ಇಂದು ರಿಯಲ್‌ಮಿ ವಾಚ್ S ಫಸ್ಟ್‌ ಸೇಲ್‌: ಬೆಲೆ ಎಷ್ಟು ಗೊತ್ತಾ?

|

ಸದ್ಯ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್‌ ವಾಚ್‌ಗಳು ಹೆಚ್ಚು ಟ್ರೆಂಡ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ರಿಯಲ್‌ ಮಿ ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ರಿಯಲ್‌ ಮಿ ವಾಚ್ s ಈಗಾಗಲೇ ಗ್ರಾಹಕರ ಗಮನ ಸೆಳೆದಿದ್ದು, ಈ ವಾಚ್ ಭಾರತದಲ್ಲಿ ಇಂದು ಫಸ್ಟ್‌ ಸೇಲ್ ಶುರು ಮಾಡಲಿದೆ. ಫ್ಲಿಪ್‌ಕಾರ್ಟ್‌ ತಾಣದಲ್ಲಿ ಹಾಗೂ ರಿಯಲ್‌ ಮಿ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಹಕರ ಖರೀದಿಸಬಹುದಾಗಿದೆ.

ಸಂಸ್ಥೆಯ

ಹೌದು, ರಿಯಲ್‌ ಮಿ ಸಂಸ್ಥೆಯ ರಿಯಲ್‌ ಮಿ ವಾಚ್ s ಡಿವೈಸ್‌ ಆಕರ್ಷಕ ಫೀಚರ್ಸ್‌ಗಳಿಂದ ಟ್ರೆಂಡಿ ಲುಕ್ ಪಡೆದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 15 ದಿನಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ. ಇದರೊಂದಿಗೆ ಹೃದಯ ಬಡಿತವನ್ನು ಅಳೆಯಲು ಪಿಪಿಜಿ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಈ ವಾಚ್‌ ಬೆಲೆಯು 4,999ರೂ.ಗಳು ಆಗಿದೆ. ಹಾಗಾದರೇ ರಿಯಲ್‌ ಮಿ ವಾಚ್ s ಡಿವೈಸ್‌ನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವೃತ್ತಾಕಾರದ

ರಿಯಲ್‌ಮಿ ವಾಚ್ S 1.3 ಇಂಚಿನ ವೃತ್ತಾಕಾರದ ಡಿಸ್‌ಪ್ಲೇ ಹೊಂದಿದ್ದು, ಇದು 600 ನಿಟ್ಸ್‌ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ವಾಚ್‌ ಆಟ್ರೋಮ್ಯಾಟಿಕ್‌ ಬ್ರೈಟ್‌ನೆಶ್‌ ಸೆನ್ಸಾರ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 3 ಅನ್ನು ಸಹ ಅಳವಡಿಸಲಾಗಿದೆ. ಇದಲ್ಲದೆ ಈ ವಾಚ್ ಎಸ್ ರಿಯಲ್‌ಮಿ ಸ್ವಾಮ್ಯದ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಅಲ್ಲದೆ ರಿಯಲ್‌ಮಿ ವಾಚ್ ಎಸ್ ಹೃದಯ ಬಡಿತವನ್ನು ಅಳೆಯಲು ಪಿಪಿಜಿ ಸೆನ್ಸಾರ್‌ ಅನ್ನು ಹೊಂದಿದ್ದು, ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಫೀಚರ್ಸ್‌ ಅನ್ನು ಒಳಗೊಂಡಿದೆ.

ವಾಚ್

ಇನ್ನು ಈ ವಾಚ್ ರಕ್ತದ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಮೀಸಲಾದ ಸೆನ್ಸಾರ್‌ ಅನ್ನು ಸಹ ಹೊಂದಿದೆ. ಜೊತೆಗೆ ರಿಯಲ್‌ಮಿ ವಾಚ್ ಎಸ್‌ನಲ್ಲಿ 16 ಕ್ರೀಡಾ ವಿಧಾನಗಳನ್ನು ಸೇರಿಸಲಾಗಿದ್ದು, ಇದರಲ್ಲಿ ಸ್ಟೇಷನರಿ ಬೈಕ್, ಕ್ರಿಕೆಟ್, ಒಳಾಂಗಣ ರನ್, ಹೊರಾಂಗಣ ಸೈಕಲ್, ಸಾಮರ್ಥ್ಯ ತರಬೇತಿ, ಫುಟ್‌ಬಾಲ್, ಯೋಗ, ಎಲಿಪ್ಟಿಕಲ್ ವರ್ಕ್‌ಔಟ್‌‌ಗಳು ಮತ್ತು ಹೆಚ್ಚಿನವು ಸೇರಿವೆ. ಇದು ನಿದ್ರೆಯ ಮಾದರಿಗಳನ್ನು ಸಹ ಟ್ರ್ಯಾಕ್ ಮಾಡಲಿದೆ. ಅಲ್ಲದೆ ಐಡಲ್ ಜ್ಞಾಪನೆಗಳನ್ನು ಸಹ ಮಾಡುತ್ತದೆ.

ಬ್ಯಾಟರಿ

ರಿಯಲ್‌ಮಿ ವಾಚ್ S ಸ್ಮಾರ್ಟ್‌ಫೋನ್‌ಗಳಿಂದ ಸಹ ಅಧಿಸೂಚನೆಗಳನ್ನು ತೋರಿಸಬಹುದು ಎನ್ನಲಾಗಿದೆ. ಅಲ್ಲದೆ ಒಳಬರುವ ಕರೆಗಳನ್ನು ತಿರಸ್ಕರಿಸಲು ಮತ್ತು ನಿಮ್ಮ ಫೋನ್ ಅನ್ನು ಅನ್ಲಾಕ್ ಮಾಡಲು ಸಹ ಇದು ಬಳಕೆದಾರರಿಗೆ ಅನುಮತಿಸುತ್ತದೆ. ಇನ್ನು ಈ ಅಪ್ಲಿಕೇಶನ್ ಮೂಲಕ ಅಧಿಕೃತವಾಗಿ ಲಭ್ಯವಿರುವ 100 ವಾಚ್ ಫೇಸ್‌ಗಳನ್ನು ಬಳಕೆದಾರರು ಆಯ್ಕೆ ಮಾಡಬಹುದಾಗಿದೆ. ಇನ್ನು ಬ್ಯಾಟರಿ ಬಾಳಿಕೆ ವಿಚಾರದಲ್ಲಿ ಇದು 390mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 15 ದಿನಗಳವರೆಗೆ ಬಾಳಿಕೆಯನ್ನು ನೀಡಲಿದೆ.

Best Mobiles in India

English summary
Realme Watch S was launched alongside the Watch S Pro last week and it will be on sale today.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X