43 ಇಂಚಿನ ಈ ಸ್ಮಾರ್ಟ್‌ಟಿವಿಗೆ 36% ಡಿಸ್ಕೌಂಟ್: ಫ್ಲಿಪ್‌ಕಾರ್ಟ್‌ನಲ್ಲಿ ಬೊಂಬಾಟ್ ಆಫರ್!
ಸ್ಮಾರ್ಟ್‌ಟಿವಿಗಳಿಗೆ ಬೇಡಿಕೆ ಹೆಚ್ಚಾದಂತೆ ಸ್ಮಾರ್ಟ್‌ಟಿವಿಗಳ ಬೆಲೆಯೂ ಸಹ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಬಹುಪಾಲು ಮಂದಿ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಇ-ಕಾಮರ್ಸ್ ಸೈಟ್‌ನಲ್ಲಿ ಈ ಅತ್ಯುತ್ತಮವಾದ ಸ್ಮಾರ್ಟ್‌ಟಿವಿ 36% ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೂಲಕ ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ.
ಹೌದು, ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಅತ್ಯುತ್ತಮ ಸಮಯ ಯಾಕೆಂದರೆ ಒಂದೆಡೆ ಐಪಿಎಲ್ ಹಾಗೂ ಮತ್ತೊಂದೆಡೆ ಈ ರಿಯಲ್‌ಮಿ ಸ್ಮಾರ್ಟ್‌ಟಿವಿ ಮೇಲೆ 36% ಡಿಸ್ಕೌಂಟ್ ಘೋಷಣೆ ಮಾಡಿರುವುದು. ಈ ಟಿವಿಯಲ್ಲಿ ತೆಳುವಾದ ಬಿಜೆಲ್ ವಿನ್ಯಾಸ ಇದ್ದು, ಎಡ್ಜ್-ಟು-ಎಡ್ಜ್ ಚಿತ್ರಗಳನ್ನು ನೀಡುತ್ತದೆ. ಹಾಗಿದ್ರೆ, ಮತ್ಯಾಕೆ ತಡ ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ರಿಯಲ್‌ಮಿಯ 43 ಇಂಚಿನ ಈ ಟಿವಿಯ ಪ್ರಮುಖ ಫಿಚರ್ಸ್: ಇದು 43 ಇಂಚಿನ ಫುಲ್ ಹೆಚ್‌ಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೆಯೇ 60 Hz ರಿಫ್ರೆಶ್ ರೇಟ್ ಆಯ್ಕೆ ಹೊಂದಿದ್ದು, ಟಿವಿ ವೀಕ್ಷಣೆಯು ತುಂಬಾ ಆಕರ್ಷಣೀಯವಾಗಿರಲಿದೆ. ಇದರೊಂದಿಗೆ 400 nits ಬ್ರೈಟ್‌ನೆಸ್ ಆಯ್ಕೆ ಸಹ ಇದೆ. ಇಷ್ಟೆಲ್ಲಾ ಸೌಲಭ್ಯದೊಂದಿಗೆ ಈ ಟಿವಿಯನ್ನು 178 ಡಿಗ್ರಿಯಲ್ಲಿಯೂ ಸಹ ಸ್ಪಷ್ಟವಾಗಿ ವೀಕ್ಷಣೆ ಮಾಡಬಹುದು.
ಇನ್ನುಳಿದಂತೆ ಇದು ತೆಳುವಾದ ಬಿಜೆಲ್ ವಿನ್ಯಾಸವನ್ನು ಹೊಂದಿದ್ದು, ಈ ಮೂಲಕ ಎಡ್ಜ್-ಟು-ಎಡ್ಜ್ ಚಿತ್ರಗಳನ್ನು ನೀಡುತ್ತದೆ. ಜೊತೆಗೆ ಈ ಡಾಲ್ಬಿ ಆಡಿಯೊ ಅಡಾಪ್ಟರ್ ನಿಮ್ಮ ಅಕೌಸ್ಟಿಕ್ ಅನುಭವವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ನೀಡಲಿದೆ. ಇದರಿಂದ ಸಿನಿಮಾ ಹಾಗೂ ಸ್ಪೋರ್ಟ್ಸ್ ಸಂಬಂಧಿ ವಿಡಿಯೋ ನೋಡುವಾಗ ಸಿನಿಮಾ ಥಿಯೇಟರ್ ಅನುಭವ ಲಭ್ಯವಾಗಲಿದೆ.
ಈ ಸ್ಮಾರ್ಟ್‌ಟಿವಿ ಮೀಡಿಯಾ ಟೆಕ್ ಕ್ವಾಡ್-ಕೋರ್ ಪ್ರೊಸೆಸರ್ ನಲ್ಲಿ ಕಾರ್ಯಿರ್ವಹಿಸಲಿದ್ದು, ಇದರಲ್ಲಿ ARM ಕಾರ್ಟೆಕ್ಸ್ A55 CPU ಮತ್ತು ಮಾಲಿ-G31 MP2 GPU ಜೊತೆಗೆ ಪ್ಯಾಕ್ ಆಗಿದೆ. ಹಾಗೆಯೇ 1 GB RAM ಹಾಗೂ 8 GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹೀಗಾಗಿ ಸಾಕಷ್ಟು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

ಇದರೊಂದಿಗೆ ಕ್ರೋಮಾಕಾಸ್ಟ್‌ಫೀಚರ್ಸ್ ಸಹ ಇದ್ದು, ಈ ಮೂಲಕ ಅತ್ಯಂತ ಸರಳವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಮಲ್ಟಿಮೀಡಿಯಾ ಪ್ರೊಜೆಕ್ಷನ್‌ಗಾಗಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಆಡಿಯೋ ಫೀಚರ್ಸ್‌ನಲ್ಲಿ 4 ಸ್ಪೀಕರ್‌ಗಳನ್ನು ಹೊಂದಿದ್ದು, ಪ್ರತಿ ಸ್ಪೀಕರ್ ಟ್ವೀಟರ್ ಮತ್ತು ಪೂರ್ಣ ಆವರ್ತನ ಸ್ಪೀಕರ್ ಅನ್ನು ಒಳಗೊಂಡಿರುತ್ತದೆ ಹಾಗೆಯೇ ಇದು 24 W ಸ್ಪೀಕರ್ ಔಟ್‌ಪುಟ್ ಹೊಂದಿದೆ.
ಇದರೊಂದಿಗೆ MPEG1/2 ಲೇಯರ್1, MPEG1/2 ಲೇಯರ್2, MPEG1/2/2.5 ಲೇಯರ್3, AAC, HEAAC, WMA ,WMA Pro, LPCM, IMA-ADPCM/MS-ADPCM, AC3, EAC3 ಸೇರಿದಂತೆ ಇನ್ನಿತರೆ ಆಡಿಯೋಗಳಿಗೆ ಬೆಂಬಲ ನೀಡುತ್ತದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಯಲ್ಲಿ ಮೂರು ಹೆಚ್‌ಡಿಎಮ್‌ಐ, ಎರಡು ಯುಎಸ್‌ಬಿ ಸೇರಿದಂತೆ ಹೆಡ್‌ಫೋನ್ ಜಾಕ್ ಅನ್ನು ಪಡೆದುಕೊಂಡಿದೆ.

ರಿಯಲ್‌ಮಿ ಸ್ಮಾರ್ಟ್‌ಟಿವಿ ಆಫರ್ ವಿವರ: 43 ಇಂಚಿನ ಈ ಸ್ಮಾರ್ಟ್‌ಟಿವಿ 35,999 ರೂ. ಗಳ ಆಫರ್ ಬೆಲೆ ಹೊಂದಿದ್ದು, 36% ರಿಯಾಯಿತಿ ಪಡೆಯುವ ಮೂಲಕ ನಿಮಗೆ 22,999 ರೂ. ಗಳಿಗೆ ಲಭ್ಯವಾಗಲಿದೆ. ಅದಾಗ್ಯೂ ಇನ್ನೂ ಹೆಚ್ಚಿನ ಆಫರ್ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದರೆ ಅದಕ್ಕೂ ಅವಕಾಶ ಕಲ್ಪಿಸಲಾಗಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಲಭ್ಯವಿದ್ದು, ಈ ಟಿವಿ ಖರೀದಿಯ ಮೇಲೆ ವಿನಿಮಯ ಆಫರ್ ಸಹ ಇದೆ. ಹೀಗಾಗಿ ನೀವು 16,900 ರೂ. ಗಳ ವರೆಗೂ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಇದರೊಂದಿಗೆ ಡಿಬಿಎಸ್, ಆಕ್ಸಿಸ್ ಬ್ಯಾಂಕ್ ಕಾರ್ಡ್‌ದಾರರಿಗೆ ಇನ್ನೂ ಹೆಚ್ಚಿನ ಆಫರ್ ಲಭ್ಯವಾಗಲಿದೆ. ಇದರೊಂದಿಗೆ ಗಿಫ್ಟ್ ಕಾರ್ಡ್ ಸಹ ಲಭ್ಯ.


Click it and Unblock the Notifications








