ಜನರ ಖಾಸಗಿ ಡೇಟಾ ಸಂಗ್ರಹಿಸುತ್ತಿದೆಯಾ ರಿಯಲ್‌ಮಿ? ಬಳಕೆದಾರರ ಕಥೆ ಏನು!?
ಸಾಮಾನ್ಯವಾಗಿ ಭಾರತದಲ್ಲಿ ರಿಯಲ್, ರೆಡ್ಮಿ, ಒಪ್ಪೋ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಯಾಕೆಂದರೆ ಈ ಫೋನ್‌ಗಳು ಕೈಗೆಟಕುವ ದರದೊಂದಿಗೆ ಉತ್ತಮ ಫೀಚರ್ಸ್ ಆಯ್ಕೆ ಹಾಗೂ ದೀರ್ಘ ಬ್ಯಾಟರಿ ಬ್ಯಾಕಪ್ ನೀಡುತ್ತವೆ. ಈ ನಡುವೆ ರಿಯಲ್‌ಮಿ ಬಳಕೆದಾರರು ಶಾಕ್ ಆಗುವ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಟ್ವಿಟರ್ ಬಳಕೆದಾರರೊಬ್ಬರು ರಿಯಲ್‌ಮಿ ಬಗ್ಗೆ ಆರೋಪವೊಂದನ್ನ ಮಾಡಿದ್ದು, ಈ ರಿಯಲ್‌ಮಿ ಫೋನ್ ಬಳಸುವ ಬಳಕೆದಾರರ ಕರೆ ಲಾಗ್‌ಗಳು, ಎಸ್‌ಎಂಎಸ್ ಮತ್ತು ಸ್ಥಳ ಮಾಹಿತಿಯಂತಹ ಸೂಕ್ಷ್ಮ ಮಾಹಿತಿಯನ್ನು 'ಎನ್‌ಹಾನ್ಸ್‌ಡ್ ಇಂಟೆಲಿಜೆಂಟ್ ಸರ್ವಿಸಸ್' ಎಂಬ ಫೀಚರ್ಸ್ ಮೂಲಕ ಮೂಲಕ ಸಂಗ್ರಹಿಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಹಾಗಿದ್ರೆ, ರಿಯಲ್‌ಮಿ ಯಾಕೆ ಈ ರೀತಿ ಮಾಡುತ್ತಿದೆ?, ನಿಮ್ಮ ಎಲ್ಲಾ ಖಾಸಗಿ ವಿಚಾರ ರಿಯಲ್‌ಮಿ ಪಡೆದುಕೊಂಡಿದೆಯಾ ಎಂಬ ಶಾಕಿಂಗ್ ವಿವರಕ್ಕೆ ಈ ಲೇಖನ ಓದಿರಿ.

ಬಳಕೆದಾರರ ಡೇಟಾ ಸಂಗ್ರಹಣೆ ಮಾಡುವ ರಿಯಲ್‌ಮಿ: ರಿಯಲ್‌ಮಿ ಬಳಕೆದಾರರ ಖಾಸಗಿ ಡೇಟಾವನ್ನು ಸಂಗ್ರಹ ಮಾಡುತ್ತಿದೆ ಎನ್ನಲಾಗಿದ್ದು, ಆ ಫೋನ್‌ಗಳಲ್ಲಿ ನಿರ್ದಿಷ್ಟ ಫೀಚರ್ಸ್ ಅನ್ನು ಸೆಟ್ಟಿಂಗ್‌ಗಳಲ್ಲಿ ಡೀಫಾಲ್ಟ್ ಮಾಡಬಹುದು. ಅಂದರೆ ಆಟೋಮ್ಯಾಟಿಕ್ ಆಗಿ ಸಕ್ರಿಯಗೊಳಿಸಬಹುದು ಎಂದು ತಿಳಿದುಬಂದಿದ್ದು, ಪರಿಣಾಮ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ರಾಜೀವ್ ಚಂದ್ರಶೇಖರ್ ಅವರು ಸರ್ಕಾರವು ಈ ವಿಷಯವನ್ನು ಮತ್ತಷ್ಟು ತನಿಖೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಆದಾಗ್ಯೂ ಈ ರೀತಿಯ ವರ್ಧಿತ ಇಂಟೆಲಿಜೆನ್ಸ್ ಸೇವೆಗಳ ಫೀಚರ್ಸ್ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಸೀಮಿತವಾಗದೆ ಇತರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಅಂತಹುದರಲ್ಲಿ ಒನ್‌ಪ್ಲಸ್, ಒಪ್ಪೋ, ವಿವೋ ಹಾಗೂ ಐಕ್ಯೂ ಫೋನ್‌ಗಳು ಸೇರಿವೆ. ಈ ಕಂಪೆನಿಯ ಫೋನ್‌ಗಳಲ್ಲೂ ಈ ಫೀಚರ್ಸ್ ಸದ್ಯ ಚಾಲ್ತಿಯಲ್ಲಿದೆ.
ಈ ಮೇಲೆ ತಿಳಿಸಿದ ಫೋನ್‌ಗಳಲ್ಲಿ ಮಾತ್ರವಲ್ಲದೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸಹ ಇದೇ ರೀತಿಯ ಫೀಚರ್ಸ್ ಇದ್ದು, ಇದನ್ನು ಸೆಂಡ್ ಡಯಾಗ್ನೋಸ್ಟಿಕ್ಸ್ ಡೇಟಾ ಎಂಬ ಹೆಸರಿನಲ್ಲಿ ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದೆ. ಆದರೆ, ರಿಯಲ್ ಮಿ ರೀತಿಯಲ್ಲಿಯೇ ಈ ಕಂಪೆನಿಯ ಫೋನ್‌ಗಳು ಈ ರೀತಿಯ ಆರೋಪಕ್ಕೆ ಗುರಿಯಾಗುತ್ತವೆಯಾ ಎಂಬ ಪ್ರಶ್ನೆಯನ್ನು ಸಾಮಾಜಿಕ ವಲಯದಲ್ಲಿ ಹುಟ್ಟುಹಾಕಿದೆ.
ಈ ಸಂಬಂಧ ರಿಯಲ್‌ಮಿ, ವರ್ಧಿತ ಇಂಟೆಲಿಜೆಂಟ್ ಸೇವೆಗಳು ಬಳಕೆದಾರರ ಬಳಕೆಯ ಮಾದರಿಗಳಿಗೆ ಅನುಗುಣವಾಗಿ ಡಿವೈಸ್‌ನ ಕಾರ್ಯಗಳನ್ನು ಆಪ್ಟಿಮೈಸ್ ಮಾಡುತ್ತದೆ, ಇದರಿಂದಾಗಿ ಅವರ ಡಿವೈಸ್‌ನ ಅನುಭವವನ್ನು ಸುಧಾರಿಸುತ್ತದೆ ಎಂದು ಹೇಳುತ್ತದೆ. ಅದಾಗ್ಯೂ ಡಿವೈಸ್‌ನ ಮಾಹಿತಿ, ಅಪ್ಲಿಕೇಶನ್ ಬಳಕೆಯ ಅಂಕಿಅಂಶಗಳು, ಸ್ಥಳ ಮಾಹಿತಿ, ಕ್ಯಾಲೆಂಡರ್ ಈವೆಂಟ್‌ಗಳು, ಓದದ ಎಸ್‌ಎಮ್‌ಎಸ್ ಅಂಕಿಅಂಶಗಳು ಮತ್ತು ತಪ್ಪಿದ ಕರೆಗಳ ಅಂಕಿಅಂಶಗಳನ್ನು ಸಂಗ್ರಹಿಸುತ್ತದೆ ಎಂದು ಅನಿಸಿದರೆ ಈ ಫೀಚರ್ಸ್ ಅನ್ನು ನಿಷ್ಕ್ರಿಯಗೊಳಿಸಬಹುದಾದ ಆಯ್ಕೆ ಬಳಕೆದಾರರ ಬಳಿ ಇದೆ.
ನಿಷ್ಕ್ರಿಯಗೊಳಿಸುವುದೇಗೆ?: ರಿಯಲ್‌ಮಿ ಬಳಕೆದಾರರು ಭದ್ರತಾ ದೃಷ್ಟಿಯಿಂದ ತಮ್ಮ ಫೋನ್ ವಿಭಾಗಕ್ಕೆ ಹೋಗಿ ಅಲ್ಲಿನ ಸೆಟ್ಟಿಂಗ್ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಹೆಚ್ಚುವರಿ ಸೆಟ್ಟಿಂಗ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ಸಿಸ್ಟಮ್ ಸೇವೆಗಳಿಗೆ ಹೋಗಿ ವರ್ಧಿತ ಸಿಸ್ಟಮ್ ಸೇವೆಗಳ (Enhanced Intelligent Services) ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ. ಇದಾದ ನಂತರದಲ್ಲಿ ನಿಮ್ಮ ಫೋನ್ ಅನ್ನು ರೀಸ್ಟಾರ್ಟ್ ಮಾಡಿದರೆ ಸಾಕು. ಇದೇ ಮಾದರಿಯನ್ನು ಒಪ್ಪೋ ಹಾಗೂ ಒನ್‌ಪ್ಲಸ್ ಬಳಕೆದಾರರು ಸಹ ಅನುಸರಿಸಬಹುದು.

ಇನ್ನು ಇದು ಮೂಲಭೂತವಾಗಿ ಬಲವಂತದ ಒಪ್ಪಿಗೆಯಾಗಿದೆ. ಏಕೆಂದರೆ ಇದು ಪೂರ್ವನಿಯೋಜಿತವಾಗಿ ಆನ್ ಆಗಿದ್ದು, ಈ ಡೇಟಾವನ್ನು ಚೀನಾಕ್ಕೆ ಕಳುಹಿಸಲಾಗುತ್ತಿದೆಯೇ?, ಎಂದು ಟ್ವಿಟರ್‌ನಲ್ಲಿ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ನಮ್ಮೆಲ್ಲರ ಡೇಟಾವನ್ನು ಕದ್ದು ಮಾರಾಟ ಮಾಡಿ ನಮಗೆ ವಂಚಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದೇ ರೀತಿಯ ಸಾಕಷ್ಟು ಟ್ವೀಟ್‌ಗಳು ಟ್ವಿಟ್ಟರ್‌ನಲ್ಲಿ ಕಂಡುಬಂದಿವೆ.


Click it and Unblock the Notifications








