ಭಾರತದಲ್ಲಿ ಅಗ್ಗದ ಬೆಲೆಯ 5G ಸ್ಮಾರ್ಟ್‌ಫೋನ್‌ ಪರಿಚಯಿಸಲು ರಿಯಲ್‌ಮಿ ಪ್ಲ್ಯಾನ್‌!

|

ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ 5G ನೆಟ್‌ವರ್ಕ್‌ ಪ್ರಾರಂಭದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಇದರ ನಡುವೆ ಮೇಡ್‌ ಇನ್‌ ಇಂಡಿಯಾ 5G ನೆಟ್‌ವರ್ಕ್‌ ಪರಿಚಯಿಸುವುದಾಗಿ ಜಿಯೋ ಹೇಳಿಕೊಂಡಿದೆ. ಜೊತೆಗೆ ಜಿಯೋ 5G ಫೋನ್‌ ಪರಿಚಯಿಸುವುದಕ್ಕೆ ವೇದಿಕೆ ಕೂಡ ಸಿದ್ದ ಪಡಿಸಿಕೊಳ್ತಿದೆ. ಇದೀಗ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಸಾಧಿಸುತ್ತರುವ ರಿಯಲ್‌ಮಿ ಸಂಸ್ಥೆ ಕೂಡ ಅಗ್ಗದ ಬೆಲೆಯ 5G ಸ್ಮಾರ್ಟ್‌ಫೋನ್‌ ಪರಿಚಯಿಸುವುದಾಗಿ ಹೇಳಿಕೊಂಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ಈ ವರ್ಷಾಂತ್ಯದ ವೇಳೆಗೆ ಭಾರತದಲ್ಲಿ ಬಜೆಟ್‌ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡುವುದಾಗಿ ಹೇಳಿದೆ. ಎಂಟ್ರಿ-ಲೆವೆಲ್ 5G ಸ್ಮಾರ್ಟ್‌ಫೋನ್ ರಿಯಲ್‌ಮಿಯಿಂದ ಬರುವುದು ಪಕ್ಕಾ ಆಗಿದೆ. ಅಲ್ಲದೆ ರಿಯಲ್‌ಮಿ ಸಿಇಒ ಮಾಧವ್ ಶೆತ್ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ $100 ಕ್ಕಿಂತ ಕಡಿಮೆ (ಅಂದಾಜು 7,000 ರೂ) 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಯೋಜನೆಯನ್ನು ಖಚಿತಪಡಿಸಿದ್ದಾರೆ. ಹಾಗಾದ್ರೆ ರಿಯಲ್‌ಮಿ ಸಂಸ್ಥೆಯ 5G ಫೋನ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ

ರಿಯಲ್‌ಮಿ ಕಂಪೆನಿ ಬಿಡುಗಡೆ ಮಾಡಿರುವುದಾಗಿ ಹೇಳಿರುವ ಅಲ್ಟ್ರಾ-ಅಗ್ಗದ 5G ಸ್ಮಾರ್ಟ್‌ಫೋನ್ ಇನ್ನೂ ಯೋಜನಾ ಹಂತದಲ್ಲಿದೆ. ಆದಾಗ್ಯೂ, ಭಾರತೀಯ ಮಾರುಕಟ್ಟೆಗೆ ಹೆಚ್ಚು ಕೈಗೆಟುಕುವ 5G ಸ್ಮಾರ್ಟ್‌ಫೋನ್‌ನಲ್ಲಿ ಕೆಲಸ ಮಾಡಲು ರಿಯಲ್‌ಮಿ ಕಂಪನಿಯು ನಿರ್ಧರಿಸಿದೆ. ಈ ಸ್ಮಾರ್ಟ್‌ಫೋನ್ ಕುರಿತು ಇನ್ನೂ ಯಾವುದೇ ಹೆಸರುಗಳು, ಫೀಚರ್ಸ್‌ ವಿಶೇಷತೆ ವರದಿಯಾಗಿಲ್ಲ. ಆದರೆ ಭಾರತದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ 5G ಸ್ಮಾರ್ಟ್‌ಫೋನ್‌ ಇದಾಗಿರಲಿದೆ ಅನ್ನೊದು ರಿಯಲ್‌ಮಿ ಸಂಸ್ಥೆಯ ಭರವಸೆಯಾಗಿದೆ.

ರಿಯಲ್‌ಮಿ

ಇನ್ನು ರಿಯಲ್‌ಮಿ ಕಂಪೆನಿಯ 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಚಿಪ್‌ಸೆಟ್ ಅನ್ನು ಅವಲಂಬಿಸಿವೆ ಎನ್ನಲಾಗಿದೆ. ಇದು ಎಂಟ್ರಿ ಲೆವೆಲ್ 5G ಚಿಪ್ ಮೀಡಿಯಾ ಟೆಕ್ ಮಾಡುತ್ತದೆ. ಆದ್ದರಿಂದ, ಮೀಡಿಯಾ ಟೆಕ್ ಇನ್ನೂ ಹೆಚ್ಚು ವೆಚ್ಚದಾಯಕ 5G ಚಿಪ್‌ಸೆಟ್‌ನೊಂದಿಗೆ ಬರಲು ರಿಯಲ್‌ಮಿ ಕಾಯುತ್ತಿರಬಹುದು ಅಥವಾ ಕ್ವಾಲ್ಕಾಮ್‌ನಿಂದ ಒಂದನ್ನು ಕಾಯುತ್ತಿರಬಹುದು. ಕ್ವಾಲ್ಕಾಮ್ 5G ನೆಟ್‌ವರ್ಕ್‌ಗಳನ್ನು ಬೆಂಬಲಿಸುವ ಅಗ್ಗದ ಚಿಪ್‌ನಂತೆ ಸ್ನಾಪ್‌ಡ್ರಾಗನ್ 480G ಹೊಂದಿದೆ.

ರಿಯಲ್‌ಮಿ

ಸದ್ಯ ರಿಯಲ್‌ಮಿ ಭಾರತದಲ್ಲಿ ಮತ್ತು ಜಾಗತಿಕವಾಗಿ 5G ನಾಯಕನಾಗಲು ಹೊರಟಿದೆ. ಪ್ರತಿಯೊಬ್ಬರೂ 5G ಡಿವೈಸ್‌ ಹೊಂದಿರಬೇಕು ಎನ್ನುವ ಕಲ್ಪನೆಯೊಂದಿಗೆ ಅಗ್ಗದ 5G ಸ್ಮಾರ್ಟ್‌ಫೋನ್‌ಗಳ ಕಡೆಗೆ ಹೆಚ್ಚಿನ ಗಮನವಹಿಸಿದೆ. ಇದಕ್ಕಾಗಿ 5G ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ನಮ್ಮ ಆರ್ & ಡಿ ಸಂಪನ್ಮೂಲಗಳಲ್ಲಿ ಸುಮಾರು 90% 5G ಗೆ ವರ್ಗಾಯಿಸಲಾಗಿದೆ, ಇದರೊಂದಿಗೆ ನಾವು 5G ಯ ಆರ್ & ಡಿ ಮೇಲಿನ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಮಾದವ್‌ ಶೆತ್ ಹೇಳಿಕೊಂಡಿದ್ದಾರೆ.

Best Mobiles in India

Read more about:
English summary
Realme has confirmed plans to launch a 5G smartphone for less than Rs 7,000 in India. The company will use the latest 5G chipset.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X