Realme: ಸುನಾಮಿ ಸೃಷ್ಟಿಸಲು ಸಜ್ಜಾಗುತ್ತಿದೆಯಾ ರಿಯಲ್‌ಮಿ? ಈ ನೋಟ್ ಸರಣಿ ಫೋನ್‌ನಲ್ಲಿ 108 MP ಕ್ಯಾಮೆರಾ?
ರಿಯಲ್‌ಮಿ (Realme) ತನ್ನದೇ ಆದ ಭಿನ್ನ ಫೀಚರ್ಸ್ ಆಯ್ಕೆ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಅದರಲ್ಲೂ ಇತ್ತೀಚೆಗೆ ರೆಡ್ಮಿ, ಇನ್ಫಿನಿಕ್ಸ್ ಸೇರಿದಂತೆ ಅನೇಕ ಕಂಪೆನಿಗಳು ವಿಶೇಷ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಸ್ಮಾರ್ಟ್‌ಫೋನ್ ಗಳನ್ನು ಅನಾವರಣ ಮಾಡಿದ್ದು, ರಿಯಲ್‌ಮಿ ಸಹ ಈಗ ಸ್ಮಾರ್ಟ್‌ಫೋನ್ ವಲಯದಲ್ಲಿ ಧೂಳೆಬ್ಬಿಸಲು ಮುಂದಾಗಿದೆ.
ಹೌದು, ರಿಯಲ್‌ಮಿ ಇದೀಗ ಹೊಸ ನೋಟ್ ಸರಣಿಯನ್ನು ಕೀಟಲೆ ಮಾಡುವ ಕೆಲಸ ಮಾಡುತ್ತಿದೆ. ಅದರಂತೆ ನೋಟ್ ಸರಣಿ ಸ್ಮಾರ್ಟ್‌ಫೋನ್ (Realme Note 1 smartphone) 108 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿರಬಹುದು ಎಂದು ಹೇಳಲಾಗುತ್ತಿದ್ದು, ಈ ಫೋನ್ ನೇರವಾಗಿ ರೆಡ್ಮಿ ನೋಟ್ 13 (Redmi Note 13) ನೊಂದಿಗೆ ಸ್ಪರ್ಧಿಸುತ್ತದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ವಿಶೇಷ ಫೋನ್ ಏನೆಲ್ಲಾ ಫೀಚರ್ಸ್ ಆಯ್ಕೆ ಪಡೆದಿರಲಿದೆ?, ಇದರ ಬೆಲೆ ಎಷ್ಟಿರಬಹುದು ಎಂಬಿತ್ಯಾದಿ ಇಂಟ್ರೆಸಿಂಗ್ ಮಾಹಿತಿ ಇಲ್ಲಿದೆ ನೋಡಿ.

ರಿಯಲ್‌ಮಿ ನೋಟ್ 1 ಸರಣಿ: ರಿಯಲ್‌ಮಿ ಕೆಲವು ವಾರಗಳಿಂದ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಕೀಟಲೆ ಮಾಡಿಕೊಂಡು ಬಂದಿದೆ. ಅದರಂತೆ ಟೀಸರ್‌ಗಳು ಹೊಸ ನೋಟ್ ಸರಣಿಯ ಬಗ್ಗೆ ಸುಳಿವು ನೀಡಿದ್ದು, ಇದರ ಪ್ರಕಾರ ರೆಡ್ಮಿ ನೋಟ್ 13 ಸರಣಿಯೊಂದಿಗೆ ರಿಯಲ್‌ಮಿಯ ಈ ಮುಂಬರುವ ಫೋನ್‌ಗಳು ಪೈಫೋಟಿಗೆ ಇಳಿಯಲಿವೆ ಎಂದು ತೋರುತ್ತದೆ. ಅದಾಗ್ಯೂ ರಿಯಲ್‌ಮಿ ಇಲ್ಲಿಯವರೆಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಕೆಲವು ಲೀಕ್ ಮಾಹಿತಿ ಪ್ರಕಾರ ರಿಯಲ್‌ಮಿ ನೋಟ್ 1 ಎಂದು ಈ ಫೋನ್‌ಗೆ ಹೆಸರಿಡಲಾಗಿದೆ. ಇನ್ನು ಗಮನಿಸಬೇಕಾದ ಮಾಹಿತಿ ಏನೆಂದರೆ ರಿಯಲ್‌ಮಿ ಇದೀಗ 12 ಪ್ರೊ ಸರಣಿ ಫೋನ್‌ಗಳ ಅನಾವರಣಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಜೊತೆಗೆ ಈ ವಿಭಾಗದಲ್ಲಿ ಹೆಚ್ಚಿನ ಗಮನಹರಿಸಿದೆ. ಈ ಫೋನ್ ಜನವರಿ 29 ರಂದು ಲಾಂಚ್ ಆಗಲಿದ್ದು, ಇದೂ ಸಹ ಸ್ಮಾರ್ಟ್‌ಫೋನ್ ವಲಯದಲ್ಲಿ ಬಹಳ ಕುತೂಹಲ ಉಂಟು ಮಾಡಿದೆ.

ಇನ್ನು ಪ್ರಮುಖ ವಿಚಾರಕ್ಕೆ ಬರುವುದಾದರೆ ರಿಯಲ್‌ಮಿಯ ನೋಟ್ ಸರಣಿ ಫೋನ್‌ಗಳು ರೆಡ್ಮಿ ನೋಟ್ 13 ಮತ್ತು ಇನ್ಫಿನಿಕ್ಸ್ ನೋಟ್ 30 ನೊಂದಿಗೆ ಹೋಲಿಕೆ ಆಗಲಿವೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಫೋನ್ ಬೆಲೆ 15,000 ರೂ.ಗಳಿಂದ 20,000 ರೂ.ಗಳ ನಡುವಿನ ಬೆಲೆ ಹೊಂದಿರಲಿದೆ ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ. ಹಾಗಿದ್ರೆ ಈ ನೋಟ್ ಸರಣಿ ಫೋನ್ ಏನೆಲ್ಲಾ ಫೀಚರ್ಸ್ ಪಡೆದಿರಬಹುದು ಅನ್ನೋ ಲೀಕ್ ಮಾಹಿತಿ ನೋಡೋಣ ಬನ್ನಿ.
ರಿಯಲ್‌ಮಿ ನೋಟ್ 1: ಪ್ರಮುಖ ಸೈಟ್‌ಗಳ ಲೀಕ್ ಮಾಹಿತಿ ಪ್ರಕಾರ ಈ ಫೋನ್ 67 ಇಂಚಿನ FHD OLED ಡಿಸ್ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, ಇದು 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoCC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿರಲಿದೆ ಎಂದು ವರದಿಯಾಗಿದೆ.
ಈ ಫೋನ್ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ರೆಡ್ಮಿ ನೋಟ್ 13 ನಂತೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಅಂದರೆ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಹೊಂದಿರಲಿದೆ ಎಂದು ವರದಿಯಾಗಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆಯಲಿದೆ ಎಂದು ತಿಳಿದುಬಂದಿದೆ.

ಅಲ್ಲದೆ ಈ ಫೋನ್ 67 W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯಲಿದೆ ಎಂದು ಹೇಳಲಾಗಿದ್ದು, ಬಾಕ್ಸ್‌ನಲ್ಲಿ 67W ಚಾರ್ಜಿಂಗ್ ಅಡಾಪ್ಟರ್ ಅನ್ನು ಸಹ ನೀಡಲಾಗುತ್ತದೆ ಎನ್ನುವ ಮಾಹಿತಿ ಲೀಕ್ ವರದಿಗಳಲ್ಲಿ ಉಲ್ಲೇಖವಾಗಿದೆ.


Click it and Unblock the Notifications








