Home
ಸುದ್ದಿಜಾಲ

Realme: ಭಾರತದಲ್ಲಿ 10 ಸಾವಿರ ರೂ.ಗಳ ಅಡಿಯಲ್ಲಿ ಅತ್ಯುತ್ತಮ ಫೋನ್‌ ಲಾಂಚ್‌ಗೆ ಸಜ್ಜಾದ ರಿಯಲ್‌ಮಿ

ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphones) ಸಾಮಾನ್ಯವಾಗಿ ಕಡಿಮೆ ಬೆಲೆಯೊಂದಿಗೆ ಉತ್ತಮ ಫೀಚರ್ಸ್‌ ಪಡೆಯುವಲ್ಲಿ ಹೆಸರುವಾಸಿ. ಈ ನಡುವೆ ರಿಯಲ್‌ಮಿ ಭಾರತದಲ್ಲಿ ಸಾಕಷ್ಟು ಫೋನ್‌ಗಳನ್ನು ಲಾಂಚ್‌ ಮಾಡಿದೆ. ಅದಾಗ್ಯೂ ತನ್ನ ಮಾರುಕಟ್ಟೆಯಲ್ಲಿ ವಿಸ್ತರಣೆ ಮಾಡಿಕೊಳ್ಳುವ ಭಾಗವಾಗಿ ಭಾರತದಲ್ಲಿ ಬಜೆಟ್‌ ಬೆಲೆಯಲ್ಲಿ ಅತ್ಯುತ್ತಮ ಫೋನ್‌ ಲಾಂಚ್‌ ಮಾಡಲು ಸಜ್ಜಾಗಿದೆ.

ಹೌದು, ಭಾರತದಲ್ಲಿ ರಿಯಲ್‌ಮಿ 10 ಸಾವಿರ ರೂ.ಗಳ ಅಡಿಯಲ್ಲಿ ಅತ್ಯುತ್ತಮ ಫೋನ್‌ ಅನಾವರಣ ಮಾಡಲು ರೆಡಿಯಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ 91 ಮೊಬೈಲ್ಸ್‌ ವರದಿ ಮಾಡಿದೆ. ವರದಿಯಲ್ಲಿ ಇರುವಂತೆ ಈ ಸ್ಮಾರ್ಟ್‌ಫೋನ್ ಕನಿಷ್ಠ 6GB RAM ಅನ್ನು ಹೊಂದಿರಲಿದೆ ಎಂದು ಉಲ್ಲೇಖ ಮಾಡಿದೆ. ಹಾಗಿದ್ರೆ ಈ ಫೋನ್‌ ಯಾವಾಗ ಲಾಂಚ್‌ ಆಗಲಿದೆ?, ಇದಕ್ಕೆ ರಿಯಲ್‌ಮಿ ಏನೆಂದು ಹೆಸರಿಡಲಿದೆ?, ನಿರೀಕ್ಷಿತ ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

10 ಸಾವಿರ ರೂ.ಗಳ ಅಡಿಯಲ್ಲಿ ಅತ್ಯುತ್ತಮ ಫೋನ್‌ ಲಾಂಚ್‌ಗೆ ಸಜ್ಜಾದ ರಿಯಲ್‌ಮಿ

ಬಜೆಟ್‌ ಬೆಲೆಯಲ್ಲಿ ರಿಯಲ್‌ಮಿ ಫೋನ್‌: ರಿಯಲ್‌ಮಿ ಬಜೆಟ್‌ ಬೆಲೆಯಲ್ಲಿ ಲಾಂಚ್‌ ಮಾಡಲು ಉದ್ದೇಶಿಸಿರುವ ಫೋನ್ ರಿಯಲ್‌ಮಿ C65 (Realme C65) ಎಂದು ಊಹಿಸಲಾಗಿದೆ. ಈಗಾಗಲೇ ಹೊಸ ವರದಿಯು ಆನ್‌ಲೈನ್‌ನಲ್ಲಿ ಹೊರಹೊಮ್ಮಿದೆ. ಈ ಸ್ಮಾರ್ಟ್‌ಫೋನ್ 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿರಲಿದೆ ಎದು ತಿಳಿದುಬಂದಿದೆ. ಇನ್ನು ನಿರ್ದಿಷ್ಟ ಮಾದರಿ ಸಂಖ್ಯೆ ಅಥವಾ ಸರಣಿಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಈ ಹೊಸ ಫೋನ್ ಪೊಕೊ, ಐಟೆಲ್, ಟೆಕ್ನೋ ಹಾಗೂ ಇನ್ಫಿನಿಕ್ಸ್‌ ಫೋನ್‌ನೊಂದಿಗೆ ತೀವ್ರವಾಗಿ ಸೆಣಸಲಿದೆ.

ಇನ್ನು ಈ ಫೋನ್‌ನ ಕೆಲವು ಲೀಕ್‌ ಮಾಹಿತಿ ಪ್ರಕಾರ ಏನೆಲ್ಲಾ ಫೀಚರ್ಸ್‌ ಆಯ್ಕೆ ಪಡೆದಿದೆ ಎಂದು ನೋಡುವುದಾದರೆ ಅದರಲ್ಲೂ ರಿಯಲ್‌ಮಿ ಉಪಾಧ್ಯಕ್ಷ ಚೇಸ್ ಕ್ಸು ಅವರ ಇತ್ತೀಚೆಗೆ ಟೀಸರ್ ಗಮನಿಸಿದ್ರೆ ರಿಯಲ್‌ಮಿ C65 ನೀಲಿ ಬಣ್ಣದ ವೇರಿಯಂಟ್‌ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಜೊತೆಗೆ ರಿಯರ್‌ನಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದ್ದು, ಡ್ಯುಯಲ್ ಕ್ಯಾಮೆರಾ ಸೆನ್ಸರ್‌ ಮತ್ತು ಎಲ್ಇಡಿ ಫ್ಲ್ಯಾಶ್‌ ಅನ್ನು ಹೊಂದಿದೆ.

10 ಸಾವಿರ ರೂ.ಗಳ ಅಡಿಯಲ್ಲಿ ಅತ್ಯುತ್ತಮ ಫೋನ್‌ ಲಾಂಚ್‌ಗೆ ಸಜ್ಜಾದ ರಿಯಲ್‌ಮಿ

ಇದರ ಜೊತೆಗೆ ಈ ರಿಯಲ್‌ಮಿ C65 ನ ರಿಯರ್ ಪ್ಯಾನಲ್‌ ಬ್ರೈಟ್‌ನೆಸ್‌ ಫಿನಿಶ್‌ನೊಂದಿಗೆ ಕಾಣಿಸಿಕೊಳ್ಳಲಿದ್ದು, ಫೋನ್‌ ಅನ್ನು ಪ್ರವೇಶಿಸಲು ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್‌ ಆಯ್ಕೆ ನೀಡಲಾಗಿದೆ. ಈ ಮೂಲಕ ಈ ಫೋನ್ ವಿನ್ಯಾಸವು ಪ್ರಸ್ತುತ ಸ್ಯಾಮ್‌ಸಂಗ್‌ ಗ್ಯಾಲಕ್ಸಿ (Samsung Galaxy) ಸ್ಮಾರ್ಟ್‌ಫೋನ್‌ಗಳಿಂದ ಸ್ಫೂರ್ತಿ ಪಡೆದಂತೆ ಕಾಣುತ್ತಿದೆ. ಜೊತೆಗೆ ರಿಯಲ್‌ಮಿ ಸಿ ಸರಣಿ ಶ್ರೇಣಿಗೆ ತಾಜಾ ಸೌಂದರ್ಯವನ್ನು ಪರಿಚಯಿಸಲಿದೆ.

ಅಧಿಕೃತವಾಗಿ ದೃಢೀಕರಿಸದಿದ್ದರೂ ರಿಯಲ್‌ಮಿ C65 ಸ್ಮಾರ್ಟ್‌ಫೋನ್ 4G LTE ಕನೆಕ್ಟಿವಿಟಿ ಬೆಂಬಲ ಪಡೆದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ FCC ಪಟ್ಟಿಯ ಪ್ರಕಾರ, ಇದು ಆಂಡ್ರಾಯ್ಡ್‌ 14 ಆಪರೇಟಿಂಗ್ ಸಿಸ್ಟಮ್ (Android 14) ಅನ್ನು ಆಧರಿಸಿದ ರಿಯಲ್‌ಮಿ UI 5.0 ನಲ್ಲಿ ರನ್ ಆಗುವ ನಿರೀಕ್ಷೆಯಿದೆ. ಇದರ ಜೊತೆಗೆ ಈ ಫೋನ್ 4,880mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.

10 ಸಾವಿರ ರೂ.ಗಳ ಅಡಿಯಲ್ಲಿ ಅತ್ಯುತ್ತಮ ಫೋನ್‌ ಲಾಂಚ್‌ಗೆ ಸಜ್ಜಾದ ರಿಯಲ್‌ಮಿ

ಹಾಗೆಯೇ TUV ಲಿಸ್ಟ್‌ನಲ್ಲಿ ಉಲ್ಲೇಖ ಮಾಡಿದಂತೆ ಈ ಸ್ಮಾರ್ಟ್‌ಫೋನ್ 45W ಸೂಪರ್‌ವೂಕ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದ್ದು, FV-5 ನಲ್ಲಿನ ಲಿಸ್ಟ್‌ನಿಂದ ಇದರ ಕ್ಯಾಮೆರಾ ಫೀಚರ್ಸ್‌ ಲೀಕ್‌ ಆಗಿವೆ. ಅಂದರೆ ಈ ಫೋನ್ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಆಯ್ಕೆ ಪಡೆದಿರಿದ್ದು, 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದಿರಲಿದೆ ಎಂದು ತೋರುತ್ತದೆ. ಒಟ್ಟಾರೆ ಮುಂಬರುವ ವಾರಗಳಲ್ಲಿ ರಿಯಲ್‌ಮಿ C65 ಸೇರಿದಂತೆ ಹೊಸ ಡಿವೈಸ್‌ಗಳ ಕುರಿತು ಅಧಿಕೃತ ವಿವರಗಳನ್ನು ರಿಯಲ್‌ಮಿ ಪ್ರಕಟಿಸಲಿದೆ.

Best Mobiles in India

English summary
Realme is planning to launch Realme C65 in India under Rs 10000. This phone will have 256 GB internal storage option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+