Realme: ರಿಯಲ್‌ಮಿ ವ್ಯಾಲೆಂಟೈನ್ಸ್ ಡೇ ಸೇಲ್ ಘೋಷಣೆ! ಈ ಎಲ್ಲಾ ಫೋನ್‌ಗಳಿಗೆ ಬೊಂಬಾಟ್ ಆಫರ್
ರಿಯಲ್‌ಮಿ (Realme) ತನ್ನ ಭಿನ್ನ ಫೀಚರ್ಸ್ ಆಯ್ಕೆಯ ಫೋನ್‌ಗಳ ಮೂಲಕ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ. ಅದರಲ್ಲೂ ಕೆಲವು ದಿನಗಳ ಹಿಂದೆ ರಿಯಲ್‌ಮಿ 12 ಸರಣಿ (Realme 12 series) ಫೋನ್‌ಗಳನ್ನು ಅನಾವರಣ ಮಾಡುವ ಮೂಲಕ ಸ್ಮಾರ್ಟ್‌ಫೋನ್ ವಲಯದಲ್ಲಿ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ನಡುಕ ಹುಟ್ಟಿಸಿದೆ. ಇದಾದ ಕೆಲವೇ ದಿನಗಳ ಅಂತದಲ್ಲಿ ಅಂದರೆ ಈಗ ರಿಯಲ್‌ಮಿ ವ್ಯಾಲೆಂಟೈನ್ಸ್ ಡೇ ಸೇಲ್ (Realme Valentine's Day Sale) ಘೋಷಣೆ ಮಾಡಿದೆ.
ಹೌದು, ರಿಯಲ್‌ಮಿ ಇದೀಗ ವ್ಯಾಲೆಂಟೈನ್ಸ್ ಡೇ ಸೇಲ್ ಅನ್ನು ಘೋಷಣೆ ಮಾಡಿದೆ. ಇದರ ಜನಪ್ರಿಯ ನಾರ್ಜೋ (Narzo) ಸರಣಿಯಲ್ಲಿ ಹಲವಾರು ಕೊಡುಗೆಗಳನ್ನು ಈ ಮೂಲಕ ನೀಡಲಾಗಿದ್ದು, ಇದರೊಂದೊಗೆ ಬ್ಯಾಂಕ್ ಕೊಡುಗೆಗಳು, ಕೂಪನ್‌ಗಳು ಮತ್ತು ವಿವಿಧ ಮಾಡೆಲ್‌ಗಳ ಮೇಲೆ ವಿಶೇಷ ಆಫರ್ ಅನ್ನು ನೀಡಲಾಗುತ್ತಿದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಫೋನ್‌ಗಳು ಏನೆಲ್ಲಾ ಆಫರ್ ಪಡೆದಿವೆ. ನಿಮ್ಮ ಸಂಗಾತಿಗೆ ಗಿಫ್ಟ್ ನೀಡಲು ಯಾವ ಫೋನ್ ಬೆಸ್ಟ್ ಅನ್ನೋದನ್ನು ತಿಳಿಯಿರಿ.

ರಿಯಲ್‌ಮಿ ವ್ಯಾಲೆಂಟೈನ್ಸ್ ಡೇ ಸೇಲ್: ನಾಳೆಯಿಂದ ಈ ಸೇಲ್ ಲೈವ್ ಆಗಲಿದ್ದು, ಇದರಲ್ಲಿ ನಾರ್ಜೋ 60 ಪ್ರೊ ಸರಣಿ 5G, ರಿಯಲ್‌ಮಿ ನಾರ್ಜೋ 60x 5G, ರಿಯಲ್‌ಮಿ ನಾರ್ಜೋ N55 ಸ್ಮಾರ್ಟ್‌ಫೋನ್‌ಗಳು (Narzo 60 Pro Series 5G, Realme Narzo 60x 5G, Realme Narzo N55 Smartphones) ಸೇರಿದಂತೆ ಇನ್ನೂ ಹೆಚ್ಚಿನ ಫೋನ್‌ಗಳಲ್ಲಿ ಉತ್ತಮ ಆಫರ್ ಪಡೆಯಬಹುದಾಗಿದೆ. ಈ ವಿಶೇಷ ಸೇಲ್ ಫೆಬ್ರವರಿ 12 ರವರೆಗೆ ಅಮೆಜಾನ್ ಮತ್ತು ರಿಯಲ್‌ಮಿ ನಲ್ಲಿ ಲೈವ್ ಆಗಿರಲಿದೆ.
ರಿಯಲ್‌ಮಿ ನಾರ್ಜೋ 60 ಪ್ರೊ 5G : ಈ ಸ್ಮಾರ್ಟ್‌ಫೋನ್‌ನ 12GB+1TB ರೂಪಾಂತರಕ್ಕಾಗಿ 29,999 ರೂ.ಗಳ ಬೆಲೆ ಇದ್ದು, 2,000 ರೂ.ಗಳ ಹೆಚ್ಚುವರಿ ಬ್ಯಾಂಕ್ ಕೊಡುಗೆಯೊಂದಿಗೆ 27,999 ರೂ.ಗಳಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ. ಹಾಗೆಯೇ 12GB+256GB ವೇರಿಯಂಟ್ ಫೋನ್‌ಗೆ 26,999 ರೂ.ಗಳ ಬೆಲೆ ಇದ್ದು 4,000 ರೂ. ಬೆಲೆಯ ಕೂಪನ್ ರಿಯಾಯಿತಿಯನ್ನು ಈ ಫೋನ್‌ಗೆ ಪಡೆಯಬಹುದಾಗಿದೆ, ಅಷ್ಟೇ ಅಲ್ಲದೆ 23,999 ಬೆಲೆಯ ಅದೇ 8GB+128GB ವೇರಿಯಂಟ್ ಫೋನ್ ಮೇಲೂ 2,000 ರೂ.ಗಳ ಬ್ಯಾಂಕ್ ಆಫ್ ಲಭ್ಯ ಇದೆ.

ರಿಯಲ್‌ಮಿ ನಾರ್ಜೋ 60: ಈ ಫೋನ್ ನಲ್ಲಿ 8GB+128GB ವೇರಿಯಂಟ್ ಆಯ್ಕೆಯ ಫೋನ್‌ಗೆ 14,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಇದರ ಸಾಮಾನ್ಯ ಬೆಲೆ 17,999 ರೂ.ಗಳಾಗಿದೆ. ಜೊತೆಗೆ 1,000 ರೂ.ಗಳ ಹೆಚ್ಚುವರಿ ಬ್ಯಾಂಕ್ ಕೊಡುಗೆ ಸಹ ಇದರಲ್ಲಿ ಲಭ್ಯ ಇರಲಿದೆ ಮತ್ತು 8GB+256GB ವೇರಿಯಂಟ್ ಆಯ್ಕೆಯ ಫೋನ್‌ಗೆ 2,000 ರೂ.ಗಳ ಆಪರ್ ಹಾಗೂ 1,000 ರೂ. ಗಳ ಬ್ಯಾಂಕ್ ಕೊಡುಗೆಯ ನಂತರ 16,999 ರೂ.ಗಳನ್ನು ಪಾವತಿ ಮಾಡಿ ಖರೀದಿ ಮಾಡಬಹುದಾಗಿದೆ.
ರಿಯಲ್‌ಮಿ ನಾರ್ಜೋ 60x 5G: ಈ ಸ್ಮಾರ್ಟ್‌ಫೋನ್ ಸಹ ನಿಮಗೆ ಅಗ್ಗದ ದರದಲ್ಲಿ ಲಭ್ಯ ಇರಲಿದೆ. ಅಂದರೆ 6GB+128GB ವೇರಿಯಂಟ್ 11,999 ರೂ.ಗಳ ಆಫರ್ ಬೆಲೆಯಲ್ಲಿ ಲಭ್ಯ ಇದ್ದರೆ 4GB + 128GB ವೇರಿಯಂಟ್ ಫೋನ್ 10,999 ರೂ.ಗಳ ಆಫರ್ ಬೆಲೆಯಲ್ಲಿ ಲಭ್ಯ ಇದೆ. ಇವುಗಳ ಮೂಲ ಬೆಲೆ ಕ್ರಮವಾಗಿ 14,499 ರೂ.ಗಳು ಹಾಗೂ 12,999ರೂ.ಗಳ ಬೆಲೆ ಹೊಂದಿದೆ.

ರಿಯಲ್‌ಮಿ ನಾರ್ಜೋ N55 ಮತ್ತು N53: ಇನ್ನು ನಾರ್ಜೋ N55 6GB+128GB ವೇರಿಯಂಟ್ ಮೂಲತಃ 12,999 ರೂ.ಗಳ ಬೆಲೆ ಹೊಂದಿದ್ದು, 4,000ರೂ.ಗಳ ಗಮನಾರ್ಹ ಬೆಲೆ ಇಳಿಕೆ ನಂತರ 8,999 ರೂ.ಗಳ ಆಫರ್ ಬೆಲೆಯಲ್ಲಿ ಲಭ್ಯ ಇದೆ. ಇದರೊಂದಿಗೆ ನಾರ್ಜೋ N53 ಫೋನ್‌ನ 4GB+64GB ಮತ್ತು 8GB+128GB ವೇರಿಯಂಟ್ ಕ್ರಮವಾಗಿ ಆಕರ್ಷಕ ಕೊಡುಗೆಗಳು ಮತ್ತು ಕೂಪನ್‌ಗಳೊಂದಿಗೆ 7,499 ರೂ.ಗಳು ಮತ್ತು 9,499 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ.


Click it and Unblock the Notifications








