ್ಯಾಡ್‌ ಟ್ಯಾಬ್ಲೆಟ್ 10.4-ಇಂಚಿನ ಡಿಸ್‌ಪ್ಲೇ ಅನ್ನು ಒಳಗೊಂಡಿದೆ.

ಭಾರತದಲ್ಲಿ ಇಂದು 'ರಿಯಲ್‌ಮಿ ಪ್ಯಾಡ್‌' ಡಿವೈಸ್‌ನ ಫಸ್ಟ್‌ ಸೇಲ್‌: ಆಕರ್ಷಕ ಬೆಲೆ!

ರಿಯಲ್‌ಮಿ ಕಂಪನಿಯ ಮೊದಲ ಟ್ಯಾಬ್ಲೆಟ್ ಡಿವೈಸ್‌ ಆಗಿರುವ ರಿಯಲ್‌ಮಿ ಪ್ಯಾಡ್‌ ಇಂದು ಆನ್‌ಲೈನ್ ಮತ್ತು ಪ್ರಮುಖ ರೀಟೇಲ್ ಸ್ಟೋರ್‌ಗಳ ಮೂಲಕ ಫಸ್ಟ್‌ ಸೇಲ್ ಕಾಣಲಿದೆ. ಇನ್ನು ಈ ಡಿವೈಸ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G80 SoC ಸೇರಿದಂತೆ ಹಲವು ಆಕರ್ಷಕ ಫೀಚರ್ಸ್‌ ಪಡೆದಿದೆ. ಹಾಗೆಯೇ ರಿಯಲ್‌ಮಿ ಪ್ಯಾಡ್‌ನಲ್ಲಿ ಡಾಲ್ಬಿ ಅಟ್ಮಾಸ್ ಸೌಂಡ್ ಮತ್ತು 64GB ವರೆಗಿನ ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆ ಕೂಡ ಇದೆ. ಇನ್ನು ಈ ಡಿವೈಸ್‌ 3GB + 32GB ಮತ್ತು 4GB + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೇ ಈ ಡಿವೈಸ್‌ನ ಇತರೆ ಫೀಚರ್ಸ್‌ ಹೇಗಿವೆ ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಹೇಗಿದೆ
ರಿಯಲ್‌ಮಿ ಪ್ಯಾಡ್‌ ಡಿವೈಸ್‌ 10.4-ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು 2,000x1,200 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದು ನೈಟ್ ಮೋಡ್, ಡಾರ್ಕ್ ಮೋಡ್ ಮತ್ತು ಸನ್‌ಲೈಟ್ ಮೋಡ್ ಅನ್ನು ಬೆಂಬಲಿಸುತ್ತದೆ. ಈ ಟ್ಯಾಬ್ಲೆಟ್ 6.9 ಮಿಲಿಮೀಟರ್ ತೆಳುವಾಗಿದ್ದು ಅಲ್ಯೂಮಿನಿಯಂ ರಚನೆಯನ್ನು ಹೊಂದಿದ್ದು, 82.5 ಶೇಕಡಾ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ.

ಭಾರತದಲ್ಲಿ ಇಂದು 'ರಿಯಲ್‌ಮಿ ಪ್ಯಾಡ್‌' ಡಿವೈಸ್‌ನ ಫಸ್ಟ್‌ ಸೇಲ್‌: ಆಕರ್ಷಕ ಬೆಲೆ!

ಪ್ರೊಸೆಸರ್ ಪವರ್ ಯಾವುದು
ರಿಯಲ್‌ಮಿ ಪ್ಯಾಡ್‌ ಡಿವೈಸ್‌ ಮೀಡಿಯಾ ಟೆಕ್ ಹೆಲಿಯೊ ಜಿ 80 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಇದು 3GB + 32GB ಮತ್ತು 4GB + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.

ಕ್ಯಾಮೆರಾ ಸೆನ್ಸಾರ್ ಹೇಗೆ
ರಿಯಲ್‌ಮಿ ಪ್ಯಾಡ್‌ ಡಿವೈಸ್‌ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಇದು ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಹಾಗೆಯೇ ಹಿಂಬದಿಯಲ್ಲಿ 8 ಮೆಗಾ ಪಿಕ್ಸಲ್ ಸೆನ್ಸಾರ್‌ನ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ.

ಭಾರತದಲ್ಲಿ ಇಂದು 'ರಿಯಲ್‌ಮಿ ಪ್ಯಾಡ್‌' ಡಿವೈಸ್‌ನ ಫಸ್ಟ್‌ ಸೇಲ್‌: ಆಕರ್ಷಕ ಬೆಲೆ!

ಬ್ಯಾಟರಿ ಬಲ ಹಾಗೂ ಇತರೆ ಸೌಲಭ್ಯಗಳು
ರಿಯಲ್‌ಮಿ ಪ್ಯಾಡ್‌ ಡಿವೈಸ್‌ 7,100mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಒಂದೇ ಚಾರ್ಜ್‌ನಲ್ಲಿ 12 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅಥವಾ 65 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ತಲುಪಿಸಲು ರೇಟ್ ಮಾಡಲಾಗಿದೆ. ಟ್ಯಾಬ್ಲೆಟ್ 18W ವೇಗದ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G (ಐಚ್ಛಿಕ), Wi-Fi 802.11ac, ಬ್ಲೂಟೂತ್ v5.0, GPS/ A-GPS, ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಮಂಡಳಿಯಲ್ಲಿರುವ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಸುತ್ತುವರಿದ ಬೆಳಕು ಮತ್ತು ಗೈರೊಸ್ಕೋಪ್ ಸೇರಿವೆ. ಟ್ಯಾಬ್ಲೆಟ್ ಡ್ಯುಯಲ್ ಮೈಕ್ರೊಫೋನ್ ಜೊತೆಗೆ ಶಬ್ದ ರದ್ದತಿ ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ ಡಾಲ್ಬಿ ಅಟ್ಮೋಸ್ ಮತ್ತು ಹೈ-ರೆಸ್ ಆಡಿಯೋ ಬೆಂಬಲಿತ ಕ್ವಾಡ್ ಸ್ಟೀರಿಯೋ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ?
ಭಾರತದಲ್ಲಿ ರಿಯಲ್‌ಮಿ ಪ್ಯಾಡ್ ಎರಡು ವೇರಿಯಂಟ್‌ಗಳಲ್ಲಿ ಲಭ್ಯ ಇದೆ. ಅವು ಕ್ರಮವಾಗಿ 3GB + 32GB ಮತ್ತು 4GB + 64GB ಆಗಿವೆ. 3GB + 32GB ವೇರಿಯಂಟ್‌ ಬೆಲೆಯು 15,999ರೂ. ಆಗಿದೆ. ಹಾಗೆಯೇ 4GB + 64GB ವೇರಿಯಂಟ್‌ ಬೆಲೆಯು 17,999ರೂ. ಆಗಿದೆ. ಇನ್ನು ರಿಯಲ್ ಪ್ಯಾಡ್‌ ಡಿವೈಸ್ ರಿಯಲ್ ಗ್ರೇ ಮತ್ತು ರಿಯಲ್ ಗೋಲ್ಡ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಇಂದು (ಸೆ.16) ಫ್ಲಿಪ್‌ಕಾರ್ಟ್, ರಿಯಲ್‌ಮಿ.ಕಾಮ್ ಮತ್ತು ಪ್ರಮುಖ ರೀಟೇಲ್ ಮಾರಾಟ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಿರುತ್ತವೆ.

Best Mobiles in India

English summary
Realme Pad To Go On Sale in India Today: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X