ರಿಯಲ್‌ಮಿ ಫೋನ್‌ಗಳು ! 108MPಕ್ಯಾಮೆರಾ.. 8GB RAM.. 1TB ವರೆಗೂ ಸ್ಟೋರೇಜ್; ಬೆಲೆ ಮಾತ್ರ ಇಷ್ಟೇ
ರಿಯಲ್‌ಮಿ ಫೋನ್‌ಗಳು ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ವಿಶೇಷವಾದ ಬೇಡಿಕೆ ಪಡೆದುಕೊಂಡಿವೆ. ಈ ಫೋನ್‌ಗಳು ಉತ್ತಮ ಬೆಲೆಗೆ ಅತ್ಯುತ್ತಮ ಫೀಚರ್ಸ್ ಅನ್ನು ಹೊಂದಿರಲಿದ್ದು, ಈ ಮೂಲಕ ಬಳಕೆದಾರರಿಗೆ ಅವರಿಗೆ ತಕ್ಕ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತವೆ. ಈ ನಡುವೆ ವಿಶೇಷ ಎನಿಸಿಕೊಂಡ ಎಲ್ಲಾ ರಿಯಲ್‌ಮಿ ಫೋನ್‌ಗಳು ಸಹ ಈ ಸೇಲ್‌ನಲ್ಲಿ ಭಾರೀ ಆಫರ್ ಪಡೆಯಲಿವೆ.
ಹೌದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023 ಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈ ನಡುವೆ ರಿಯಲ್‌ಮಿಯ ಹಲವಾರು ಫೋನ್‌ಗಳಿಗೆ ಬೊಂಬಾಟ್ ಡಿಸ್ಕೌಂಟ್ ಘೋಷಣೆ ಮಾಡಿರುವುದು ವಿಶೇಷ. ಅಂದರೆ ರಿಯಲ್‌ಮಿ C53, 11 ಪ್ರೊ ಪ್ಲಸ್, GT ನಿಯೋ 3 ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗಿದೆ. ಇದರಿಂದಾಗಿ ಹೊಸ ಫೋನ್ ಖರೀದಿ ಮಾಡುವವರು ಸಾಕಷ್ಟು ಹಣ ಉಳಿತಾಯ ಮಾಡುವ ಮೂಲಕ ಉತ್ತಮ ಫೋನ್‌ಅನ್ನು ಜೇಬಿಗೆ ಇರಿಸಿಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಆಫರ್ 2023 ನಲ್ಲಿ ನಥಿಂಗ್, ಇನ್ಫಿನಿಕ್ಸ್, ಆಪಲ್ ಮತ್ತು ಇತರ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಿಗೂ ಸಹ ನಿರೀಕ್ಷೆ ಮಾಡಿರದ ಆಫರ್ ಘೋಷಣೆ ಮಾಡಲಾಗಿದೆ. ಇದರ ಭಾಗವಾಗಿಯೇ ಈಗ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಲೈವ್ ಆಗುವ ಡೀಲ್‌ಗಳನ್ನು ಬಹಿರಂಗಪಡಿಸಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ರಿಯಲ್‌ಮಿ ಫೋನ್‌ಗಳಿಗೆ ಏನೆಲ್ಲಾ ಬೆಲೆ ಇದೆ ನೋಡೋಣ.
ರಿಯಲ್‌ಮಿ C51: ರಿಯಲ್‌ಮಿ C51 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ನೀವು ಕೇವಲ 7,999 ಗೆ ಖರೀದಿ ಮಾಡಬಹುದು. ಈ ಫೋನ್ T612 ಪ್ರೊಸೆಸರ್, 5,000mAh ಬ್ಯಾಟರಿ ಸಾಮರ್ಥ್ಯದ ಹಾಗೂ 50MP ಪ್ರೈಮರಿ ಲೆನ್ಸ್‌ನೊಂದಿಗೆ ಕಾಣಿಸಿಕೊಂಡಿದೆ.
ರಿಯಲ್‌ಮಿ C53 : ಸಿ ಸರಣಿಯ ಮತ್ತೊಂದು ಬಜೆಟ್ ಫೋನ್ C53 ಸ್ಮಾರ್ಟ್‌ಫೋನ್ ಅನ್ನು ಈ ವಿಶೇಷ ಸೇಲ್‌ನಲ್ಲಿ 9,499ರೂಗಳ ರಿಯಾಯಿತಿ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. T612 ಚಿಪ್‌ಸೆಟ್, 5,000mAh ಬ್ಯಾಟರಿ ಸಾಮರ್ಥ್ಯ ಮತ್ತು 108MP ಪ್ರಾಥಮಿಕ ಲೆನ್ಸ್ ಹೊಂದಿದೆ.
ರಿಯಲ್‌ಮಿ C5: ಈ C55 ಬಜೆಟ್ ಸ್ಮಾರ್ಟ್‌ಫೋನ್ ಬ್ಯಾಂಕ್ ರಿಯಾಯಿತಿಯ ನಂತರ ನಿಮಗೆ ಕೇವಲ 8,999ರೂ.ಗಳಿಗೆ ಲಭ್ಯ ಇರಲಿದೆ. ಇದು ಮಿನಿ ಕ್ಯಾಪ್ಸುಲ್ ನಾಚ್, ಹಿಲಿಯೊ G88 ಸಿಪಿಯು, 5,000mAh ಬ್ಯಾಟರಿ ಸಾಮರ್ಥ್ಯ ಮತ್ತು 64MP ಪ್ರಾಥಮಿಕ ಲೆನ್ಸ್ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ 10 ಪ್ರೊ 5G: ಲಭ್ಯವಿರುವ ಎಲ್ಲಾ ರಿಯಾಯಿತಿಗಳನ್ನು ಪಡೆದ ಬಳಿಕ ಈ ಫೋನ್ ಅನ್ನು ನೀವು 15,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 695 ಚಿಪ್, 5,000mAh ಸಾಮರ್ಥ್ಯದ ಬ್ಯಾಟರಿ ಹಾಗೂ 108MP ಪ್ರಾಥಮಿಕ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ.
ರಿಯಲ್‌ಮಿ 10 ಪ್ರೊ+ 5G: ಈ ಫೋನ್ ನಿಮಗೆ ಈ ವಿಶೇಷ ಸೇಲ್‌ನಲ್ಲಿ 20,999 ರೂ.ಗೆ ಲಭ್ಯ ಇರಲಿದೆ. ಇದು ಕರ್ವ್ಡ್ OLED ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಡೈಮೆನ್ಸಿಟಿ 1080, 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 108MP ಪ್ರಾಥಮಿಕ ಲೆನ್ಸ್ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ 11 5G : ಈ ಫೋನ್ ಅನ್ನು ಸಹ 15,999 ರೂ.ಗೆ ಖರೀದಿ ಮಾಡಬಹುದು. ಎಲ್ಲಾ ಆಫರ್ ಬಳಕೆ ಮಾಡುವ ಮೂಲಕ. ಈ ಡಿವೈಸ್ ಡೈಮೆನ್ಸಿಟಿ 6100+ CPU ಪ್ರೊಸೆಸರ್ ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 108MP ಪ್ರಾಥಮಿಕ ಲೆನ್ಸ್ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ 11x 5G : ಈ ಫೋನ್ ಅನ್ನು ನೀವು 11,999 ರೂ.ಗಳಗೆ ಖರೀದಿ ಮಾಡಬಹುದು. ಇದು ಡೈಮೆನ್ಸಿಟಿ 6100+ ಪ್ರಸೆಸರ್ ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 64MP ರಿಯರ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ.
ರಿಯಲ್‌ಮಿ 9i 5G : ಫ್ಲಿಪ್‌ಕಾರ್ಟ್‌ನ ಈ ವಿಶೇಷ ಸೇಲ್‌ನಲ್ಲಿ 12,499ರೂ.ಗಳಿಗೆ ಈ ಫೋನ್ ಖರೀದಿ ಮಾಡಬಹುದಾಗಿದೆ. ಇದು ಡೈಮೆನ್ಸಿಟಿ 810, 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ.
ರಿಯಲ್‌ಮಿ 11 ಪ್ರೊ 5G: ಇತ್ತೀಚಿನ ಸಂಖ್ಯೆಯ ಸರಣಿಯ ಹ್ಯಾಂಡ್‌ಸೆಟ್ಗೆ ಆಫರ್‌ಗಳು ಮತ್ತು ಕ್ಯಾಶ್‌ಬ್ಯಾಕ್ ನಂತರ 19,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದು ಡೈಮೆನ್ಸಿಟಿ 7050 CPU, 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 100MP OIS ಲೆನ್ಸ್ ಅನ್ನು ಹೊಂದಿದೆ.
ರಿಯಲ್‌ಮಿ 11 ಪ್ರೊ+ 5G : ಈ ಫೋನ್ ಸಹ ಎಲ್ಲಾ ಆಫರ್‌ಗಳ ನಂತರ ನಿಮಗೆ 24,999ರೂ.ಗಳಿಗೆ ಲಭ್ಯ ಇದೆ. ಈ ಫೋನ್ ಡೈಮೆನ್ಸಿಟಿ 7050 CPU, 5,000mAh ಸಾಮರ್ಥ್ಯದ ಬ್ಯಾಟರಿ ಮತ್ತು 200MP ಪ್ರಾಥಮಿಕ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಇನ್ನು ಈ ರಿಯಲ್‌ಮಿ ಫೋನ್‌ಗಳಲ್ಲಿ 108MP ಕ್ಯಾಮೆರಾ ಆಯ್ಕೆ ಇರುವ ಫೋನ್‌ಗಳು ಹಾಗೂ 8GB RAM ಸೇರಿದಂತೆ 1TB ವರೆಗೂ ಸ್ಟೋರೇಜ್ ಆಯ್ಕೆ ಇರುವ ಫೋನ್‌ಗಳು ನಿಮಗೆ ಲಭ್ಯ ಇದ್ದು, ಇವುಗಳಿಗೆ ಸದಾ ಬೇಡಿಕೆ ಇದೆ. ಅದರಂತೆ ಈ ಸೇಲ್‌ನಲ್ಲಿ ನೀವು ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಒಳಗೊಂಡಂತೆ ಈ ವಿಶೇಷ ಆಯ್ಕೆ ಇರುವ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.


Click it and Unblock the Notifications








