ಬಂಪರ್ ಆಫರ್: ಈ ಫೋನ್ ಖರೀದಿಸಿದ್ರೆ 5 ಸಾವಿರ ಮೌಲ್ಯದ ವಾಚ್ ಫ್ರೀ...
ಈ ಮೊದಲು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವಾಗ ಕೊಡುಗೆ ಬೆಲೆ ಮೂಲಕ ಹಾಗೂ ಸುಧಾರಿತ ಫೀಚರ್ಸ್ ಬಳಕೆದಾರರನ್ನು ಆಕರ್ಷಿಸುತ್ತಿದ್ದವು. ಆದರೆ, ಇದೀಗ ರಿಯಲ್‌ಮಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಡಬಲ್ ಧಮಾಕಾ ನೀಡಲು ಸಜ್ಜಾಗಿದೆ. ಅಂದರೆ ಈ ಫೋನ್ ಖರೀದಿ ಮೇಲೆ ಐದು ಸಾವಿರದ ವರೆಗೂ ಬೆಲೆ ಹೊಂದಿರುವ ಸ್ಮಾರ್ಟ್‌ವಾಚ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಹೌದು, ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಖಂಡಿತಾ ಬಂಪರ್ ಆಫರ್. ಯಾಕೆಂದರೆ ಫೋನ್‌ನ ಜೊತೆಗೆ ಸ್ಮಾರ್ಟ್‌ವಾಚ್ ಅನ್ನೂ ಸಹ ಕೊಡುಗೆಯಾಗಿ ನೀಡಲಾಗುತ್ತಿದೆ. ಅದೂ ಸಹ 5 ಸಾವಿರ ರೂಪಾಯಿವರೆಗೆ ಬೆಲೆ ಹೊಂದಿರುವ ವಾಚ್. ಹಾಗಿದ್ರೆ, ಯಾವ ಫೋನ್ ಖರೀದಿ ಮಾಡಿದ್ರೆ ಯಾವ ವಾಚ್ ಲಭ್ಯ?, ಇದನ್ನು ಪಡೆದುಕೊಳ್ಳುವುದು ಹೇಗೆ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ ಫೋನ್ ಲಾಂಚ್: ರಿಯಲ್ ಮಿ ಸಂಸ್ಥೆಯು ರಿಯಲ್‌ಮಿ 11 ಪ್ರೊ( Realme 11 Pro) ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಜೂನ್ 8 ರಂದು ಲಾಂಚ್ ಮಾಡುತ್ತಿದ್ದು, ಈ ಫೋನ್ ಖರೀದಿಯ ಮೇಲೆ 5,000 ಮೌಲ್ಯದ ಉಚಿತ ಸ್ಮಾರ್ಟ್ ವಾಚ್ ಕೂಡ ನೀಡಲಾಗುತ್ತಿದೆ ಎಂದು ಘೋಷಣೆ ಮಾಡಲಾಗಿದೆ. ಈ ಫೋನ್ ಈ ಸರಣಿಯಲ್ಲಿ ಕಂಪೆನಿಯು ರಿಯಲ್‌ಮಿ 11ಪ್ರೊ(Realme 11 Pro) ಮತ್ತು ರಿಯಲ್‌ಮಿ 11 ಪ್ರೊ+(Realme 11 Pro+)ಅನ್ನು ಲಾಂಚ್ ಮಾಡುತ್ತಿದೆ.
ಈ ಸ್ಮಾರ್ಟ್‌ಫೋನ್‌ನ ಹಲವಾರು ಲೀಕ್ ಫೀಚರ್ಸ್‌ಗಳು ಈಗಾಗಲೇ ಹಲವು ಜನರಿಗೆ ತಿಳಿದಿದೆ. ಈ ಮೂಲಕ ನೀವು ಈ ಫೋನ್ ಆಫ್‌ಲೈನ್ ಮುಂಗಡ-ಆರ್ಡರ್ ಬುಕಿಂಗ್‌ನಲ್ಲಿ ಈ ಉಚಿತ ಉಡುಗೊರೆ ಪಡೆದುಕೊಳ್ಳಬಹುದಾಗಿದೆ. ಅಂದರೆ ರಿಯಲ್‌ಮಿ 11 ಪ್ರೊ ಫೋನ್‌ಗಳನ್ನು ಆಫ್‌ಲೈನ್‌ನಲ್ಲಿ ಪೂರ್ವ-ಬುಕ್ ಮಾಡಿದ್ರೆ 4,499 ರೂ. ಮೌಲ್ಯದ ರಿಯಲ್‌ಮಿ ವಾಚ್ 2 ಪ್ರೊ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಇದಲ್ಲದೆ ಬಳಕೆದಾರರು ಆಕ್ಸಿಡೆಂಟಲ್ ವಾರಂಟಿ, ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಮತ್ತು ವಿಸ್ತೃತ ವಾರಂಟಿ ಯೋಜನೆಗಳನ್ನು ಖರೀದಿಸುವ ಆಯ್ಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಬ್ಯಾಂಕ್ ಆಫರ್‌ಗಳು ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಗಳನ್ನು ಸಹ ಹೈಲೈಟ್ ಮಾಡಲಾಗಿದೆ. ಬಳಕೆದಾರರು ಫ್ಲಿಪ್‌ಕಾರ್ಟ್‌ನಿಂದ 11 ಪ್ರೊ ಸರಣಿಯನ್ನು ಮುಂಗಡವಾಗಿ ಆರ್ಡರ್ ಮಾಡಬಹುದು.

ರಿಯಲ್‌ಮಿ 11 ಪ್ರೊ ಫೀಚರ್ಸ್: ಈ ಫೋನ್ 6.7 ಇಂಚಿನ ಕರ್ವ್ಡ ಅಮೋಲೆಡ್ ನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿರಲಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿವೆ. ಜೊತೆಗೆ 950nits ಗರಿಷ್ಠ ಬ್ರೈಟ್‌ನೆಟ್ ಆಯ್ಕೆ ಇದರಲ್ಲಿದೆ ಎನ್ನಲಾಗಿದೆ. ಜೊತೆಗೆ ಮಾಲಿ G68 GPU ನೊಂದಿಗೆ ಮೀಡಿಯಾಟೆಕ್ ಡೈಮೆನ್ಸಿಟಿ 7050 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿವೆ. ಇದರೊಂದಿಗೆ 12GB RAM ಮತ್ತು 1TB ವರೆಗೆ ಇಂಟರ್ ಸ್ಟೋರೇಜ್ ಆಯ್ಕೆ ನೀಡಲಾಗುತ್ತಿದೆ.
ರಿಯಲ್‌ಮಿ 11 ಪ್ರೊ+ನಲ್ಲಿ 200MP,8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 2MPಮ್ಯಾಕ್ರೋ ಸೆನ್ಸರ್ ಆಯ್ಕೆ ನೀಡಲಾಗಿದೆ ಎಂದು ತಿಳಿದುಬಂದಿದ್ದು, ರಿಯಲ್‌ಮಿ 11 ಪ್ರೊ ಫೋನ್‌ನಲ್ಲಿ 100MP ಪ್ರಮುಖ ಕ್ಯಾಮೆರಾ, 2MP ಮ್ಯಾಕ್ರೋ ಸೆನ್ಸರ್ ಆಯ್ಕೆ ಇರಲಿದೆ ಎಂದು ತಿಳಿದುಬಂದಿದೆ. ಹಾಗೂ ಸೆಲ್ಫಿ ಉದ್ದೇಶಕ್ಕಾಗಿ ರಿಯಲ್‌ಮಿ 11ಪ್ರೊ + ನಲ್ಲಿ 32MP ಕ್ಯಾಮೆರಾವನ್ನು ಮತ್ತು ರಿಯಲ್‌ಮಿ 11 ಪ್ರೊ ನಲ್ಲಿ 16MP ಕ್ಯಾಮೆರಾ ಸೆನ್ಸರ್ ಆಯ್ಕೆ ಊಹಿಸಲಾಗಿದೆ. ಇದರೊಂದಿಗೆ 4870mAhಸಾಮರ್ಥ್ಯದ ಬ್ಯಾಟರಿ ಆಯ್ಕೆ ಇರಲಿದೆ ಎನ್ನಲಾಗಿದೆ.

ಇನ್ನು ಈ ರಿಯಲ್‌ಮಿ 11 ಪ್ರೊ ಸರಣಿಯ ಬೆಲೆ ಬಗ್ಗೆ ತಿಳಿಯುವುದಾದರೆ ವರದಿಗಳ ಪ್ರಕಾರ, ರಿಯಲ್‌ಮಿ 11 ಪ್ರೊ 22,000ರೂ.ಗಳಿಂದ ರಿಂದ 23,000ರೂ.ಗಳ ಬೆಲೆ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ರಿಯಲ್‌ಮಿ 11 ಪ್ರೊ+ ಸ್ಮಾರ್ಟ್‌ಫೋನ್ 28,000ರೂ.ಗಳು ಅಥವಾ 29,000 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ ಈ ಫೋನ್‌ಗಳ ಕೆಲವು ಫೀಚರ್ಸ್ ಅನ್ನು ತಿಳಿಯೋಣ ಬನ್ನಿ.


Click it and Unblock the Notifications








