ಮಾರುಕಟ್ಟೆಯಲ್ಲಿ ಅಬ್ಬರಿಸಲು ಬರಲಿದೆ 64ಎಂಪಿ ಕ್ಯಾಮೆರಾದ 'ರಿಯಲ್ ಮಿ XT'!

|

ಹೈ ಎಂಡ್‌ ಕ್ಯಾಮೆರಾ ಮತ್ತು ಪವರ್‌ಫುಲ್ ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಕಂಪನಿಗಳು ಸಹ ಬಜೆಟ್‌ ಬೆಲೆಯಲ್ಲಿ ಹೈ ಎಂಡ್‌ ಫೀಚರ್‌ ನೀಡುತ್ತಿವೆ. ಅವುಗಳಲ್ಲಿ ಮುಖ್ಯವಾಗಿ ಚೀನಾ ಮೂಲದ ಕಂಪನಿಗಳ ನಡುವೆ ಪೈಪೋಟಿ ಜೋರಾಗಿದ್ದು, ರಿಯಲ್‌ ಮಿ ಕಂಪನಿಯು ಇದೀಗ 64ಎಂಪಿ ಸೆನ್ಸಾರ್‌ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ಮುನ್ನುಡಿ ಬರೆಯುತ್ತಿವೆ.

ಮಾರುಕಟ್ಟೆಯಲ್ಲಿ ಅಬ್ಬರಿಸಲು ಬರಲಿದೆ 64ಎಂಪಿ ಕ್ಯಾಮೆರಾದ 'ರಿಯಲ್ ಮಿ XT'!

ಹೌದು, ರಿಯಲ್‌ ಮಿ ಸಂಸ್ಥೆಯು ಇತ್ತೀಚಿಗಷ್ಟೆ ರಿಯಲ್‌ ಮಿ 5 ಮತ್ತು ರಿಯಲ್ ಮಿ 5 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಸುದ್ದಿಯಲ್ಲಿದೆ. ಅದರ ಬೆನ್ನಲೇ ಇದೀಗ ಕಂಪನಿಯು 64ಎಂಪಿ ಕ್ಯಾಮೆರಾ ಬಲದ ಹೊಸ 'ರಿಯಲ್ ಮಿ ಎಕ್ಸ್‌ಟಿ'(XT) ಸ್ಮಾರ್ಟ್‌ಫೋನ್‌ ರಿಲೀಸ್‌ ಮಾಡುವುದಾಗಿ ಟೀಸ್‌ ಮಾಡಿದೆ. ಈ ಫ್ಲ್ಯಾಗ್‌ಶಿಫ್‌ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855ಪ್ಲಸ್‌ ಪ್ರೊಸೆಸರ್‌ ಶಕ್ತಿಯಲ್ಲಿರಲಿದೆ.

ಮಾರುಕಟ್ಟೆಯಲ್ಲಿ ಅಬ್ಬರಿಸಲು ಬರಲಿದೆ 64ಎಂಪಿ ಕ್ಯಾಮೆರಾದ 'ರಿಯಲ್ ಮಿ XT'!

ಸ್ಮಾರ್ಟ್‌ಫೋನಿನ ಪ್ರಾಥಮಿಕ ಕ್ಯಾಮೆರಾವು ಸ್ಯಾಮ್‌ಸಂಗ್‌ನ ISOCELL ಬ್ರೈಟ್‌ ಸೆನ್ಸಾರ್‌ ಹೊಂದಿರಲಿದ್ದು, ಉಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ ವೈಲ್ಡ್‌ ಆಂಗಲ್ ಮತ್ತು ಮೈಕ್ರೋ ಸೆನ್ಸಾರ್‌ನಲ್ಲಿರಲಿವೆ ಎನ್ನಲಾಗಿದೆ. ಹಾಗೆಯೇ ಪಾಪ್‌ಸೆಲ್ಫಿ ಕ್ಯಾಮೆರಾ ಸಹ ಇರಲಿದೆ. ಹಾಗಾದರೇ ರಿಯಲ್ ಮಿ ಎಕ್ಸ್‌ಟಿ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊತ್ತು ಬರಲಿದೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

<strong>ಓದಿರಿ : ಕೇಬಲ್ ಮತ್ತು ಡಿ2ಎಚ್‌ ಬ್ಯುಸಿನೆಸ್‌ಗೆ ಕಂಟಕವಾದ 'ನೆಟ್‌ಫ್ಲಿಕ್ಸ್‌'!</strong>ಓದಿರಿ : ಕೇಬಲ್ ಮತ್ತು ಡಿ2ಎಚ್‌ ಬ್ಯುಸಿನೆಸ್‌ಗೆ ಕಂಟಕವಾದ 'ನೆಟ್‌ಫ್ಲಿಕ್ಸ್‌'!

ಡಿಸ್‌ಪ್ಲೇ ಹೇಗಿರಲಿದೆ

ಡಿಸ್‌ಪ್ಲೇ ಹೇಗಿರಲಿದೆ

ಬಹುನಿರೀಕ್ಷಿತ ರಿಯಲ್ ಮಿ ಎಕ್ಸ್‌ಟಿ ಸ್ಮಾರ್ಟ್‌ಫೋನ್ ಕಂಪನಿಯ ರಿಯಲ್‌ ಮಿ ಎಕ್ಸ್‌ ಸ್ಮಾರ್ಟ್‌ಫೋನ್‌ ಹೋಲುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ ರಿಯಲ್ ಮಿ ಎಕ್ಸ್‌ಟಿಯಲ್ಲಿಯೂ 6.53 ಇಂಚಿನ AMOLED ಡಿಸ್‌ಪ್ಲೇಯನ್ನು ಗ್ರಾಹಕರು ನಿರೀಕ್ಷಿಸಬಹುದಾಗಿದೆ. ಹಾಗೆಯೇ ಡಿಸ್‌ಪ್ಲೇ ಕಡಿಮೆ ಅಂಚಿನಿಂದ ಕೂಡಿರಲಿದ್ದು, ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಆಯ್ಕೆಯನ್ನು ಒಳಗೊಂಡಿರಲಿದೆ.

ಕ್ಯಾಮೆರಾ ವಿಶೇಷತೆಯೇನು

ಕ್ಯಾಮೆರಾ ವಿಶೇಷತೆಯೇನು

ಈಗಾಗಲೇ ತಿಳಿದಿರುವಂತೆ ರಿಯಲ್ ಮಿ ಎಕ್ಸ್‌ಟಿ ಸ್ಮಾರ್ಟ್‌ಫೋನ್ ಒಟ್ಟು ಮೂರು ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿರಲಿದೆ. ಉಳಿದಂತೆ ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಮತ್ತು ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್‌ ಬಲವನ್ನು ಹೊಂದಿರಲಿದೆ. ಇದರೊಂದಿಗೆ ಸೆಲ್ಫಿಗಾಗಿ ಪಾಪ್‌ಕ್ಯಾಮೆರಾ ಒಳಗೊಂಡಿರಲಿದೆ.

<strong>ಓದಿರಿ : ಸ್ಯಾಮ್‌ಸಂಗ್‌ ಫೋನ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!</strong>ಓದಿರಿ : ಸ್ಯಾಮ್‌ಸಂಗ್‌ ಫೋನ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!

ಪ್ರೊಸೆಸರ್‌ ಯಾವುದು

ಪ್ರೊಸೆಸರ್‌ ಯಾವುದು

ರಿಯಲ್‌ ಮಿ ಎಕ್ಸ್‌ಟಿ ಸ್ಮಾರ್ಟ್‌ಫೋನ್‌ ಕಂಪೆನಿಯ ಫ್ಲ್ಯಾಗ್‌ಶಿಪ್‌ ರೇಂಜ್‌ನಲ್ಲಿ ಗುರುತಿಸಿಕೊಳ್ಳಲಿದ್ದು, ಹೀಗಾಗಿ ರಿಯಲ್‌ ಮಿ ಎಕ್ಸ್‌ (ಸ್ನ್ಯಾಪ್‌ಡ್ರಾಗನ್ 710) ಸ್ಮಾರ್ಟ್‌ಫೋನ್‌ಗಿಂತಲೂ ಅಧಿಕ ಪ್ರೊಸೆಸರ್‌ ಪವರ್‌ ಒದಗಿಸಲಿದೆ. ಟೀಸ್‌ ಮಾಹಿತಿ ಪ್ರಕಾರ ರಿಯಲ್‌ ಮಿ ಎಕ್ಸ್‌ಟಿ ಫೋನ್‌ 'ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ಲಸ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಬೆಲೆ ನಿರೀಕ್ಷೆ

ಬೆಲೆ ನಿರೀಕ್ಷೆ

ರಿಯಲ್‌ ಮಿ ಎಕ್ಸ್‌ಟಿ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಲಾಂಚ್ ಆಗುವ ಸಾಧ್ಯತೆಗಳಿದ್ದು, ಹಾಗೆಯೇ ಬ್ಲ್ಯಾಕ್‌ ಮತ್ತು ಗೋಲ್ಡ್‌ ಬಣ್ಣಗಳ ಆಯ್ಕೆಗಳನ್ನು ಹೊಂದಿರುವ ನಿರೀಕ್ಷೆಗಳಿವೆ. ಇನ್ನೂ ಪ್ರೈಸ್‌ಟ್ಯಾಗ್‌ ನೋಡುವುದಾದರೇ 'ರಿಯಲ್‌ ಮಿ ಎಕ್ಸ್‌ಟಿ' ಫೋನ್‌ ಬೆಲೆಯು 'ರಿಯಲ್‌ ಮಿ ಎಕ್ಸ್‌' ಫೋನ್‌ ಗಿಂತ ಹೆಚ್ಚಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. 16,999ರೂ.ಗಳಿರಬಹುದು ಎಂದು ಅಂದಾಜಿಸಲಾಗಿದೆ.

<strong>ಓದಿರಿ : ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್!</strong>ಓದಿರಿ : ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್!

Best Mobiles in India

English summary
Realme XT smartphone expected comes with snapdragon 855+, AMOLED display. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X