ರಿಯಲ್‌ಮಿ V13 5G ಫೋನ್‌ ಅನಾವರಣ!..ಫೀಚರ್ಸ್‌ ಹೇಗಿವೆ?..ಬೆಲೆ ಎಷ್ಟು?

|

ಪ್ರತಿಷ್ಠಿತ ಮೊಬೈಲ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ರಿಯಲ್‌ ಮಿ ಸಂಸ್ಥೆಯು ಈಗ ಹೊಸದಾಗಿ ರಿಯಲ್‌ ಮಿ ರಿಯಲ್‌ಮಿ V13 5G ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಆಗಿದೆ. ಈ ನೂತನ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸಿದೆ.

ಕಂಪನಿಯು

ಹೌದು, ರಿಯಲ್‌ ಮಿ ಕಂಪನಿಯು ಚೀನಾ ಮಾರುಕಟ್ಟೆಯಲ್ಲಿ ತನ್ನ ರಿಯಲ್‌ಮಿ V13 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. 8GB + 128GB ಮತ್ತು 8GB + 256GB ಸ್ಟೋರೇಜ್‌ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಇದರೊಂದಿಗೆ ಆಕ್ಟಾ ಕೋರ್ ಮೀಡಿಯಾ ಟೆಕ್ Dimensity 700 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಆಂಡ್ರಾಯ್ಡ್ 11 ಓಎಸ್‌ ಸಪೋರ್ಟ್‌ ಹೊಂದಿದೆ. ಡಾಲ್ಬಿ ಸೌಂಡ್‌ ಬೆಂಬಲವನ್ನು ಪಡೆದಿದೆ. ಇನ್ನುಳಿದಂತೆ ರಿಯಲ್‌ಮಿ V13 5G ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ರಿಯಲ್‌ಮಿ V13 5G ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಫೋನ್ 6.5- ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ 90Hz ರೀಫ್ರೇಶ್ ರೇಟ್ ಹೊಂದಿದ್ದು, 180Hz ಟಚ್ ರೆಸ್ಪಾನ್‌ ರೇಟ್ ಹೊಂದಿದೆ. ಈ ಫೋನಿನ ಡಿಸ್‌ಪ್ಲೇಯು 20:9 ಅನುಪಾತವನ್ನು ಪಡೆದಿದೆ.

ಪ್ರೊಸೆಸರ್‌ ಸಾಮರ್ಥ್ಯವೇನು

ಪ್ರೊಸೆಸರ್‌ ಸಾಮರ್ಥ್ಯವೇನು

ರಿಯಲ್‌ಮಿ V13 5G ಸ್ಮಾರ್ಟ್‌ಫೋನ್‌‌ ಮೀಡಿಯಾ ಮೀಡಿಯಾ ಟೆಕ್ Dimensity 700 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI 2.0 ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 8GB + 128GB ಮತ್ತು 8GB + 256GB ಆಯ್ಕೆ ಹೊಂದಿದೆ ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌

ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌

ರಿಯಲ್‌ಮಿ V13 5G ಸ್ಮಾರ್ಟ್‌ಫೋನ್‌‌ ಹಿಂಬದಿಯಲ್ಲಿ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದು ಇನ್ನು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ರಿಯಲ್‌ಮಿ V13 5G ಸ್ಮಾರ್ಟ್‌ಫೋನ್‌‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಈ ಫೋನ್ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5 ಜಿ, 4 ಜಿ ಎಲ್ ಟಿಇ, ವೈ-ಫೈ, ಬ್ಲೂಟೂತ್, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ. ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಸಹ ಇದೆ. ಈ ಫೋನ್ 162.5x74.8x8.5mm ಸುತ್ತಳತೆಯನ್ನು ಹೊಂದಿದ್ದು, 185ಗ್ರಾಂ ತೂಕವನ್ನು ಪಡೆದಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ?

ಬೆಲೆ ಎಷ್ಟು ಮತ್ತು ಲಭ್ಯತೆ?

ರಿಯಲ್‌ಮಿ V13 5G ಸ್ಮಾರ್ಟ್‌ಫೋನ್‌‌ 8GB + 128GB ವೇರಿಯಂಟ್ ಬೆಲೆಯು ಚೀನಾದಲ್ಲಿ CNY 1,599 (ಭಾರತದಲ್ಲಿ ಅಂದಾಜು 17,900ರೂ. ಎನ್ನಲಾಗಿದೆ) ಅದೇ ರೀತಿ 8GB + 256GB ಸ್ಟೋರೇಜ್ ವೇರಿಯಂಟ್ ಬೆಲೆಯು ಚೀನಾದಲ್ಲಿ CNY 1,799 (ಭಾರತದಲ್ಲಿ ಅಂದಾಜು 20,100ರೂ. ಎನ್ನಲಾಗಿದೆ). ಇನ್ನು ಈ ಫೋನ್ ಬುದೂ ಮತ್ತು ಅಜುರೆ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಭಾರತದ ಮಾರುಕಟ್ಟೆಗೆ ಯಾವಾಗ ಎಂಟ್ರಿ ನೀಡಲಿದೆ ಎನ್ನುವ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ಹೊರಹಾಕಿಲ್ಲ.

Best Mobiles in India

English summary
Realme V13 5G comes at a starting price of CNY 1,599 (roughly Rs. 17,900) and is currently limited to China.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X